Gas stove cleaning: ಮಹಿಳೆಯರಿಗೆ ಶುಚಿ ರುಚಿಯಾಗಿ ಅಡುಗೆ ತಯಾರಿಸಿ ಮನೆಯವರ ಮನ ಗೆಲ್ಲುವ ಜೊತೆಗೆ ಅಡುಗೆ ಕೋಣೆಯನ್ನು ಕ್ಲೀನ್ ಮಾಡುವುದು ಅದಕ್ಕಿಂತ ದೊಡ್ದ ಟಾಸ್ಕ್ !! ಅದರಲ್ಲಿಯೂ ಜಿಡ್ಡು ಗಟ್ಟಿದ ಗ್ಯಾಸ್ ಸ್ಟವ್ ಬರ್ನರ್ ಅನ್ನು ಹೇಗಪ್ಪಾ ಕ್ಲೀನ್ ಮಾಡೋದು(Cleaning Gas Stove)ಎಂದು ನೀವು ಯೋಚಿಸುತ್ತಿದ್ದರೆ ಇಲ್ಲಿದೆ ನೋಡಿ ಸಿಂಪಲ್ ಟ್ರಿಕ್ಸ್!! ಜಸ್ಟ್ ಹೀಗೆ ಮಾಡಿ ಸಾಕು!! ಜಿಡ್ಡು ಗಟ್ಟಿದ ಗ್ಯಾಸ್ ಸ್ಟವ್ ಬರ್ನರ್ ಅನ್ನು(Kitchen Hacks)ಫಳ ಫಳ ಹೊಳೆಯುವ ಹಾಗೆ ಮಾಡಿ!
ದಿನಂಪ್ರತಿ ಅಡುಗೆ ಮನೆಯಲ್ಲಿ ಗ್ಯಾಸ್ ಸ್ಟೌ ಬಳಕೆ ಮಾಡಲಾಗುತ್ತದೆ. ಮುಂಜಾನೆಯ ಕಾಫಿ ಟೀಯಿಂದ ಹಿಡಿದು ರಾತ್ರಿಯವರೆಗೆ ಅಡುಗೆ ಸಿದ್ದಪಡಿಸುವಾಗ ನಿರಂತರವಾಗಿ ಗ್ಯಾಸ್ ಬಳಕೆ ಮಾಡುವುದರಿಂದ ಗ್ಯಾಸ್ ಸ್ಟವ್ ಜಿಡ್ಡು ಹಿಡಿಯುತ್ತದೆ. ಅದರಲ್ಲಿಯೂ ಅಡುಗೆ ಎಣ್ಣೆ ಒಲೆಯ ಮೇಲೆ ಬಿದ್ದರೆ ಪೂರ್ತಿ ಜಿಡ್ಡು ತುಂಬಿ ಕಲೆಯಾಗುತ್ತದೆ. ಗ್ಯಾಸ್ ಸ್ಟವ್ ಬರ್ನರ್ ಜಿಡ್ಡು ತುಂಬಿದನ್ನು ಶುಚಿ ಮಾಡದೇ ಹೋದರೆ ಬ್ಯಾಕ್ಟೀರಿಯಾ, ಸೂಕ್ಷ್ಮಜೀವಿಗಳು ತುಂಬುವ ಹಿನ್ನೆಲೆ ನಾವು ಸಿದ್ದಪಡಿಸುವ ಆಹಾರಕ್ಕೆ ಸೇರುವ ಸಂಭವವಿರುತ್ತದೆ. ಹೀಗಾಗಿ, ಸಿಂಪಲ್ ಟ್ರಿಕ್ಸ್ ಫಾಲೋ ಮಾಡಿ ಕ್ಲೀನ್ ಮಾಡಬಹುದು.
# ವಿನೆಗರ್:
ಗ್ಯಾಸ್ ಬರ್ನರ್ ಗಳನ್ನು ಸ್ವಚ್ಛಗೊಳಿಸಲು ವಿನೆಗರ್ ಉಪಯೋಗಿಸಬಹುದು. ಬರ್ನರ್ ಮೇಲೆ ವಿನೆಗರ್ ಒಂದೆರಡು ಡ್ರಾಪ್ ಹಾಕಿ ಸ್ವಲ್ಪ ಸಮಯದ ನಂತರ ಅದನ್ನು ಸ್ಪಾಂಜ್ ಮೂಲಕ ಒರೆಸಿ. ಆ ಬಳಿಕ ಡಿಶ್ ವಾಷಿಂಗ್ ಲಿಕ್ವಿಡ್ ಸೋಪಿನಿಂದ ತೊಳೆದರೆ ಗ್ಯಾಸ್ ಬರ್ನರ್ ಫಳ ಫಳ ಹೊಳೆಯುವುದನ್ನು ಗಮನಿಸಹುದು.
# ಅಡುಗೆ ಸೋಡಾ:
ನಿಂಬೆ ರಸ ಮತ್ತು ವಿನೆಗರ್ ಹಾಗೂ ಅಡುಗೆ ಸೋಡಾವನ್ನು ಮಿಶ್ರಣ ಮಾಡಿ,ಗ್ಯಾಸ್ ಓವನ್ ಮತ್ತು ಬರ್ನರ್ ಅನ್ನು ಈ ಮಿಶ್ರಣದ ಸಹಾಯದಿಂದ ಶುಚಿಯಾದ ಬಟ್ಟೆಯಿಂದ ಕ್ಲೀನ್ ಮಾಡಬೇಕು. ವಾರಕ್ಕೆರಡು ಬಾರಿ ಈ ವಿಧಾನವನ್ನು ಅನುಸರಿಸಿದರೆ ಇದರ ರಿಸಲ್ಟ್ ನೀವೇ ಕಂಡುಕೊಳ್ಳಿ.
# ಬಿಸಿ ನೀರು – ಉಪ್ಪು:
ಬಿಸಿ ನೀರಿಗೆ ಒಂದು ಚಮಚ ಉಪ್ಪು ಬೆರೆಸಿ, ಬರ್ನರ್ ಗಳನ್ನು ಅದರಲ್ಲಿ ಹಾಕಿಕೊಂಡು 15-20 ನಿಮಿಷ ನೆನಸಬೇಕು. ಸ್ವಲ್ಪ ಸಮಯದ ಬಳಿಕ ಬರ್ನರ್‌ಗಳನ್ನು ತೆಗೆದು ಡಿಶ್ ವಾಷರ್ ಇಲ್ಲವೇ ಸೋಪಿನಿಂದ ಉಜ್ಜಿದರೆ ಬರ್ನರ್‌ಗಳು ಫಳ ಫಳ ಹೊಳೆಯುವುದು ಗ್ಯಾರಂಟೀ!!
# ಬಿಳಿ ವಿನೆಗರ್ – ಅಡುಗೆ ಸೋಡಾ:
ಒಂದು ಸಣ್ಣ ಪಾತ್ರೆಯಲ್ಲಿ ನೀರು ತೆಗೆದುಕೊಂಡು ಬಿಳಿ ವಿನೆಗರ್ ಮತ್ತು ಅಡುಗೆ ಸೋಡಾವನ್ನು ಮಿಶ್ರಣ ಮಾಡಬೇಕು. ಈ ಮಿಶ್ರಣದಲ್ಲಿ ಗ್ಯಾಸ್ ಬರ್ನರ್ ಅನ್ನು ಸುಮಾರು 2 ಗಂಟೆಯವರೆಗೆ ನೆನಸಿಡಬೇಕು. ಆ ಬಳಿಕ ಬರ್ನರ್ ಅನ್ನು ಟೂತ್ ಬ್ರಷ್ ಇಲ್ಲವೇ ಸ್ಕ್ರಬ್ ನಿಂದ ಉಜ್ಜಿ ಸ್ವಚ್ಛಗೊಳಿಸಬೇಕು.
# ಈರುಳ್ಳಿ:
ಈರುಳ್ಳಿಯನ್ನು ದುಂಡಗೆ ತುಂಡುಗಳಾಗಿ ಕತ್ತರಿಸಿಕೊಂಡು 20 ನಿಮಿಷಗಳ ಕಾಲ ನೀರಿನಲ್ಲಿ ಕುದಿಸಬೇಕು. ಆ ಬಳಿಕ ನೀರು ತಣ್ಣಗಾದ ನಂತರ ಅದರ ಮೂಲಕ ಗ್ಯಾಸ್ ಓವನ್ ಅನ್ನು ಶುಚಿಯಾದ ಬಟ್ಟೆಯಿಂದ ಒರೆಸಿ. ಈ ನೀರು ಗ್ಯಾಸ್ ಸ್ಟೌವ್ ಮೇಲೆ ಸಂಗ್ರಹವಾಗಿರುವ ಗ್ರೀಸ್ ಅನ್ನು ಶುಚಿಗೊಳಿಸುತ್ತದೆ. ಮೇಲೆ ಹೇಳಿದ ಸರಳ ವಿಧಾನಗಳನ್ನು ಅನುಸರಿಸಿ ಜಿಡ್ಡುಗಟ್ಟಿದ ಗ್ಯಾಸ್ ಬರ್ನರ್ ಕ್ಲೀನ್ ಮಾಡಿ.
