Home » Hardik pandya: ದೇವರ ಬೇಡಿ ಬಾಲ್ ಎಸೆದ ಹಾರ್ದಿಕ್ – ಎಗರಿ ಎಗರಿ ಬಿತ್ತು ಎದುರಾಳಿಯ ವಿಕೆಟ್, ವೈರಲ್ ಆಯ್ತು ವಿಡಿಯೋ !

Hardik pandya: ದೇವರ ಬೇಡಿ ಬಾಲ್ ಎಸೆದ ಹಾರ್ದಿಕ್ – ಎಗರಿ ಎಗರಿ ಬಿತ್ತು ಎದುರಾಳಿಯ ವಿಕೆಟ್, ವೈರಲ್ ಆಯ್ತು ವಿಡಿಯೋ !

2 comments
Hardik pandya

Hardik pandya: ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ನಿರಂತರವಾಗಿ ಜಯ ಗಳಿಸುತ್ತಾ ಅಭಿಮಾನಿ ದೇವರುಗಳನ್ನು ಸಂತೋಷ ಪಡಿಸುತ್ತಿದೆ. ಅದರಲ್ಲೂ ಕೂಡ ಬದ್ಧ ಎದುರಾಳಿ ಪಾಕಿಸ್ತಾನವನ್ನು ಹಿಮ್ಮೆಟ್ಟಿಸಿ ಗೆಲುವಿನ ನಗೆ ಭೀರುತ್ತಿದೆ ಪ್ರಬಲ ಟೀ ಇಂಡಿಯಾ. ನಿನ್ನೆ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ನಡೆದ ಮ್ಯಾಚ್ ಅಂತೂ ಭಾರತೀಯರಿಗೆ ಸಖತ್ ಖುಷಿ ನೀಡಿದೆ. ಈ ಬೆನ್ನಲ್ಲೇ ನಿನ್ನೆಯ ಮ್ಯಾಚ್ ನಲ್ಲಿ ಹಾರ್ದಿಕ್ ಪಾಂಡ್ಯ(Hardik pandya) ಮಾಡಿದ ಬೌಲಿಂಗ್ ವಿಡಿಯೋ ಒಂದು ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ಸದ್ಧು ಮಾಡುತ್ತಿದೆ.

ಹೌದು, ನಿನ್ನೆ ನಡೆದ ಇನಿಂಗ್ಸ್‌ ವೇಳೆ ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಪಾಕಿಸ್ತಾನದ ಆರಂಭಿಕ ಬ್ಯಾಟರ್ ಇಮಾಮ್ ಉಲ್ ಹಕ್ ಅವರನ್ನು ವಿಕೆಟ್ ತೆಗೆಯೋ ಮೂಲಕ ಮಟ್ಟ ಹಾಕುವ ಮುನ್ನ ಬಾಲಿಗೆ ಮಂತ್ರ ಹಾಕಿ, ದೇವರನ್ನು ಪ್ರಾರ್ಥಿಸೋ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದ್ದು ಎಲ್ಲರೂ ಮೆಚ್ಚುವಂತೆ ಮಾಡಿದೆ.

ಏನಿದೆ ವೈರಲ್ ವಿಡಿಯೋದಲ್ಲಿ?
ಬಾಬರ್ ಅಜಂ ಹಾಗೂ ಇಮಾಮ್‌ ಉಲ್ ಹಕ್‌ 32 ರನ್ ಜತೆಯಾಟವಾಡುತ್ತಿದ್ದ ಫೀಲ್ಡಿಗಿಳಿದ ಹಾರ್ದಿಕ್ ಪಾಂಡ್ಯ ಈ ಜೋಡಿಯನ್ನು ಮಟ್ಟಹಾಕುವಲ್ಲಿ ಯಶಸ್ವಿಯಾದರು. ಇಮಾಮ್ ವಿಕೆಟ್‌ ಪಡೆಯುವ ಮುನ್ನ ಹಾರ್ದಿಕ್ ಚೆಂಡನ್ನು ಕೈಯಲ್ಲಿ ಹಿಡಿದು ದೇವರನ್ನು ಪ್ರಾರ್ಥಿಸಿ ಚೆಂಡನ್ನು ಎಸೆದರು. ಪರಿಣಾಮ 36 ರನ್ ಗಳಿಸಿ ಅಪಾಯಕಾರಿಯಾಗುವ ಸೂಚನೆ ನೀಡಿದ್ದ ಇಮಾಮ್ ಉಲ್ ಹಕ್‌ ಅದೇ ಎಸೆತಕ್ಕೆ ಔಟ್ ಆಗಿ, ಫೀಲ್ಡ್ ನಿಂದ ಹೊರಹೋದರು. ಈ ವಿಡಿಯೋ ಇದೀಗ ಸಾಕಷ್ಟು ಟ್ರೆಂಡ್ ಆಗಿದೆ.

ಅಂದಹಾಗೆ ಗೆಲ್ಲಲು 192 ರನ್‌ಗಳ ಗುರಿಯನ್ನು ಪಡೆದ ಭಾರತ ಇನ್ನೂ 117 ಎಸೆತ ಇರುವಂತೆಯೇ 3 ವಿಕೆಟ್‌ ನಷ್ಟಕ್ಕೆ 192 ರನ್‌ ಹೊಡೆಯುವ ಮೂಲಕ ಗೆಲುವಿನ ನಗೆ ಬೀರಿತು. ಹ್ಯಾಟ್ರಿಕ್‌ ಜಯದೊಂದಿಗೆ ಭಾರತ 6 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಜಿಗಿದಿದೆ.

ಇದನ್ನೂ ಓದಿ: Madhu bangarappa: ಶಿಕ್ಷಕ ಹುದ್ದೆ ಆಕಾಂಕ್ಷಿಗಳೇ ಗಮನಿಸಿ – ಹೊಸ ನೇಮಕಾತಿ ಬಗ್ಗೆ ಸಚಿವ ಮಧು ಬಂಗಾರಪ್ಪ ಕೊಟ್ರು ಬಿಗ್ ಅಪ್ಡೇಟ್

You may also like

Leave a Comment