Home » BBK Season 10: ಡ್ರೋಣ್‌ ಪ್ರತಾಪನ ʼಓಪನ್‌ ಅಪ್‌ʼ ನೋಡಿ, ತುಕಾಲಿ ಸಂತೋಷ್‌ ಶಾಕ್‌! ಪ್ರತಾಪನ ನಾಟಿ ಸ್ಟೈಲಿಗೆ ಕಿಚ್ಚ ಸುದೀಪ್ ಫುಲ್‌ ಫಿದಾ!!!‌

BBK Season 10: ಡ್ರೋಣ್‌ ಪ್ರತಾಪನ ʼಓಪನ್‌ ಅಪ್‌ʼ ನೋಡಿ, ತುಕಾಲಿ ಸಂತೋಷ್‌ ಶಾಕ್‌! ಪ್ರತಾಪನ ನಾಟಿ ಸ್ಟೈಲಿಗೆ ಕಿಚ್ಚ ಸುದೀಪ್ ಫುಲ್‌ ಫಿದಾ!!!‌

by Mallika
0 comments

Drone pratap: ನಿನ್ನೆಯ ಎಪಿಸೋಡ್‌ನಲ್ಲಿ ಡ್ರೋಣ್‌ ಪ್ರತಾಪ್‌ ಕುರಿತು ಕಾಲೆಳೆದ, ವ್ಯಂಗ್ಯ ಮಾತನಾಡಿದ ತುಕಾಲಿ ಸಂತೋಷ್‌ ಹಾಗೂ ಇದಕ್ಕೆ ಸಾಥ್‌ ನೀಡಿದ ಕೆಲ ಸ್ಪರ್ಧಿಗಳಿಗೆ ಬೆವರು ಇಳಿಸಿದ್ದಾರೆ. ಇಂದಿನ ಎಪಿಸೋಡ್‌ನ ಹೊಸ ಪ್ರೊಮೋ ಬಿಡುಗಡೆಯಾಗಿದ್ದು ಇದರಲ್ಲಿ ಪ್ರತಾಪನ( Drone pratap) ಪ್ರತಾಪ ಕಂಡು ನಿಜಕ್ಕೂ ತುಕಾಲಿ ಸಂತೋಷ್‌ ಸೇರಿದಂತೆ ಮನೆ ಮಂದಿ ವಾಹ್‌ ಎಂದಿದ್ದಾರೆ.

ಪ್ರೋಮೊದಲ್ಲಿ ಏನಿದೆ?
ಡ್ರೋಣ್‌ ಪ್ರತಾಪ್‌ ಅವರು ತನಿಷಾ ಹಾಗೂ ಸಂಗೀತಾ ಶೃಂಗೇರಿ ಅವರ ಜೊತೆ ರ್ಯಾಂಪ್‌ ವಾಕ್‌ ಮಾಡುತ್ತಾ ಹಾಡೊಂದಕ್ಕೆ ಸಖತ್‌ ಸ್ಟೆಪ್‌ ಹಾಕಿದ್ದಾರೆ. ಸುದೀಪ್‌ ಅವರು ಹೇಳುತ್ತಾ ʼ ತುಕಾಲಿ ಅವರೇ ಓಪನ್‌ಆಪ್‌ ಆಗಬೇಕು ಎಂದು ನೀವು ಹೇಳ್ತಾ ಇದ್ರಿ. ಓಪನ್‌ಅಪ್‌ ಮಾಡ್ಸೋದು ಅಂದ್ರೆ ಹೀಗೆ ಸರ್!‌ ನಮ್ಮದು ವರ್ತೂರು ಟೊಮ್ಯಾಟೋ ಅಲ್ಲ, ನಾಟಿ ಟೊಮ್ಯಾಟೋ, ವೆರಿ ನಾಟಿ (Naughty) ಟೊಮ್ಯಾಟೊʼ ಎಂದು ತುಕಾಲಿ ಅವರ ಕಾಲೆಳೆದಿದ್ದಾರೆ ಸುದೀಪ್‌.

ಈ ವೀಡಿಯೋ ನೋಡಿ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಡ್ರೋಣ್‌ ಪ್ರತಾಪ್‌ ಗೆ ಪಾಸಿಟಿವ್‌ ಮಾತುಗಳ ಸುರಿಮಳೆ ಗೈದಿದ್ದಾರೆ.

ಇದನ್ನೂ ಓದಿ: BPL Card ಸೇರಿ ಪಡಿತರ ಚೀಟಿ ಹೊಂದಿರುವವರಿಗೆ ಸರಕಾರದಿಂದ ಮತ್ತೊಂದು ಸಿಹಿ ಸುದ್ದಿ! ಸಿಗಲಿದೆ ನಿಮಗೆ ಇನ್ನು ರಸೀದಿ!!!

You may also like

Leave a Comment