Home » Actress Vaishnavi Gowda: ‘ಸೀತಾರಾಮ’ದ ಸೀತಾ ರಾತ್ರಿ ಸ್ಕಿನ್ ಕೇರ್ ಹೇಗೆ ಮಾಡ್ತಾರೆ ಗೊತ್ತಾ ?! ಸ್ಟೋರಿ ನೋಡಿ, ನಿಮಗೂ ಸಿಗಬೋದು ಹೊಸ ಟಿಪ್ಸ್ !

Actress Vaishnavi Gowda: ‘ಸೀತಾರಾಮ’ದ ಸೀತಾ ರಾತ್ರಿ ಸ್ಕಿನ್ ಕೇರ್ ಹೇಗೆ ಮಾಡ್ತಾರೆ ಗೊತ್ತಾ ?! ಸ್ಟೋರಿ ನೋಡಿ, ನಿಮಗೂ ಸಿಗಬೋದು ಹೊಸ ಟಿಪ್ಸ್ !

1 comment

Actress Vaishnavi Gowda: ಕನ್ನಡದ ಪ್ರೇಕ್ಷಕರಿಗೆ ಸನ್ನಿಧಿಯಂತಲೇ ಪರಿಚಯವಿರುವ ವೈಷ್ಣವಿ (Actress Vaishnavi Gowda) ಕನ್ನಡ ಕಿರುತೆರೆಲೋಕದ ಜನಪ್ರಿಯ ನಟಿ. `ಅಗ್ನಿ ಸಾಕ್ಷಿ’ ಸೀರಿಯಲ್ ಮೂಲಕ ಮನೆ ಮಾತಾಗಿರುವ ವೈಷ್ಣವಿ ಹಲವು ಉತ್ಪನ್ನಗಳ ರಾಯಭಾರಿಯೂ ಹೌದು. ಇದೀಗ ನಟಿ ವೈಷ್ಣವಿ ಗೌಡ ಸೀತಾರಾಮ ಸೀರಿಯಲ್ ಮೂಲಕ ಪ್ರೇಕ್ಷಕರ ಮನಸು ಕದ್ದಿದ್ದಾರೆ.

ಅಲ್ಲದೆ, ನಟಿ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಎನ್ನುವುದನ್ನು ಬೇರೆ ಹೇಳಬೇಕಾಗಿಲ್ಲ. ಆಗಾಗ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡುತ್ತಾ ಫ್ಯಾನ್ಸ್ ಜೊತೆ ಟಚ್​ನಲ್ಲಿರುತ್ತಾರೆ ಈ ಚೆಲುವೆ. ಇದೀಗ ನಟಿ ವೈಷ್ಣವಿ ರಾತ್ರಿ ತಾವು ಸ್ಕಿನ್​ ಕೇರ್​ ಹೇಗೆ ಮಾಡುತ್ತೇವೆ ಎನ್ನುವುದನ್ನು ತಿಳಿಸಿಕೊಟ್ಟಿದ್ದಾರೆ.

ಶೂಟಿಂಗ್​ ನಿಂದ ಬಂದ ಮೇಲೆ ಮೇಕಪ್​ ಹಚ್ಚಿಕೊಂಡು ಮಲಗಬಾರ್ದು. ಮಸ್ಕರ, ಕಾಜಲ್​, ಮೇಕಪ್ ರಿಮೂವ್ ಮಾಡಬೇಕು. ಫೇಸ್​ ವಾಷ್​ ಮಾಡಬೇಕು. ಮುಖ ಡ್ರೈ ಆಗಲು ಟೈಂ ಕೊಡಬೇಕು. ಮಾಯ್ಚಿರೈಸರ್​ ಬಳಕೆ ಮಾಡಬೇಕು. ಅದನ್ನು ಅಪ್ಲೈ ಮಾಡಿದ ನಂತರ ರೋಲ್​ ಬಳಸಿ ಮುಖವನ್ನು ರೋಲ್​ ಮಾಡಿಕೊಳ್ಳಬೇಕು. ಇದು ಮುಖಕ್ಕೆ ಚೆನ್ನಾಗಿ ಮಸಾಜ್​ ಮಾಡಲು ಸಹಕಾರಿಯಾಗಿದೆ. ಇದರಿಂದ ತುಂಬಾ ರಿಲ್ಯಾಕ್ಸ್​ ಆಗುತ್ತದೆ. ಸ್ಕಿನ್​ ಚೆನ್ನಾಗಿರುತ್ತದೆ. ಹಾಗೇ ಬ್ಲಡ್​ ಸರ್ಕ್ಯೂಲೇಷನ್​ ಚೆನ್ನಾಗಿರುತ್ತದೆ. ನಿದ್ದೆನೂ ಚೆನ್ನಾಗಿ ಬರುತ್ತದೆ ಎಂದು ವೈಷ್ಣವಿ ಹೇಳಿದ್ದಾರೆ.

ನಂತರ ನಟಿ ಎರಡು ಫೇಷಿಯಲ್​ ಯೋಗದ ಬಗ್ಗೆ ಹೇಳಿದ್ದಾರೆ. ಏನೇ ಕೆಲಸ ಮಾಡಬೇಕಾದರೂ ಹುಬ್ಬುಗಳ ನಡುವೆ ಟೆನ್ಷನ್​ ಜಾಸ್ತಿ ಇರುತ್ತದೆ. ಹಾಗಾಗಿ ಫೇಷಿಯಲ್​ ಮಸಾಜ್​ ಮಾಡಿದರೆ ಟೆನ್ಷನ್​ ರಿಲ್ಯಾಕ್ಸ್​ ಆಗುತ್ತದೆ ಎಂದು ಹೇಳಿದರು. ಮೇಕಪ್​ ಜಾಸ್ತಿ ಮಾಡುವ ಕಾರಣ ಸ್ಕಿನ್​ ಡ್ರೈ ಆಗುತ್ತದೆ. ಹಾಗಾಗಿ ತಾವು ಮಾಯ್ಚಿರೈಸರ್​ ಹಾಕುವುದಾಗಿಯೂ ಫೇಸ್​ವಾಷ್​ ಮಾಡಿದಾಗ ತಮಗೆ ಸನ್​ಸ್ಕ್ರೀನ್​ ಹಚ್ಚುವ ಅಭ್ಯಾಸ ಎಂದಿದ್ದಾರೆ.

ನಂತರ ಲಿಪ್​ ಬಾಮ್​ ಹಚ್ಚಿಕೊಳ್ಳುತ್ತಾರೆ. ನಿಮ್ಮ ಸ್ಕಿನ್​ಗೆ ಯಾವುದು ಸೂಟ್​ ಆಗುತ್ತದೆ ಅದನ್ನು ಬಳಸಿ. ಮಸ್ಕಾರ ಮತ್ತು ಐಬ್ರೋಗಳಿಗೆ ಹಚ್ಚುವ ಕಾಡಿಗೆಯಿಂದ ಎಫೆಕ್ಟ್​ ಆಗಬಾರದು ಎಂದು ಬಾಡಿ ಬಟರ್​ ಅಥವಾ ಸ್ವಲ್ಪ ಕೊಬ್ಬರಿ ಎಣ್ಣೆಯನ್ನು ಕಣ್ಣಿಗೆ ಹಾಕಬೇಕು ಎಂದು ವೈಷ್ಣವಿ ಸಲಹೆ ಕೊಟ್ಟಿದ್ದಾರೆ. ನಟಿಯ ರಾತ್ರಿ ಸ್ಕಿನ್ ಕೇರ್ ರುಟಿನ್ ಗೆ ನೆಟ್ಟಿಗರು ಸಖತ್ ಕಾಮೆಂಟ್ ಮಾಡಿದ್ದಾರೆ.

https://youtu.be/Xqms3veyLGM

ಇದನ್ನೂ ಓದಿ: Jio Recharge Plan: ಇದೊಂದು ರಿಚಾರ್ಜ್ ಮಾಡಿಸಿ, ಇಡೀ ವರ್ಲ್ಡ್ ಕಪ್ ಮ್ಯಾಚ್, OTT ಎಲ್ಲವನ್ನೂ ಉಚಿತವಾಗೇ ವೀಕ್ಷಸಿ !!

You may also like

Leave a Comment