Home » Fake lawyer: ಕೊನೆಗೂ ಪೊಲೀಸರಿಗೆ ಸಿಕ್ಕಿಬಿದ್ದ ನಕಲಿ ವಕೀಲ – ಆದ್ರೆ ಅಸಲಿಗಳನ್ನೂ ಮೀರಿಸಿ ಈವರೆಗೂ ಈತ ಗೆದ್ದಿದ್ದು 25ಕ್ಕೂ ಹೆಚ್ಚು ಕೇಸ್‌… !!

Fake lawyer: ಕೊನೆಗೂ ಪೊಲೀಸರಿಗೆ ಸಿಕ್ಕಿಬಿದ್ದ ನಕಲಿ ವಕೀಲ – ಆದ್ರೆ ಅಸಲಿಗಳನ್ನೂ ಮೀರಿಸಿ ಈವರೆಗೂ ಈತ ಗೆದ್ದಿದ್ದು 25ಕ್ಕೂ ಹೆಚ್ಚು ಕೇಸ್‌… !!

0 comments
Fake lawyer

Fake lawyer: ತಾನೊಬ್ಬ ವಕೀಲ ಎಂದು ವೇಷ ಹಾಕಿಕೊಂಡು, ನಕಲಿ ವಕೀಲನೋರ್ವ ಬರೋಬ್ಬರಿ 26 ಕೇಸುಗಳನ್ನು ಗೆದ್ದಿದ್ದಾನೆ. ಇದೀಗ ಇತ್ತೀಚೆಗೆ ಈತ ವಕೀಲನೇ ಅಲ್ಲ ಎಂದು ತಿಳಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ. ನಿಜವಾದ ವಕೀಲರೇ ಕೋರ್ಟ್‌ ವಾದ ಪ್ರತಿವಾದಗಳ ವೇಳೆ ತಮ್ಮ ಪಾಲಿನ ಕಕ್ಷಿದಾರರ ಪರ ಕೇಸುಗಳನ್ನು ಸೋಲುವುದಿದೆ. ಆದರೆಕೀನ್ಯಾ ದೇಶದಲ್ಲಿ ಇದೊಂದು ಆಶ್ಚರ್ಯವೇ ಸರಿ.

ಈ ನಕಲಿ ವಕೀಲನ (Fake lawyer) ಹೆಸರು ಬ್ರಿಯಾನ್ ಮ್ವೆಂಡಾ, ಕೀನ್ಯಾದ ಹೈಕೋರ್ಟ್‌ನಲ್ಲಿ ತಾನೋರ್ವ ವಕೀಲ ಎಂದು ಹೇಳಿಕೊಂಡು ಈತ 26 ಕೇಸುಗಳನ್ನು ಗೆದ್ದಿದ್ದಾನೆ. ಆದರೆ ಈತ ನಕಲಿ ಎಂದು ತಿಳಿದ ಕೂಡಲೇ ಕೀನ್ಯಾ ಪೊಲೀಸರು ಈತನನ್ನು ಬಂಧಿಸಿದ್ದಾರೆ.

ನೈಜೀರಿಯನ್ ಟ್ರಿಬ್ಯೂನ್ ವರದಿ ಪ್ರಕಾರ, ಈ ನಕಲಿ ವಕೀಲ ಈ ಎಲ್ಲಾ ಪ್ರಕರಣಗಳನ್ನು ಮ್ಯಾಜಿಸ್ಟ್ರೇಟ್‌ಗಳು, ಮೇಲ್ಮನವಿ ನ್ಯಾಯಾಲಯದ ನ್ಯಾಯಾಧೀಶರು ಮತ್ತು ಹೈಕೋರ್ಟ್ ನ್ಯಾಯಾಧೀಶರ ಮುಂದೆ ಮಂಡಿಸಿ ಗೆದ್ದಿದ್ದಾನೆ. ತಾನೋರ್ವ ಅರ್ಹತೆ ಇರುವ ವಕೀಲ ಎಂಬಂತೆ ಹಲವು ವರ್ಷಗಳ ಕಾಲ ಈ ಬ್ರಿಯಾನ್ ಮ್ವೆಂಡಾ, ತನ್ನನ್ನು ತಾನು ತೋರಿಸಿಕೊಂಡಿದ್ದ. ಆತನ ಬಂಧನವಾಗುವವರೆಗೂ ನ್ಯಾಯಾಧೀಶರಿಗೆ ಆತನ ಸಾಮರ್ಥ್ಯದ ಬಗ್ಗೆ ಸ್ವಲ್ಪವೂ ಶಂಕೆ ಬಂದಿರಲಿಲ್ಲ.

ಈ ಬಗ್ಗೆ ಕೀನ್ಯಾದ ಕಾನೂನು ಸಂಘ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದೆ. ಬ್ರಿಯಾನ್ ಮ್ವೆಂಡಾ, ಅವರು ಕೀನ್ಯಾ ಹೈಕೋರ್ಟ್‌ನ ವಕೀಲರಲ್ಲ, ಕಾನೂನು ಸೊಸೈಟಿಯಲ್ಲಿರುವ ದಾಖಲೆಯ ಪ್ರಕಾರ ಅವರು ಶಾಖೆಯ ಸದಸ್ಯರೂ ಅಲ್ಲ ಎಂದು ಶಾಖೆಯೂ ಸಮಾಜದ ಎಲ್ಲಾ ಸದಸ್ಯರಿಗೆ ಮತ್ತು ಸಾರ್ವಜನಿಕರಿಗೆ ತಿಳಿಸಲು ಬಯಸುತ್ತದೆ ಎಂದು ಟ್ವಿಟ್ಟರ್‌ನಲ್ಲಿ ಕೀನ್ಯಾ ಕಾನೂನು ಸಂಘ ಬರೆದುಕೊಂಡಿದೆ.

ಬ್ರಿಯಾನ್ ಮ್ವೆಂಡಾ ತನ್ನ ಹೆಸರನ್ನೆ ಹೊಂದಿರುವ ಮತ್ತೋರ್ವ ವಕೀಲರ ಗುರುತನ್ನು ಕದ್ದು, ಆ ನಿಜವಾದ ವಕೀಲರು ಕಾನೂನು ಸೊಸೈಟಿಯ ವೆಬ್‌ಗೆ ಮತ್ತೆ ಲಾಗ್‌ಇನ್‌ ಆಗಲು ಸಾಧ್ಯವಾಗದಂತೆ ಮಾಡಿದ್ದ. ಹೀಗಾಗಿ ನಿಜವಾಗಿಯೂ ವಕೀಲರಾಗಿದ್ದವರಿಗೆ ಸಂಕಷ್ಟವಾಗಿತ್ತು. ಅವರು ಈ ಬಗ್ಗೆ ಮಾಹಿತಿ ತಂತ್ರಜ್ಞಾನ ಇಲಾಖೆಗೆ ದೂರು ನೀಡಿದ್ದರು.

ಆದರೆ ಈ ವರ್ಷ ಸೆಪ್ಟೆಂಬರ್‌ನಲ್ಲಿ ಅವರು ತಮ್ಮ ಪ್ರಮಾಣಪತ್ರವನ್ನು ಅಲ್ಲಿ ಅಪ್‌ಡೇಟ್ ಮಾಡಲು ನೋಡಿದಾಗ ಅವರಿಗೆ ಅಲ್ಲಿ ಲಾಗಿನ್ ಮಾಡಲು ಆಗುತ್ತಿರಲಿಲ್ಲ. ಅಲ್ಲಿ ಈ ನಕಲಿ ಲಾಯರ್ ತನ್ನದೇ ಸರ್ಟಿಫಿಕೇಟ್ ಹಾಕಿ ತಮ್ಮ ಫೋಟೋವನ್ನು ಕೂಡ ಹಾಕಿ ಅಪ್‌ಟೇಡ್‌ ಮಾಡಿದ್ದ. ಅಲ್ಲದೇ ಕೇಸ್‌ಗಳಿಗೆ ಹಣ ವಸೂಲಿಯನ್ನು ಮಾಡಿದ್ದ ಆದರೆ ಇದರಿಂದ ಮೂಲತಃ ವಕೀಲರಾದವರಿಗೆ ತೊಂದರೆಯಾಗಿತ್ತು. ಹೀಗಾಗಿ ಅವರು ಐಟಿ ಇಲಾಖೆಗೆ ದೂರು ನೀಡಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಕೀನ್ಯಾ ಪೊಲೀಸರು ಈಗ ನಕಲಿ ವಕೀಲನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಮಂಗಳೂರು: ಯುವತಿಯ ದೇಶ ಸೇವೆಯ ಕನಸನ್ನೇ ಛಿದ್ರಗೊಳಿಸಿದ ವೈದ್ಯ !!

You may also like

Leave a Comment