High court order: ಇತ್ತೀಚಿನ ದಿನಗಳಲ್ಲಿ ಗಂಡ – ಹೆಂಡತಿಯರ ನಡುವಿನ ಸಂಬಂಧವಾಗಿ ಅನೇಕರು ಕೋರ್ಟ್ ಮೊರೆ ಹೋಗುತ್ತಿದ್ದಾರೆ. ಈ ವೇಳೆ ಪ್ರತಿ ಬಾರಿಯು ಕೋರ್ಟ್ ಮಹತ್ವದ ತೀರ್ಪನ್ನು ನೀಡುತ್ತದೆ. ಅಂತೆಯೇ ಇದೀಗ ಫೋನ್ ಕಾಲ್ ವಿಚಾರವಾಗಿ ಹಾಗೂ ಇದು ಗಂಡಹೆಂಡತಿಯರಿಗೆ ಅನುಗುಣವಾಗುವಾಗುವಂತೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಇದರಿಂದ ಗಂಡಂದಿರು ಈ ಕೆಲಸ ಮಾಡಬೇಕಂದ್ರೆ ಹೆಂಡತಿಯ ಪರ್ಮಿಷನ್ ಬೇಕೆಂಬ ಹೊಸ ನಿಯಮ ಬಂದಂತಾಗಿದೆ.
ಅನುಮಾನ ಎಲ್ಲಿ ಇರುವುದಿಲ್ಲ ಹೇಳಿ? ಎಲ್ಲೆಡೆಯೂ ಇರುತ್ತದೆ. ಆದರೆ ಕೆಲವು ಗಂಡ ಹೆಂಡತಿಯರ ನಡುವೆ ತುಸು ಹೆಚ್ಚೆನ್ನಬಹುದು. ಗಂಡ ಏನೋ ಮಾಡುತ್ತಾನೆ ಎಂದು ಹೆಂಡತಿಗೆ ಅನುಮಾನ, ಹೆಂಡತಿ ಏನೋ ಮಾಡುತ್ತಾಳೆಂದು ಗಂಡನಿಗೆ ಅನುಮಾನ. ಇದನ್ನು ಪತ್ತೆಹಚ್ಚುವುದಕ್ಕೆ ಇಬ್ಬರೂ ಕೆಲವು ಕಸರತ್ತು ನಡೆಸುತ್ತಾರೆ. ಅದರಲ್ಲಿ ಫೋನ್ ಕಾಲ್ ರೆಕಾರ್ಡಿಂಗ್ ಕೂಡ ಒಂದು. ಇದೀಗ ಈ ಕುರತೇ ಛತ್ತೀಸ್ಗಡ ಹೈಕೋರ್ಟ್( High court order) ಮಹತ್ವದ ತೀರ್ಪು ನೀಡಿದೆ.

ಅಂದಹಾಗೆ ಪತ್ನಿಗೆ ಗೊತ್ತಿಲ್ಲದಂತೆ ಆಕೆಯ ಮೊಬೈಲ್ ಫೋನ್ ಸಂಭಾಷಣೆಯನ್ನು ರೆಕಾರ್ಡ್ ಮಾಡುವುದು ಆರ್ಟಿಕಲ್ 21 ರ ಅಡಿಯಲ್ಲಿ ಖಾಸಗಿತನದ ಹಕ್ಕಿನ ಉಲ್ಲಂಘನೆಯಾಗಿದೆ. ಎಂದು ಛತ್ತೀಸ್ಗಢ ಹೈಕೋರ್ಟ್ ತೀರ್ಪು ನೀಡಿದೆ.
ಈ ತೀರ್ಪು ಬರಲು ಕಾರಣ?
ಕೆಲವು ವೈಯಕ್ತಿಕ ಕಾರಣಗಳಿಂದ ವಿಚ್ಛೇದ ಪಡೆದು, 2019ರಿಂದಲೂ ತನ್ನ ಗಂಡ ಜೀವನಾಂಶ ನೀಡಿಲ್ಲ ಎಂದು ಮಹಿಳೆಯೊಬ್ಬರು ಕೋರ್ಟ್ ಮೊರೆ ಹೋಗಿದ್ದರು. ಈ ವೇಳೆ ತನ್ನ ಹೆಂಡತಿಯ ವ್ಯಬಿಚಾರ ನಡೆಸುತ್ತಾಳೆ ಅದನ್ನು ಸಾಬೀತು ಪಡಿಸುತ್ತೇನೆ ಎಂದು ಗಂಡನು ಮೊಬೈಲ್ ಫೋನ್ನಲ್ಲಿ ರೆಕಾರ್ಡ್ ಮಾಡಿದ ಸಂಭಾಷಣೆಯೊಂದಿಗೆ ಅವಳನ್ನು ಎದುರಿಸಲು ಬಯಸುತ್ತೇನೆ ಎಂದನು. ಅಲ್ಲದೆ ತನ್ನ ಹೆಂಡತಿ ವ್ಯಭಿಚಾರ ಮಾಡುತ್ತಿದ್ದಾಳೆ ಮತ್ತು ಆದ್ದರಿಂದ, ಅವರು ವಿಚ್ಛೇದನ ಪಡೆದ ನಂತರ ಆಕೆಗೆ ಜೀವನಾಂಶವನ್ನು ಪಾವತಿಸಬೇಕಾಗಿಲ್ಲ ಎಂದು ಕೌಟುಂಬಿಕ ನ್ಯಾಯಾಲಯದಲ್ಲಿ ದಾವೆ ಹೂಡಿದನು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋದ ಹೆಂಡತಿಯ ಅರ್ಜಿ ವಿಚಾರಣೆ ನಡೆಸಿದ ಛತ್ತೀಸಗಡ ಹೈಕೋರ್ಟ್ ಈ ತೀರ್ಪು ನೀಡಿದೆ.
ಇದನ್ನೂ ಓದಿ: Chitradurga: ಟಿವಿ ರಿಮೋಟ್ ಗಾಗಿ ಕಿತ್ತಾಡಿದ ಮಕ್ಕಳು, ಜಗಳ ಬಿಡಿಸಲು ಕತ್ತರಿ ಎಸೆದ ತಂದೆ – ನಡೆದೇ ಹೋಯ್ತು ಘೋರ ದುರಂತ!!
