Home » Rashmika Mandanna Lip Lock: ರಣಬೀರ್ ಜೊತೆ ಲಿಪ್ ಕಿಸ್ ಮಾಡಲು ರಶ್ಮಿಕಾ ಪಡೆದ ಸಂಭಾವನೆ ಎಷ್ಟು?

Rashmika Mandanna Lip Lock: ರಣಬೀರ್ ಜೊತೆ ಲಿಪ್ ಕಿಸ್ ಮಾಡಲು ರಶ್ಮಿಕಾ ಪಡೆದ ಸಂಭಾವನೆ ಎಷ್ಟು?

1 comment

Rashmika Mandanna Lip Lock: ಟಾಲಿವುಡ್​ನಲ್ಲಿ ಬಹುಬೇಡಿಕೆಯ ನಟಿಯಾಗಿರುವ ನಟಿ ರಶ್ಮಿಕಾ ಮಂದಣ್ಣ, ಅನಿಮಲ್‌ನಲ್ಲಿ ಸಿನಿಮಾದಲ್ಲಿ ರಣಬೀರ್‌ ಜೊತೆ ಲಿಪ್‌ ಲಾಕ್ ಮಾಡಿ, ಈಗ ಲಿಪ್ ಲಾಕ್ (Rashmika Mandanna Lip Lock)ವಿಚಾರವಾಗಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ. ಹೌದು, ಆಲಿಯಾ ಪತಿ, ರಣ್‌ಬೀರ್ ಕಪೂರ್ ಜೊತೆ ‘ಪುಷ್ಪ’ (Pushpa) ನಟಿ ಲಿಪ್ ಲಾಕ್ ಮಾಡಿದ್ದಾರೆ. ಇಬ್ಬರ ರೊಮ್ಯಾಂಟಿಕ್ ಫೋಟೋ ಸಖತ್ ವೈರಲ್ ಆಗುತ್ತಿದೆ.

ರಶ್ಮಿಕಾಗೆ ಲಿಪ್ ಲಾಕ್ ದೃಶ್ಯದಲ್ಲಿ ನಟಿಸೋದು ಹೊಸದೇನಲ್ಲ. ಈ ಹಿಂದೆ ‘ಗೀತಾ ಗೋವಿಂದಂ’, ‘ಡಿಯರ್ ಕಾಮ್ರೇಡ್’ ಚಿತ್ರದಲ್ಲಿ ವಿಜಯ್ ದೇವರಕೊಂಡ (Vijay Devarakonda) ಜೊತೆ ಈ ನಟಿ ಸಖತ್ ಹಾಟ್ ಆಗಿ ಲಿಪ್ ಲಾಕ್ ಮಾಡಿ ಜನರನ್ನು ಶಾಕ್ ಗೊಳಿಸಿದ್ದರು. ಈಗ ರಣ್‌ಬೀರ್ ಜೊತೆ ಚುಂಬನದ ದೃಶ್ಯದಲ್ಲಿ ನಟಿ ಕಾಣಿಸಿಕೊಂಡಿದ್ದಾರೆ.

ಸದ್ಯ ರಶ್ಮಿಕಾ-ರಣಬೀರ್ ಅನಿಮಲ್ ಸಿನಿಮಾ ಡಿಸೆಂಬರ್ 1 ರಂದು ಬಿಡುಗಡೆಯಾಗಲಿದೆ. ಸಿನಿಮಾ ಪ್ರಚಾರದ ಹಿನ್ನೆಲೆ ಚಿತ್ರತಂಡ ಟೀಸರ್ ಬಿಡುಗಡೆ ಮಾಡಿದೆ. ಅನಿಮಲ್ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಗೀತಾಂಜಲಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸಿನಿಮಾದಲ್ಲಿ ನಟಿಸಲು ನಟಿ ರಶ್ಮಿಕಾ 4 ಕೋಟಿ ಸಂಭಾವನೆ ಪಡೆಯುತ್ತಿದ್ದಾರಂತೆ. ವಿಶೇಷ ಅಂದ್ರೆ ಕಿಸ್ಸಿಂಗ್ ಸೀನ್ ಮಾಡಲು ಪ್ರತ್ಯೇಕ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.

ಹೌದು, ರಶ್ಮಿಕಾ ಲಿಪ್ ಲಾಕ್ ದೃಶ್ಯಗಳಲ್ಲಿ ನಟಿಸಲು ಪ್ರತ್ಯೇಕ ಸಂಭಾವನೆ ಪಡೆದಿದ್ದಾರೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 4 ಕೋಟಿ ಜೊತೆಗೆ ಪ್ರತಿ ಲಿಪ್ ಲಾಕ್ ದೃಶ್ಯಕ್ಕೆ 20 ಲಕ್ಷ ಹೆಚ್ಚುವರಿ ಸಂಭಾವನೆ ಕೂಡ ಪಡೆದಿದ್ದಾರಂತೆ. ಒಟ್ಟಿನಲ್ಲಿ ರಶ್ಮಿಕಾ-ರಣಬೀರ್ ಲಿಪ್ ಲಾಕ್ ನೋಡಿ ಪ್ಯಾನ್ಸ್ ಶಾಕ್ ಆಗಿದ್ದಾರೆ.

ರಶ್ಮಿಕಾ ಮಂದಣ್ಣ ಸಿನಿಮಾಗಳು ಸಾಲು ಸಾಲಾಗಿ ರಿಲೀಸ್​ಗೆ ರೆಡಿ ಆಗ್ತಿದೆ. ಸದ್ಯ ಹಿಂದಿ ಸಿನಿಮಾ ಅನಿಮಲ್ – ಡಿಸೆಂಬರ್ 1ರಂದು ಬಿಡುಗಡೆಯಾಗಲಿದೆ. ಇವುಗಳ ಜೊತೆಗೆ ಪುಷ್ಪ 2: ದಿ ರೂಲ್ ಸಿನಿಮಾ ಮುಂದಿನ ವರ್ಷ 15ರಂದು ಆಗಸ್ಟ್​ನಲ್ಲಿ ಬಿಡುಗಡೆಯಾಗಲಿದೆ. ಇದರ ಜೊತೆ ಅನೇಕ ಸಿನಿಮಾಗಳು ನಟಿ ಕೈ ಸೇರಿದೆ ಎಂಬ ಮಾಹಿತಿ ಇದೆ.

ಇದನ್ನೂ ಓದಿ: ದಸರಾ ಪ್ರಯುಕ್ತ ಯಮಾಹದಿಂದ ಬಂತು ಬಿಗ್ ಬಿಗ್ ಆಫರ್ – ಶೋರ್ ರೂಂ ಮುಂದೆ ಕ್ಯೂ ನಿಂತ ಜನ

You may also like

Leave a Comment