Home » Mangaluru: ಹಿಂದೂ ವ್ಯಾಪಾರಿಗಳ ಸಂಘಕ್ಕೆ ಬಿಗ್ ಶಾಕ್- ಭಾರೀ ವಿರೋಧದ ನಡುವೆಯೂ ಟೆಂಡರ್’ನಲ್ಲಿ ಮುಸ್ಲಿಮರ ಪಾಲಾದ್ವು 6 ಅಂಗಡಿಗಳು

Mangaluru: ಹಿಂದೂ ವ್ಯಾಪಾರಿಗಳ ಸಂಘಕ್ಕೆ ಬಿಗ್ ಶಾಕ್- ಭಾರೀ ವಿರೋಧದ ನಡುವೆಯೂ ಟೆಂಡರ್’ನಲ್ಲಿ ಮುಸ್ಲಿಮರ ಪಾಲಾದ್ವು 6 ಅಂಗಡಿಗಳು

1 comment
Mangaluru

Mangalore: ಮಂಗಳೂರಿನ (Mangalore)ಮಂಗಳಾದೇವಿ ದೇವಸ್ಥಾನದಲ್ಲಿ(Temple)ನವರಾತ್ರಿ ಉತ್ಸವಕ್ಕೆ ಹಿಂದೂ ಸಂಘಟನೆಗಳ ವಿರೋಧದ ನಡುವೆಯೂ ಶನಿವಾರ ಬಾಕಿ ಉಳಿದ ಅಂಗಡಿ ಸ್ಟಾಲ್‌ಗಳ ಟೆಂಡರ್‌ ಕರೆಯಲಾಗಿದ್ದು, ಶನಿವಾರ ನಡೆದ ಏಲಂ ಪ್ರಕ್ರಿಯೆ ಸಂದರ್ಭ 11 ಸ್ಟಾಲ್‌ಗಳಲ್ಲಿ 6 ಸ್ಟಾಲ್‌ಗಳನ್ನು ಮುಸ್ಲಿಮರು ಟೆಂಡರ್‌ ಪಡೆದುಕೊಂಡಿದ್ದಾರೆ. ದ.ಕ. ಹಾಗೂ ಉಡುಪಿಯ ಜಾತ್ರಾ ವ್ಯಾಪಾರಸ್ಥರ ಸಮನ್ವಯ ಸಮಿತಿಯ ಅಭಿಲಾಷೆಯಂತೆ ಈ ಬಾರಿ ನವರಾತ್ರಿ ಉತ್ಸವದಲ್ಲಿ ಸ್ಟಾಲ್‌ ಹಾಕುವುದು ಶತಸಿದ್ದ ಎಂಬ ಧೋರಣೆಗೆ ಜಯ ಸಿಕ್ಕಂತಾಗಿದೆ.

ಮಂಗಳೂರು ಮಂಗಳಾದೇವಿ ದೇವಸ್ಥಾನದ ಹೊರಗೆ ಪಾಲಿಕೆ ಜಾಗದಲ್ಲಿ ಟೆಂಡರ್‌ ಸಂದರ್ಭ ಸ್ಟಾಲ್‌ ಹಾಕಲು ಮುಸ್ಲಿಮರನ್ನು ದೂರ ಇರಿಸಲಾಗಿದೆ ಎಂದು ಆರೋಪಿಸಿ ದ.ಕ. ಮತ್ತು ಉಡುಪಿ ಜಾತ್ರಾ ವ್ಯಾಪಾರಸ್ಥರ ಸಮನ್ವಯ ಸಮಿತಿ ಜಿಲ್ಲಾಡಳಿತ ಹಾಗೂ ಪೊಲೀಸ್‌ ಕಮಿಷನರ್‌ಗೆ ದೂರು ನೀಡಿತ್ತು. ಹೀಗಾಗಿ, ಹೆಚ್ಚುವರಿ ಜಿಲ್ಲಾಧಿಕಾರಿಗಳು ಸಭೆ ನಡೆಸಿ, ಬಾಕಿ ಉಳಿದಿರುವ ಸ್ಟಾಲ್‌ಗಳನ್ನು ಟೆಂಡರ್‌ ಕರೆಸಿ ಹಂಚಿಕೆ ಮಾಡುವಂತೆ ದೇವಸ್ಥಾನದ ಆಡಳಿತಕ್ಕೆ ಸೂಚನೆ ನೀಡಿದ್ದು, ಇದರ ಅನುಸಾರ ಶನಿವಾರ ಟೆಂಡರ್‌ ಪ್ರಕ್ರಿಯೆ ನಡೆಸಲಾಗಿದೆ.

ಮಂಗಳಾದೇವಿ ದೇವಸ್ಥಾನದ ಆಡಳಿತ ಟೆಂಡರ್ ಕರೆದು ಅಂತಿಮಗೊಳಿಸಿದ್ದು, 125 ಸ್ಟಾಲ್‌ಗಳ ಪೈಕಿ 92 ಸ್ಟಾಲ್‌ಗಳಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ 71 ಮಂದಿ ಮಾತ್ರ ಬಿಡ್‌ ಮೊತ್ತ ಪಾವತಿಸಿ ಸ್ಟಾಲ್‌ನ್ನು ಅಧಿಕೃತಗೊಳಿಸಿದ್ದಾರೆ. ಈ ಟೆಂಡರ್‌ ಪ್ರಕ್ರಿಯೆಯಲ್ಲಿ ಮತ್ತೆ 11 ಮಂದಿ ಸ್ಟಾಲ್‌ ಪಡೆದಿದ್ದು, 6 ಮಂದಿ ಮುಸ್ಲಿಮರು ಕೂಡ ಸೇರ್ಪಡೆ ಯಾಗಿದ್ದಾರೆ. ಒಟ್ಟು 82 ಸ್ಟಾಲ್‌ ಹಂಚಿಕೆಯಾಗಿದ್ದು, ಇಲ್ಲಿಗೆ ಟೆಂಡರ್ ಪ್ರಕ್ರಿಯೆ ಮುಕ್ತಾಯವಾಗಿದೆ. ಇನ್ನು ಬಾಕಿಯಿರುವ ಸ್ಟಾಲ್‌ಗಳಿಗೆ ಟೆಂಡರ್‌ ಕರೆಯುವುದಿಲ್ಲ ಎಂದು ದೇವಸ್ಥಾನದ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.

ಇದನ್ನೂ ಓದಿ : Pervert Husband: ಸ್ನೇಹಿತರೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ಗಂಡನ ಒತ್ತಾಯ! ಕೋಪಗೊಂಡ ಹೆಂಡತಿ ಮಾಡಿದ್ದೇನು ಗೊತ್ತೇ???

You may also like

Leave a Comment