Home » Congress: ಪಂಚ ರಾಜ್ಯ ಚುನಾವಣೆ – ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್ !!

Congress: ಪಂಚ ರಾಜ್ಯ ಚುನಾವಣೆ – ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್ !!

0 comments
Congress

Congress : ದೇಶದಲ್ಲಿ ಲೋಕಸಭಾ ಚುನಾವಣೆಯ ಗದ್ದಲ ಹೆಚ್ಚಾಗಿದೆ. ಹಲವು ಪಕ್ಷಗಳು ಈಗಿಂದಲೇ ತಯಾರಿ ನಡೆಸಿವೆ. ಈ ನಡುವೆಯೇ ಪಂಚರಾಜ್ಯಗಳ ಚುನಾವಣೆಯ ಕಾವು ರಂಗೇರುತ್ತಿದೆ. ಬರುವ ನವೆಂಬರ್ ತಿಂಗಳಲ್ಲಿ ಮಧ್ಯಪ್ರದೇಶ, ಛತ್ತೀಸಗಡ ಹಾಗೂ ತೆಲಂಗಾಣ ರಾಜ್ಯದಲ್ಲಿ ಚುನಾವಣೆ ನಡೆಯಲಿದ್ದು ಇದೀಗ ಕಾಂಗ್ರೆಸ್(Congress) ಈ ಮೂರು ರಾಜ್ಯಗಳ ಚುನಾವಣೆಗೆ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೊಳಿಸಿದೆ.

ಹೌದು, ಛತ್ತೀಸ್‌ಗಢದಲ್ಲಿ ನ.7 ಹಾಗೂ 17ರಂದು, ಮಧ್ಯಪ್ರದೇಶದಲ್ಲಿ ನ.17ರಂದು ಹಾಗೂ ತೆಲಂಗಾಣದಲ್ಲಿ ನ.30ರಂದು ಮತದಾನ ನಡೆಯಲಿದ್ದು, ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯಾಗಿ 229 ಜನರ ಹೆಸರು ಪ್ರಕಟ ಮಾಡಿದೆ. ಅಲ್ಲದೆ ಅಚ್ಚರಿ ಎಂಬಂತೆ ಬಿಜೆಪಿ ಮಾದರಿ ಹಲವು ಹಾಲಿ ಸಂಸದರನ್ನು ಕೂಡ ಕಾಂಗ್ರೆಸ್ ಕಣಕ್ಕಿಳಿಸಿದೆ.

ಅಂದಹಾಗೆ ಮಧ್ಯಪ್ರದೇಶಕ್ಕೆ 144, ಛತ್ತೀಸ್‌ಗಢಕ್ಕೆ 30 ಹಾಗೂ ತೆಲಂಗಾಣಕ್ಕೆ 55 ಅಭ್ಯರ್ಥಿಗಳನ್ನು ಕಾಂಗ್ರೆಸ್ ಪ್ರಕಟಿಸಿದ್ದು, ಮಧ್ಯಪ್ರದೇಶದಲ್ಲಿ ಪಕ್ಷದ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಕಮಲನಾಥ್‌ ಅವರಿಗೆ ಅವರ ಕ್ಷೇತ್ರವಾದ ಚಿಂದ್ವಾರಾ, ಮಾಜಿ ಮುಖ್ಯಮಂತ್ರಿ ದಿಗ್ವಿಜಯ್‌ ಸಿಂಗ್‌ ಪುತ್ರ ಜೈವರ್ಧನ್‌ ಸಿಂಗ್‌ ಅವರಿಗೆ ರಾಘೋಘಡದ ಟಿಕೆಟ್‌ ಘೋಷಿಸಿದೆ.

ಅಲ್ಲದೆ ಛತ್ತೀಸಗಢದಲ್ಲಿ ಮುಖ್ಯಮಂತ್ರಿ ಭೂಪೇಶ್ ಬಫೇಲ್ ಅವರು ಪಟಾನ್‌ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಅಂಬಿಕಾಪುರ ವಿಧಾನಸಭಾ ಕ್ಷೇತ್ರಕ್ಕೆ ಉಪಮುಖ್ಯಮಂತ್ರಿ ಟಿ.ಎಸ್.ಸಿಂಗ್ ದೇವ್ ಅವರಿಗೆ ಟಿಕೆಟ್ ನೀಡಲಾಗಿದೆ. ತೆಲಂಗಾಣ ಕಾಂಗ್ರೆಸ್ ಮುಖ್ಯಸ್ಥೆ ಅನುಮಾಲಾ ರೇವಂತ್‌ ರೆಡ್ಡಿ ಕೊಡಂಗಲ್ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಸಿಎಲ್‌ಪಿ ನಾಯಕ ವಿಕ್ರಮಾರ್ಕ ಮಲ್ಲು ಮದಿರಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದಾರೆ.

ಇದನ್ನೂ ಓದಿ:Hike bus ticket fare: ಬಸ್ ಪ್ರಯಾಣಿಕರಿಗೆ ಬೆಳ್ಳಂಬೆಳಗ್ಗೆ ಶಾಕಿಂಗ್ ನ್ಯೂಸ್ – ಟಿಕೆಟ್ ದರದಲ್ಲಿ ದುಪ್ಪಟ್ಟು ಏರಿಕೆ !! 

You may also like

Leave a Comment