Snake Found In Autorickshaw:ದಿನಂಪ್ರತಿ ಅದೆಷ್ಟೋ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತದೆ. ಆದರಲ್ಲಿ ಕೆಲವು ನಮ್ಮನ್ನು ಅಚ್ಚರಿಗೆ ತಳ್ಳಿದರೆ, ಮತ್ತೆ ಕೆಲವು ನಗೆಗಡಲಲ್ಲಿ ತೇಲಿಸುತ್ತವೆ. ಇದೀಗ, ವೈರಲ್(Viral Video)ಆದ ವೀಡಿಯೋವೊಂದು ನೋಡುಗರನ್ನು ಅಚ್ಚರಿಗೆ ತಳ್ಳಿದ್ದು ಮಾತ್ರವಲ್ಲದೇ ಭಯ ಹುಟ್ಟಿಸಿದೆ.
ಪ್ರತಿಯೊಬ್ಬರಿಗೂ ಯಾವುದಾದರೂ ಒಂದು ರೀತಿಯ ಭಯ ಇರುವುದು ಸಹಜ. ಕೆಲವರಿಗೆ ರಾತ್ರಿ ಎಂದರೆ ಭಯ, ಮತ್ತೆ ಕೆಲವರಿಗೆ ಕತ್ತಲು, ಹಾವು, ಜಿರಳೆ ಎಂದರೆ ಸಾಕು ಭಯದಲ್ಲಿ ಕಿರುಚಾಡುವುದನ್ನು ನೋಡಿರಬಹುದು. ಹಾವು ಎಂದರೆ ಹೆದರದೇ ಇರುವವರು ವಿರಳ. ಇದೀಗ ನಾಗರಹಾವಿಗೆ ಸಂಬಂಧಿಸಿದ ವಿಡಿಯೋವೊಂದು ವೈರಲ್ ಆಗಿದೆ.
ಹಾವೊಂದು ಆಟೋ ರಿಕ್ಷಾದ ಮೇಲೆ ಸಂಚರಿಸುತ್ತಿರುವ ದೃಶ್ಯ ವೈರಲ್ ಆಗಿ ಸಂಚಲನ ಮೂಡಿಸಿದೆ. ಈ ಹಾವು ಆಟೋ ರಿಕ್ಷಾದ(Snake Found In Autorickshaw) ಛಾವಣಿ ಏರಲು ಪ್ರಯತ್ನಿಸುವ ದೃಶ್ಯವನ್ನು ನೋಡುಗರ ಮೈ ಜುಮ್ ಎನಿಸುತ್ತದೆ. ಮುಂಬೈಯ ಬದ್ಲಾಪುರ್ ರೈಲ್ವೆ ನಿಲ್ದಾಣದ ಹತ್ತಿರ ಸೆರೆಯಾದ ದೃಶ್ಯವಿದು ಎನ್ನಲಾಗಿದೆ. ಅಕ್ಟೋಬರ್ 12ರಂದು ಹಂಚಿಕೊಂಡಿರುವ ಈ ವಿಡಿಯೋ ಹೆಚ್ಚು ವೀಕ್ಷಣೆ ಪಡೆದಿದೆ. ಆಟೋ ರಿಕ್ಷಾದ ಹಿಂದೆ ಏಕಾಏಕಿ ನಾಗರಹಾವು ಪ್ರತ್ಯಕ್ಷವಾಗಿದ್ದು, ಹೆಡೆ ಎತ್ತಿದ್ದ ನಾಗರ ಹಾವನ್ನು ಕಂಡು ಅಲ್ಲಿದ್ದ ಮಂದಿ ದಿಗಿಲುಗೊಂಡಿದ್ದಾರೆ. ನಾಗರ ಹಾವಿನ ಈ ದೃಶ್ಯ ನೋಡುಗರಲ್ಲಿ ನಡುಕ ಹುಟ್ಟಿಸಿದ್ದು, ಅದೆಷ್ಟೋ ಹೊತ್ತಿನವರೆಗೆ ನಾಗರಹಾವು ಆ ಆಟೋ ರಿಕ್ಷಾದ ಬಳಿಯೇ ಠಿಕಾಣಿ ಹೂಡಿತ್ತು.
ಸದ್ಯ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ಕ್ಲಿಪ್‌ನಲ್ಲಿ ಆಟೋದ ಹಿಂಬದಿಯಲ್ಲಿ ಹಾವೊಂದು ಸಾಗುತ್ತಿರುವ ದೃಶ್ಯವನ್ನು ನೋಡಬಹುದಾಗಿದ್ದು, ಹೆಡೆ ಎತ್ತಿದ ನಾಗರ ಹಾವು ಛಾವಣಿಯನ್ನೇರಲು ಪ್ರಯತ್ನಿಸುವುದು ಕಂಡುಬರುತ್ತದೆ. ನಾಗರಹಾವಿನ ಈ ಕಸರತ್ತನ್ನು ಕೆಲವರು ಕುತೂಹಲದಿಂದ ವೀಕ್ಷಿಸಿದರೆ ಮತ್ತೆ ಕೆಲವರು ವೀಡಿಯೋ ಸೆರೆ ಹಿಡಿಯುತ್ತಿರುವ ದೃಶ್ಯ ವೈರಲ್ ಆಗಿರುವ ವೀಡಿಯೋದಲ್ಲಿ ಸೆರೆಯಾಗಿದೆ. ತಮ್ಮ ರಿಕ್ಷಾ ಸ್ಟ್ಯಾಂಡ್‌ನಲ್ಲಿ ಹಾವನ್ನು ಕಂಡ ಚಾಲಕರು ಕೆಲವು ಚಾಲಕರು ಕೆಲ ಕಾಲ ಬೆಚ್ಚಿ ಬಿದ್ದಿದ್ದಾರೆ.
