Home » Murder Case: ಪ್ರಿಯತಮನ ಜೊತೆ ಸೇರಿ ಅತ್ತೆಯನ್ನೇ ಪರಂದಾಮಕ್ಕೆ ಕಳಿಸಿದ್ಲು ಈ ಖತರ್ನಾಕ್ ಸೊಸೆ – ಸಾವಿನ ಸುಳಿವು ಕೊಡ್ತು ಮೊಬೈಲ್ ಚಾಟ್

Murder Case: ಪ್ರಿಯತಮನ ಜೊತೆ ಸೇರಿ ಅತ್ತೆಯನ್ನೇ ಪರಂದಾಮಕ್ಕೆ ಕಳಿಸಿದ್ಲು ಈ ಖತರ್ನಾಕ್ ಸೊಸೆ – ಸಾವಿನ ಸುಳಿವು ಕೊಡ್ತು ಮೊಬೈಲ್ ಚಾಟ್

1 comment
Murder case

Murder Case:ದಿನಂಪ್ರತಿ ಅದೆಷ್ಟೊ ಕ್ರಿಮಿನಲ್ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಇದೀಗ, ಸೊಸೆಯೊಬ್ಬಳು ಪ್ರಿಯಕರನ ಜೊತೆ ಸೇರಿಕೊಂಡು ಅತ್ತೆಯನ್ನು ಕೊಲೆ(Murder Case)ಮಾಡಿರುವ ಘಟನೆ ವರದಿಯಾಗಿದೆ. ಅತ್ತೆಯನ್ನು ಕೊಂದದ್ದು ಯಾಕೆ ಎಂದು ಕೇಳಿದರೆ ನೀವು ಶಾಕ್ ಆಗೋದು ಗ್ಯಾರಂಟಿ!! ಅದರಲ್ಲಿಯೂ ಅತ್ತೆಯನ್ನು ಕೊಂದ ಸೊಸೆ ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ??

ಬ್ಯಾಡರಹಳ್ಳಿಯಲ್ಲಿ ಈ ಕೊಲೆ (Byadarahalli murder) ನಡೆದಿದ್ದು, ಮಂಜುನಾಥ್ ಎಂಬವರನ್ನು ಮದುವೆಯಾಗಿದ್ದ ರಶ್ಮಿ ಎಂಬಾಕೆ ತಮ್ಮ ಮನೆಯ ಮೇಲಿನ ಭಾಗದಲ್ಲಿ ಬಾಡಿಗೆಗಿದ್ದ ಅಕ್ಷಯ್ ಎಂಬುವವನ ಜೊತೆಗೆ ಅನೈತಿಕ ಸಂಬಂಧ(Illegal Relationship)ಹೊಂದಿದ್ದಳು. ಈ ನಡುವೆ, ಮನೆಯ ಆಡಳಿತ ತನ್ನ ಕೈಗೆ ಸಿಗಬೇಕು ಎಂಬ ದುರಾಸೆ ಹೊಂದಿದ್ದ ಸೊಸೆ ಅತ್ತೆಯನ್ನು ಪ್ರಿಯಕರನ ಜೊತೆಗೆ ಸೇರಿ ಕೊಂದುಹಾಕಿ (Murder Case) ನಂತರ ಅತ್ತೆಗೆ ಹಾರ್ಟ್ ಅಟ್ಯಾಕ್ ಆಗಿದೆ ಎಂದು ಎಲ್ಲರನ್ನೂ ನಂಬಿಸಿದ್ದಾಳೆ.

Murder case

ಮನೆಯ ಹಣದ ವ್ಯವಹಾರಕ್ಕೆ ಲಕ್ಷ್ಮಮ್ಮ ಹಾಗೂ ರಶ್ಮಿ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು. ತಾನೇ ಮನೆ ವ್ಯವಹಾರ ನೋಡಿಕೊಳ್ಳಬೇಕೆಂದು ರಶ್ಮಿ ತನ್ನ ಪ್ರಿಯಕರನ ನೆರವಿನಿಂದ ಅತ್ತೆಯನ್ನು ಮುಗಿಸುವ ಪ್ಲಾನ್ ಮಾಡಿದ್ದಾಳೆ. ಈ ನಿಟ್ಟಿನಲ್ಲಿ ಅತ್ತೆಗೆ ಮೊದಲು ನಿದ್ರೆ ಮಾತ್ರೆನೀಡಿದ ರಶ್ಮಿ, ನಂತರ ಪ್ರಿಯಕರ ಅಕ್ಷಯ್ ಮತ್ತು ಪುರುಷೋತ್ತಮ್ ಜೊತೆ ಸೇರಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಆದರೆ ಈಕೆಯ ಕೃತ್ಯ ಒಂದು ಮೊಬೈಲ್‌ ಚಾಟಿಂಗ್‌ ಮೂಲಕ ಬೆಳಕಿಗೆ ಬಂದಿದೆ. ಅದೇ ಬಿಲ್ಡಿಂಗ್‌ನಲ್ಲಿ ವಾಸವಿದ್ದ ರಾಘವೇಂದ್ರ ಎಂಬವರಿಂದ ಈ ವಿಚಾರ ಬೆಳಕಿಗೆ ಬಂದಿದೆ.
ಅಕ್ಷಯ್ ಮೊಬೈಲ್ ಪರಿಶೀಲಿಸಿದ್ದ ರಾಘವೇಂದ್ರ ಅವರಿಗೆ, ಅಕ್ಷಯ್ ಮತ್ತು ರಶ್ಮಿ ನಡುವೆ ನಡೆದ ಚಾಟಿಂಗ್ ವಿಚಾರ ತಿಳಿದು ರಶ್ಮಿಯ ಪತಿ ಮಂಜುನಾಥ್‌ಗೆ ಈ ವಿಚಾರ ತಿಳಿಸಿದ್ದಾರೆ. ಇದರ ಜೊತೆಗೆ ಚಾಟಿಂಗ್ ಮಾಡಿರುವ ಸಾಕ್ಷ್ಯ ಕೂಡ ಕಲೆ ಹಾಕಿ ಮಂಜುನಾಥ್ ಅವರಿಗೆ ನೀಡಿದ್ದು,ರಶ್ಮಿ ಪತಿ ಮಂಜುನಾಥ್ ಬ್ಯಾಡರಹಳ್ಳಿ ಠಾಣೆಗೆ ಈ ಕುರಿತು ದೂರು ದಾಖಲಿಸಿದ್ದಾರೆ. ಸದ್ಯ ರಶ್ಮಿ, ಪುರುಷೋತ್ತಮ್, ಅಕ್ಷಯ್ ಎಂಬ ಮೂವರು ಆರೋಪಿಗಳನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: Gruha Jyothi Scheme Burden :ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್ ಶಾಕ್- 10 – 20 ರೂ. ಬರ್ತಿದ್ದ ವಿದ್ಯುತ್‌ ಬಿಲ್‌’ನಲ್ಲಿ ಭಾರೀ ಹೆಚ್ಚಳ !!

You may also like

Leave a Comment