Home » Cloth Cleaning Tips: ದಿನನಿತ್ಯ ಬಳಸೋ ಬಟ್ಟೆಗಳು ಬೇಗ ಹಾಳಾಗುತ್ತೆಯೇ ?! ಹಾಗಿದ್ರೆ ವಾಶ್ ಮಾಡುವಾಗ ಈ ಟಿಪ್ಸ್ ಫಾಲೋ ಮಾಡಿ

Cloth Cleaning Tips: ದಿನನಿತ್ಯ ಬಳಸೋ ಬಟ್ಟೆಗಳು ಬೇಗ ಹಾಳಾಗುತ್ತೆಯೇ ?! ಹಾಗಿದ್ರೆ ವಾಶ್ ಮಾಡುವಾಗ ಈ ಟಿಪ್ಸ್ ಫಾಲೋ ಮಾಡಿ

0 comments
Cloth Cleaning Tips

Cloth Cleaning Tips: ಕೆಲವರು ಬಟ್ಟೆಯನ್ನು ಕೈನಲ್ಲಿಯೇ ಸ್ವಚ್ಛಮಾಡ್ತಾರೆ. ಮತ್ತೆ ಕೆಲವರು ವಾಷಿಂಗ್ ಮೆಷಿನ್ (Washing Machine )ಮೂಲಕ ಕ್ಲೀನ್ (Clean) ಮಾಡ್ತಾರೆ. ವಿಧಾನ ಯಾವುದೇ ಇರಲಿ ಆದರೆ ಆ ಸಮಯದಲ್ಲಿ ನಾವು ಮಾಡುವ ಕೆಲ ತಪ್ಪುಗಳು ಬಟ್ಟೆ ಹಾಳಾಗಲು ಅಥವಾ ಕೊಳೆ ಹೋಗದಿರಲು ಕಾರಣವಾಗುತ್ತದೆ. ಆ ತಪ್ಪುಗಳು ಯಾವುದು ಅನ್ನೋದು ಇಲ್ಲಿ ತಿಳಿಯಿರಿ(Cloth Cleaning Tips).

ಬಟ್ಟೆ ತೊಳೆಯೋದು ಮಹಾ ಕೆಲಸ ಏನೂ ಅಲ್ಲ. ನಾವು ಯಾವ ರೀತಿ ತೊಳೆಯುತ್ತೇವೆ ಅನ್ನೋದು ಮುಖ್ಯ. ಹೌದು, ನೀವು ಎಲ್ಲಾ ಬಟ್ಟೆಯನ್ನು ಒಂದೇ ದಿನ ತೊಳೆಯಲೆಂದು ರಾಶಿ ಹಾಕದಿರಿ. ಎರಡು ದಿನಕ್ಕೊಮ್ಮೆಯಾದರೂ ಬಟ್ಟೆ ಒಗೆದು ಹಾಕಿ ಆಗ ನಿಮಗೆ ಬಟ್ಟೆ ಒಗೆಯುವುದು ಸುಲಭ ಆಗುತ್ತದೆ. ಮತ್ತು ತಾಳ್ಮೆಯಿಂದ ಒಗೆಯಲು ಸಾಧ್ಯವಾಗುತ್ತದೆ.

ಇನ್ನು ವಾರಗಳ ಕಾಲ ಇಟ್ಟ ಉಡುಪನ್ನು ಒಂದೇ ದಿನ ವಾಷಿಂಗ್ ಮೆಷಿನ್ ಗೆ ಹಾಕುವಾಗ ಅದರಿಂದ ಮುಗ್ಗುಲು ಹಿಡಿದ ವಾಸನೆ ಬರುವುದು ಸಾಮಾನ್ಯ. ಯಾವ ಪೌಡರ್, ಲಿಕ್ವಿಡ್ ಬಳಸಿದರೂ ಇದು ಹೋಗುವುದಿಲ್ಲ. ಅಂಥ ಸಂದರ್ಭದಲ್ಲಿ ಉಡುಪುಗಳನ್ನು ಒಮ್ಮೆ ನೀರಿನಲ್ಲಿ ಹಿಂಡಿ ವಾಸನೆ ದೂರವಾಗಿಸಿ ಬಳಿಕ ವಾಷಿಂಗ್ ಮೆಷಿನ್ ಗೆ ಹಾಕಿ.

ಮುಖ್ಯವಾಗಿ ಬಿಳಿಬಟ್ಟೆಯನ್ನು ಪ್ರತ್ಯೇಕವಾಗಿ ತೊಳೆಯಿರಿ. ಇತರ ಬಣ್ಣದ ಉಡುಪುಗಳ ಜೊತೆ ಸೇರಿಸಿ ಬಿಳಿ ಬಟ್ಟೆ ತೊಳೆದಾಗ ಅವುಗಳ ಬಣ್ಣ ಒಂದಕ್ಕೊಂದು ಅಂಟುವ ಸಾಧ್ಯತೆ ಇದೆ. ಹಾಗಾಗಿ ಬಿಳಿ ಬಟ್ಟೆಗಳನ್ನು ಹ್ಯಾಂಡ್ ವಾಶ್ ಮಾಡುವುದೇ ಒಳ್ಳೆಯದು.

ಇನ್ನು ತೊಳೆದ ಬಟ್ಟೆ ಒಣಗಿಸುವಾಗ ಸಲೀಸಾಗಿ ಹಗ್ಗದ ಮೇಲೆ ಹಾಕಿ, ಬಿಸಿಲಿನಲ್ಲಿ ಒಣಗಿಸಿದರೆ ಸೂಕ್ತ ಆದರೆ ಹೆಚ್ಚು ಹೊತ್ತು ಪ್ರಖರ ಬಿಸಿಲಿನಲ್ಲಿ ಬಿಡಬೇಡಿ ಒಣಗಿದ ತಕ್ಷಣ ತೆಗೆದು ಮಡಚಿ ಇಡಿ.

ನೀವು ಲೇಬಲ್ ಓದದೇ ಬಟ್ಟೆ ತೊಳೆಯಲು ಹಾಕಬೇಡಿ. ಯಾವುದೇ ಹೊಸ ಬಟ್ಟೆಯನ್ನು ತೊಳೆಯುವ ಮೊದಲು ಲೇಬಲ್ ಅನ್ನು ಪರಿಶೀಲಿಸಬೇಕು. ಆಗ ಇದನ್ನು ಯಾವ ರೀತಿ ತೊಳೆಯಬೇಕು ಎಂಬುದು ತಿಳಿಯುತ್ತದೆ.

ತುಂಬಾ ಹೆಚ್ಚಿನ ಟೆಂಪರೇಚರ್ನಲ್ಲಿ ಬಟ್ಟೆ ಒಗೆಯುವುದು ಮತ್ತು ಒಣಗಿಸುವುದು ಬಟ್ಟೆ ಹಾಳಾಗಲು ಕಾರಣವಾಗುತ್ತದೆ. ಅದರಲ್ಲಿನ ದಾರಗಳು ಹೊರ ಬರುತ್ತದೆ. ತೂತಾಗುವ ಸಾಧ್ಯತೆ ಇರುತ್ತದೆ. ಅಲ್ಲದೇ ಬೇಗ ಸವೆದು ಹೋಗಿ, ಹೆಚ್ಚು ದಿನಗಳ ಕಾಲ ಬಾಳಿಕೆ ಬರುವುದಿಲ್ಲ.

ಇನ್ನು ಒದ್ದೆ ಬಟ್ಟೆಯನ್ನು ಹೆಚ್ಚಿನ ಸಮಯ ಮೆಷಿನ್​ನಲ್ಲಿ ಬಿಡಬೇಡಿ. ಇದು ಬಟ್ಟೆಯನ್ನು ಹಾಳು ಮಾಡುತ್ತದೆ. ಜೊತೆಗೆ ತೊಳೆದ ರೀತಿ ಅನಿಸುವುದಿಲ್ಲ. ಮತ್ತೊಮ್ಮೆ ತೊಳೆಯಬೇಕಾಗುವ ಸಂದರ್ಭ ಬರಬಹುದು.

ಬಟ್ಟೆಗಳಲ್ಲಿ ಜಿಪ್ ಇರುವುದು ಸಾಮಾನ್ಯ, ಆದರೆ ವಾಷಿಂಗ್​ ಮೆಷಿನ್​ಗೆ ಹಾಕುವಾಗ ಅದನ್ನು ಕ್ಲೋಸ್ ಮಾಡಬೇಕು. ಆದರೆ ಬಹುತೇಕ ಮಂದಿ ಈ ಕೆಲಸವನ್ನು ಮಾಡುವುದಿಲ್ಲ. ಅದು ಬೇರೆ ಬಟ್ಟೆಗಳ ದಾರ ಸಿಲುಕಿ ಹಾಳಾಗುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ: ಬಿಳಿ ಕೂದಲನ್ನು ಶಾಶ್ವತ ಕಪ್ಪಾಗಿಸಲು ಅರಿಶಿನದಲ್ಲಿ ಈ ಪದಾರ್ಥ ಬೆರೆಸಿ, ಹಚ್ಚಿ – ಸಂಜೆ ಹೊತ್ತಿಗೆ ಆಗೋ ಮ್ಯಾಜಿಕ್ ನೋಡಿ

You may also like

Leave a Comment