Home » Mahalingeshwara swamiji: ನರೇಂದ್ರ ಮೋದಿಯನ್ನು ಪ್ರಧಾನಿ ಮಾಡೋ ವಿಚಾರ- ತನ್ನ ಭವಿಷ್ಯದ ಬಗ್ಗೆ ತಾನೇ ಉಲ್ಟಾ ಹೊಡೆದ ಮಹಾಲಿಂಗೇಶ್ವರ ಸ್ವಾಮೀಜಿ

Mahalingeshwara swamiji: ನರೇಂದ್ರ ಮೋದಿಯನ್ನು ಪ್ರಧಾನಿ ಮಾಡೋ ವಿಚಾರ- ತನ್ನ ಭವಿಷ್ಯದ ಬಗ್ಗೆ ತಾನೇ ಉಲ್ಟಾ ಹೊಡೆದ ಮಹಾಲಿಂಗೇಶ್ವರ ಸ್ವಾಮೀಜಿ

1 comment
Mahalingeshwara swamiji

Mahalingeshwara swamiji: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಯಾರು ಅಧಿಕಾರಕ್ಕೆ ಬರುತ್ತಾರೆ ಎಂದು ಇತ್ತೀಚಿನ ದಿನಗಳಲ್ಲಿ ಹಲವಾರು ಸ್ವಾಮಿಗಳು, ಜ್ಯೋತಿಷ್ಯಿಗಳು ಭವಿಷ್ಯ ನುಡಿಯನ್ನು ನುಡಿದ್ದಾರೆ. ಕೆಲವು ಭವಿಷ್ಯಗಳು ಅಚ್ಚರಿಯನ್ನೂ ಉಂಟುಮಾಡಿವೆ. ಅಂತೆಯೇ ಮೊನ್ನೆ ತಾನೆ ಮಹಾಲಿಂಗಾಪುರದ ಮಹಲಿಂಗೇಶ್ವರ ಮಠದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರು(Mahalingeshwara swamiji) ಭವಿಷ್ಯ ನುಡಿದಿದ್ದು, ಅದರ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಆದರೀಗ ವಿಡಿಯೋ ವೈರಲ್ ಆಗುತ್ತಿದ್ದಂತೆ ತನ್ನ ಭವಿಷ್ಯದ ಬಗ್ಗೆ ಸ್ವಾಮಿಜಿಗಳು ಉಲ್ಟಾ ಹೊಡೆದಿದ್ದಾರೆ.

ಹೌದು, ಮೊನ್ನೆ ಮೊನ್ನೆ ತಾನೆ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಾಪುರದ ಮಹಲಿಂಗೇಶ್ವರ ಮಠದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ವಿಡಿಯೋ ವೈರಲ್‌ ಆಗಿತ್ತು. ಆ ವಿಡಿಯೋದಲ್ಲಿ ಸ್ವಾಮೀಜಿಗಳು ‘ದೇಶದಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೋದಿಯನ್ನು ಆರಿಸಿ ತಂದ್ರೆ ಎಲ್ಲರೂ ಉಳಿತೀರಿ. ಮೋದಿ ಆರಿಸಿ ತರಲಿಲ್ಲಾಂದ್ರ ಯಾರೂ ಉಳಿಯೊಲ್ಲ’ ಎಂದು ಸ್ಫೋಟಕ ಭವಿಷ್ಯ ನುಡಿದಿದ್ದರು. ಈ ವಿಡಿಯೋ ವೈರಲ್ ಆಗುತ್ತಾ ಸಾಕಷ್ಟು ಚರ್ಚೆಯನ್ನೂ ಹುಟ್ಪುಹಾಕಿತ್ತು. ಆದರೀಗ ಈ ಬಗ್ಗೆ ಸ್ವತಃ ಸ್ವಾಮೀಜಿ ಸ್ಪಷ್ಟೀಕರಣ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಸ್ವಾಮಿಗಳು ದೇಶದಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೋದಿಯನ್ನು ಆರಿಸಿ ತಂದ್ರೆ ಎಲ್ಲರೂ ಉಳಿತೀರಿ. ಮೋದಿ ಆರಿಸಿ ತರಲಿಲ್ಲಾಂದ್ರ ಯಾರೂ ಉಳಿಯೊಲ್ಲ’ ಎಂದು ನಾನು ಯಾವುದನ್ನೂ, ಏನನ್ನೂ ಹೇಳಿಲ್ಲ. ಯಾರೋ ಕಿಡಿಗೇಡಿಗಳು ಈ ರೀತಿ ವಿಡಿಯೋ ಹರಿಬಿಟ್ಟಿದ್ದಾರೆ. ನನಗೆ ಈ ಬಗ್ಗೆ ಯಾವುದೂ ಗೊತ್ತಿಲ್ಲ. ನಾನು ಪಕ್ಷಾತೀತವಾಗಿ ಮಾತನಾಡಿಲ್ಲ ಎಂದು ಹೇಳಿದ್ದಾರೆ.

ಅಂದಹಾಗೆ ಇತ್ತೀಚೆಗಷ್ಟೆ ವೈರಲ್ ಆದ ವಿಡಿಯೋದಲ್ಲಿ ಮಹಲಿಂಗೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಹಿನ್ನೆಲೆ ನಡೆದ ವಿಶೇಷ ಪೂಜೆಯ ನಂತರ ಜಟ ಹಿಡಿದು ಸ್ವಾಮೀಜಿಗಳು ಭವಿಷ್ಯ ನುಡಿಯುತ್ತಿದ್ದರು. ಈ ವೇಳೆ ಮಹಲಿಂಗೇಶ್ವರ ಸ್ವಾಮೀಜಿ ಅವರು, ಜಟ ಹಿಡಿದು ಪ್ರದರ್ಶನ ಮಾಡುತ್ತಾ “ಇದರ ಮೇಲೆ ಏನಾದ್ರೂ ವ್ಯತ್ಯಾಸ ಮಾಡಿದ್ರಿ ಅಂದ್ರ ಉಳಿತೀರಿ, ಮೋದಿನ ಆರಿಸಿ ತರ್ಲಿಲ್ಲಾಂದ್ರ ನೀವ್ಯಾರೂ ಉಳಿಯಲ್ಲ” ಎಂದು ಹೇಳಿದ್ದರು. ಆದರೀಗ ಸ್ವಾಮೀಜಿಗಳು ನಾನು ಹಾಗೆ ಹೇಳಿಲ್ಲ ಎನ್ನುತ್ತಿದ್ದಾರೆ.

ಇದನ್ನೂ ಓದಿ: Congress guaranty: ಮಹಿಳೆಯರಿಗೆ 10 ಗ್ರಾಂ ಚಿನ್ನ, 1 ಲಕ್ಷ ಹಣ, ಉಚಿತ ಇಂಟರ್ನೆಟ್ ಸೌಲಭ್ಯ- ಮತ್ತೆ ಹೊಸ ಗ್ಯಾರಂಟಿಗಳನ್ನು ಘೋಷಿಸಿದ ಕಾಂಗ್ರೆಸ್

You may also like

Leave a Comment