Home » Diwali Bonus 2023:ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ಮೇಲೆ ಗುಡ್ ನ್ಯೂಸ್ – ದೀಪಾವಳಿಗೆ ಬಂಪರ್ ಬೋನಸ್ ಘೋಷಿಸಿದ ಕೇಂದ್ರ !!

Diwali Bonus 2023:ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ಮೇಲೆ ಗುಡ್ ನ್ಯೂಸ್ – ದೀಪಾವಳಿಗೆ ಬಂಪರ್ ಬೋನಸ್ ಘೋಷಿಸಿದ ಕೇಂದ್ರ !!

2 comments
Diwali Bonus 2023

Diwali Bonus 2023: ಕೇಂದ್ರ ಸರ್ಕಾರಿ (Central Government Employees)ನೌಕರರಿಗೆ ಭರ್ಜರಿ ಗುಡ್ ನ್ಯೂಸ್ ಇಲ್ಲಿದೆ. ಕೇಂದ್ರ ಸರ್ಕಾರವು ದೀಪಾವಳಿ ಹಬ್ಬಕ್ಕೆ (Deepavali)ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಉಡುಗೊರೆ ಘೋಷಣೆ ಮಾಡಿದ್ದು,ಯಾವುದೇ ಉತ್ಪಾದಕತೆ ಲಿಂಕ್ಡ್ ಬೋನಸ್ ಯೋಜನೆಯ ವ್ಯಾಪ್ತಿಗೆ ಸೇರದ ಕೇಂದ್ರ ಸರ್ಕಾರದ ಗ್ರೂಪ್ ಬಿ ಮತ್ತು ಗ್ರೂಪ್ ಸಿ ಅಡಿಯಲ್ಲಿ ಗೆಜೆಟೆಡ್ ಅಲ್ಲದೇ ಇರುವಂತಹ ಉದ್ಯೋಗಿಗಳಿಗೆ ದೀಪಾವಳಿ ಬೋನಸ್ (Diwali Bonus 2023)ನೀಡುವ ಕುರಿತು ಮೋದಿ ಸರಕಾರ ಘೋಷಣೆ ಮಾಡಿ ದೀಪಾವಳಿ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿದೆ.

ಕೇಂದ್ರ ಅರೆಸೈನಿಕ ಪಡೆಗಳು ಮತ್ತು ಸಶಸ್ತ್ರ ಪಡೆಗಳ ಅರ್ಹ ಉದ್ಯೋಗಿಗಳಿಗೆ ಉತ್ಪಾದಕತೆ ಲಿಂಕ್ಡ್ ಬೋನಸ್ ಅಂದರೆ ತಾತ್ಕಾಲಿಕ ಬೋನಸ್ ಸೌಲಭ್ಯ ಕೂಡ ಸಿಗಲಿರುವ ಕುರಿತು ಹಣಕಾಸು ಸಚಿವಾಲಯದ ವೆಚ್ಚ ಇಲಾಖೆ ಮಾಹಿತಿ ನೀಡಿದೆ. 2022-23ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಗೆಜೆಟೆಡ್ ಅಲ್ಲದಿರುವ ಉದ್ಯೋಗಿಗಳಿಗೆ 7000 ರೂ.ಗಳ ಬೋನಸ್ ನೀಡುವ ಕುರಿತು ಅಕ್ಟೋಬರ್ 17ರಂದು ಸಚಿವಾಲಯ ಘೋಷಣೆ ಮಾಡಿದೆ. ಹಣಕಾಸು ಸಚಿವಾಲಯದ ವೆಚ್ಚ ಇಲಾಖೆಯ ಹೇಳಿಕೆಯ ಅನುಸಾರ, 2023 ರ ಮಾರ್ಚ್ 31 ರವರೆಗೆ ಸೇವೆಯಲ್ಲಿದ್ದ ಮತ್ತು 2022-23ನೇ ಸಾಲಿನಲ್ಲಿ ಕನಿಷ್ಠ 6 ತಿಂಗಳು ಕೆಲಸ ಮಾಡಿದ ಕೇಂದ್ರ ಸರ್ಕಾರಿ ನೌಕರರಿಗೆ ಈ ಬೋನಸ್ ಸಿಗಲಿದೆ. ಇದರ ಅಡಿಯಲ್ಲಿ, ಗ್ರೂಪ್ ಬಿ ಮತ್ತು ಗ್ರೂಪ್ ಸಿ ವರ್ಗದ ನೌಕರರು 30 ದಿನಗಳ ವೇತನಕ್ಕೆ ಸಮಾನವಾದ ಹಣವನ್ನು ಸ್ವೀಕರಿಸಲಿದ್ದಾರೆ.

ಇದನ್ನೂ ಓದಿ: ಕೆಲವೇ ದಿನಗಳಲ್ಲಿ ಮನೆ ಬಾಗಿಲಿಗೇ ಬರಲಿದೆ ‘ಅನ್ನಭಾಗ್ಯ’ದ ಅಕ್ಕಿ – ಆದ್ರೆ ಈ ಲಿಸ್ಟ್ ನಲ್ಲಿ ಹೆಸರಿದ್ದವರಿಗೆ ಮಾತ್ರ

You may also like

Leave a Comment