Home » Viral News: ಗಂಡನಿಂದ ಬಂತು ವಿಚಿತ್ರ ಬೇಡಿಕೆ ; ನಿರಾಕರಿಸಿ ಸೀದಾ ಪೋಲೀಸ್ ಸ್ಟೇಷನ್ ಹೋದ ಹೆಂಡ್ತಿ – ಕೇಳಿದ್ರೆ ನಿಮಗೂ ಕೋಪ ನೆತ್ತಿಗೇರುತ್ತೆ !!

Viral News: ಗಂಡನಿಂದ ಬಂತು ವಿಚಿತ್ರ ಬೇಡಿಕೆ ; ನಿರಾಕರಿಸಿ ಸೀದಾ ಪೋಲೀಸ್ ಸ್ಟೇಷನ್ ಹೋದ ಹೆಂಡ್ತಿ – ಕೇಳಿದ್ರೆ ನಿಮಗೂ ಕೋಪ ನೆತ್ತಿಗೇರುತ್ತೆ !!

1 comment
Viral News

Viral news: ಪತಿ ಆತನ ಗೆಳೆಯರಾದ ನಾರಾಯಣ್ಣ ನಾಯಕ್ (ಬಾಬು), ಅನಂತ್ ಕಾಮತ್ ಮತ್ತು ಲೇಟ್ ವೀರೇಂದ್ರ ಬಳ್ಳಲ್ ಎಂಬವರೊಂದಿಗೆ ಪತ್ನಿ ಜೊತೆಗಿನ ದೈಹಿಕ ಸಂಬಂಧ ನಡೆಸಿರುವ ಬಗ್ಗೆ ಚಾಟ್ ಮಾಡಿದ್ದು, ಇದರೊಂದಿಗೆ ಬೇರೆ ಸೆಕ್ಸ್​ ವರ್ಕರ್ ಬೆಲೆಗಳ ಬಗ್ಗೆಯೂ ನಾಲ್ವರು ಚರ್ಚೆ ನಡೆಸಿರುವುದು ಆತನ ಮೊಬೈಲ್ ನಲ್ಲಿ ಇತ್ತು. ಈ ಚಾಟ್ ಪತ್ನಿ ನೋಡಿದ್ದು, ಈ ಬಗ್ಗೆ ಮಹಿಳೆ ಗಂಡನನ್ನು ಪ್ರಶ್ನಿಸಿದ್ದಾರೆ (Viral news).

ಆಗ ಅದು ನನ್ನ ಇಷ್ಟ, ನಾನು ಏನಾದ್ರೂ ಮಾಡಿಕೊಳ್ಳುತ್ತೇನೆ. ಈ ವಿಷಯವನ್ನು ಪಬ್ಲಿಕ್ ಮಾಡಿದ್ರೆ ನಿನ್ನನ್ನು ಮತ್ತು ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳಲ್ಲ. ಯಾವುದೇ ಜೀವನಾಂಶವನ್ನು ಕೊಡಲ್ಲ ಅಷ್ಟೇ ಅಲ್ಲ ನಿನ್ನನ್ನು ಸಾಯಿಸಿ ಬಿಡುತ್ತೇನೆ ಎಂದು ಗಂಡ ಪತ್ನಿಗೆ ಜೀವ ಬೆದರಿಕೆ ಹಾಕಿದ್ದಾನೆ. ಇದರಿಂದ ಭಯಗೊಂಡ ಪತ್ನಿ ಮಕ್ಕಳನ್ನು ಕರೆದುಕೊಂಡು ನಾನು ತವರು ಮನೆ ಸೇರಿದ್ದಾರೆ.

ನಂತರ ಪಂಚಾಯ್ತಿ ನಡೆಸಿ ವಾಪಾಸ್ ಗಂಡನ ಮನೆಗೆ ಕರೆಸಿದರೂ ಆತ ತನ್ನ ಹಳೇ ಚಾಳಿ ಬಿಡಲೇ ಇಲ್ಲ. ಈಗ ತನ್ನ ಸ್ನೇಹಿತರೊಂದಿಗೆ ದೈಹಿಕ ಸಂಪರ್ಕ ಹೊಂದುವಂತೆ ಒತ್ತಡ ಹಾಕುತ್ತಿದ್ದಾನೆ. ಆತನ ಮಾತು ಕೇಳದಿದ್ದಾಗ ನನ್ನೊಂದಿಗೆ ಗಲಾಟೆ ಮಾಡಿ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ್ದಾನೆ. ಯಾವುದೇ ಹಣಕಾಸಿನ ಸಹಾಯವನ್ನು ಮಾಡುತ್ತಿಲ್ಲ ಎಂದು ಮಹಿಳೆ ಆರೋಪಿಸಿದ್ದಾರೆ.

ಅಂದಹಾಗೆ, 2007ರಲ್ಲಿ ಮಹಿಳೆಗೆ ಮಂಗಳೂರು ಮೂಲದ ಸುಧೀರ್ ಪೈ ಎಂಬಾತನ ಜೊತೆಯಲ್ಲಿ ಮದುವೆಯಾಗಿತ್ತು. ದಂಪತಿಗೆ 11 ಮತ್ತು 10 ವರ್ಷದ ಎರಡು ಮಕ್ಕಳು ಇವೆ. ಸದ್ಯ ಘಟನೆ ಬಗ್ಗೆ
ಮಹಿಳೆ ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ (Amrithhalli Police Station) ದೂರು ದಾಖಲಿಸಿದ್ದು, ಪ್ರಕರಣ ದಾಖಲಾಗಿದೆ.

 

ಇದನ್ನು ಓದಿ: ಮಂಗಳೂರು: ಫುಟ್‌ಪಾತ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯರಿಗೆ ಕಾರು ಡಿಕ್ಕಿ -ಓರ್ವ ಯುವತಿ ಮೃತ್ಯು ,ನಾಲ್ವರು ಗಂಭೀರ !

You may also like

Leave a Comment