Home » Fashion Brand: ಯಾವಾಗ್ಲೂ ಬ್ರಾಂಡೆಡ್ ಆದ, ತುಂಬಾ ಬೆಲೆಬಾಳೋ ವಸ್ತುಗಳನ್ನು ಕೊಂಡುಕೊಳ್ತೀರಾ ?! ಹಾಗಿದ್ರೆ ತಪ್ಪದೇ ಈ ಸ್ಟೋರಿ ನೋಡಿ

Fashion Brand: ಯಾವಾಗ್ಲೂ ಬ್ರಾಂಡೆಡ್ ಆದ, ತುಂಬಾ ಬೆಲೆಬಾಳೋ ವಸ್ತುಗಳನ್ನು ಕೊಂಡುಕೊಳ್ತೀರಾ ?! ಹಾಗಿದ್ರೆ ತಪ್ಪದೇ ಈ ಸ್ಟೋರಿ ನೋಡಿ

3 comments
Fashion Brand

Fashion Brand: ಇಂದು ನಾವು ದಿನಂಪ್ರತಿ ನಾನಾ ಬಗೆಯ ಆವಿಷ್ಕಾರಕ್ಕೆ ತೆರೆದುಕೊಂಡಿದ್ದೇವೆ. ವಿಭಿನ್ನ ಪ್ರಯೋಗಗಳ ಫಲವಾಗಿ ಇಂದು ನಮ್ಮ ಅವಶ್ಯಕತೆಯ ಅನುಸಾರ ಅನೇಕ ವಸ್ತುಗಳು ನಮ್ಮ ಕೈ ಸೇರಿದೆ. ಜನರ ಬೇಡಿಕೆಗೆ ಅನುಗುಣವಾಗಿ ಫ್ಯಾಶನ್ ಲೋಕದಲ್ಲಿ ಸಾಕಷ್ಟು ಬದಲಾವಣೆಯಾಗಿ ಇಂದು ಚಿತ್ರ ವಿಚಿತ್ರ ಬಟ್ಟೆ ಬ್ರಾಂಡ್ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸುತ್ತಿವೆ. ಕಾಲಕ್ಕೆ ತಕ್ಕಂತೆ ಫ್ಯಾಶನ್ ಬದಲಾಗಿ ತನ್ನದೇ ಆದ ಛಾಪನ್ನು ಬ್ರಾಂಡೆಡ್ ಬಟ್ಟೆಗಳು ಪಡೆದುಕೊಂಡಿವೆ. ಹಾಗಿದ್ರೆ, ಉದ್ಯಮವನ್ನು ಕ್ರಾಂತಿಗೊಳಿಸುತ್ತಿರುವ ಅಗ್ರ ಐದು ಫ್ಯಾಶನ್ ಬ್ರ್ಯಾಂಡ್‌ಗಳು (Fashion Brand) ಯಾವುದೆಲ್ಲ ಗೊತ್ತಾ??

ಎಲ್ಲರ ಗಮನ ಸೆಳೆಯುವ ಮೊದಲ 5 ಬ್ರ್ಯಾಂಡ್‌ಗಳು:
*FOReT:
FOReT ಪ್ರೀಮಿಯಂ ಹಾಗೂ ಸುಸ್ಥಿರವಾದ ಸಸ್ಯಾಹಾರಿ-ಸ್ನೇಹಿ ಫ್ಯಾಷನ್ ಬ್ರ್ಯಾಂಡ್ ಆಗಿದ್ದು, ಇದು ಟ್ರೆಂಡಿ ಮತ್ತು ಟೈಮ್‌ಲೆಸ್ ಫ್ಯಾಶನ್ ಪರಿಕರಗಳನ್ನು ನೀಡುವ ಮೂಲಕ ಪರಿಸರ ಸ್ನೇಹಿ ಅಭ್ಯಾಸಗಳನ್ನೊಳಗೊಂಡಿದೆ. PETA ಇಂಡಿಯಾದ 2022 ರ ವೆಗಾನ್ ಫ್ಯಾಶನ್ ಪ್ರಶಸ್ತಿಯಲ್ಲಿ ಅತ್ಯುತ್ತಮ ಸಸ್ಯಾಹಾರಿ ವಾಲೆಟ್ ಎಂಬ ಪುರಸ್ಕಾರಕ್ಕೆ ಈ ಬ್ರ್ಯಾಂಡ್ ಭಾಜನವಾಗಿದೆ.

*GARRTEN(ಗಾರ್ಟನ್):
GARRTEN, ಒಂದು ಐಷಾರಾಮಿ ಬ್ರಾಂಡ್, ಫ್ಯಾಷನ್ ಜಗತ್ತಿನಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ್ದು, ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಕೆಗೆ ಇದು ಪ್ರಸಿದ್ದಿ ಪಡೆದಿದೆ. GARRTEN ಅನೇಕ ಉತ್ಪನ್ನಗಳನ್ನು ಹೊಂದಿದ್ದು, ಮಹಿಳೆಯರಿಗೆ ಪುರುಷರಿಗೆ ಅಗತ್ಯಗಳಿಗೆ ಅನುಸಾರವಾಗಿ ವಿವಿಧ ಬ್ಯಾಗ್‌ಗಳು ಮತ್ತು ಚರ್ಮದ ವಸ್ತುಗಳನ್ನು ಕೂಡ ಈ ಬ್ರ್ಯಾಂಡ್ ಒಳಗೊಂಡಿದೆ. ಇದರ ವಿಶಿಷ್ಟ ಶೈಲಿಯ ಮೂಲಕ GARRTEN ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ವೇಗದ ಜಗತ್ತಿನಲ್ಲಿ, ನಮಗೆ ಉತ್ತಮವಾಗಿ ಕಾಣುವುದರ ಜೊತೆಗೆ ನಮ್ಮ ಉದ್ದೇಶವನ್ನು ಪೂರೈಸುವ ವಸ್ತುಗಳನ್ನು ಕೂಡ ಈ ಬ್ರ್ಯಾಂಡ್ ತಯಾರಿಸುತ್ತಿದೆ.

*ದಿ ಪ್ಯಾಂಟ್ ಪ್ರಾಜೆಕ್ಟ್:
ಪುರುಷರು ಮತ್ತು ಮಹಿಳೆಯರಿಗೆ ಹೆಚ್ಚಿನ ಆಯ್ಕೆಗಳನ್ನು ದಿ ಪ್ಯಾಂಟ್ ಪ್ರಾಜೆಕ್ಟ್ ಒದಗಿಸುತ್ತದೆ. ಅತ್ಯುತ್ತಮವಾಗಿ ಹೊಂದಿಕೊಳ್ಳುವ ಪ್ಯಾಂಟ್‌ಗಳನ್ನು ಇಲ್ಲಿ ಸಿದ್ಧಪಡಿಸಲಾಗುತ್ತದೆ. ಪ್ಯಾಂಟ್ ಪ್ರಾಜೆಕ್ಟ್, ವಿಭಿನ್ನ ದೇಹ ಪ್ರಕಾರಗಳಿಗೆ ಅನುಗುಣವಾಗಿ ಗ್ರಾಹಕರ ಅಗತ್ಯತೆಗಳನ್ನು ಪೂರೈಸಲು ಪ್ಯಾಂಟ್ಗಳನ್ನು ತಯಾರಿಸುವಲ್ಲಿ ಈ ಬ್ರಾಂಡ್ ಪರಿಣತಿ ಹೊಂದಿದೆ. ಎಲ್ಲಾ ಆಕಾರಗಳು ಮತ್ತು ಗಾತ್ರಗಳಿಗೆ ಸರಿಹೊಂದುವಂತೆ ಕಸ್ಟಮ್-ನಿರ್ಮಿತ ಅತ್ಯಂತ ಆರಾಮದಾಯಕವಾದ ಪ್ಯಾಂಟ್‌ಗಳನ್ನು ಪ್ಯಾಂಟ್ ಪ್ರಾಜೆಕ್ಟ್ ಒದಗಿಸುತ್ತದೆ.

*HEFTY.art:
HEFTY.art ಮೂಲಕ ಖ್ಯಾತ ಶಿಲ್ಪಿ ಅರ್ಜಾನ್ ಖಂಬಟ್ಟಾ ಹಾಗೂ ಬೆಂಗಳೂರಿನ ಹೆಸರಾಂತ ವಾಚ್ ಕಂಪನಿಯು, INS ವಿಕ್ರಾಂತ್‌ನ ಅಸಾಧಾರಣ ಪರಂಪರೆಯನ್ನು ನೆನಪಿಸುವ ಸಲುವಾಗಿ ಅಸಾಮಾನ್ಯ ಸಂಗ್ರಹವನ್ನು ಹೊಂದಿದೆ. ಪುರಾತನ ಹಡಗಿನಿಂದ ಮರುಬಳಕೆ ಆಗುವ ಲೋಹದಿಂದ ಇಲ್ಲಿ ಉತ್ಪನ್ನಗಳು ತಯಾರಾಗುತ್ತವೆ. ಹೊಸ ಸಂಗ್ರಹವು ಅರ್ಜಾನ್ ಖಂಬಟ್ಟಾ ವಿನ್ಯಾಸ ಮಾಡಿದ ಐದು ಅನನ್ಯ ಶಿಲ್ಪಗಳ ಜೊತೆಗೆ ಬೆಂಗಳೂರು ವಾಚ್ ಕಂಪನಿಯಿಂದ ಪ್ರತ್ಯೇಕ ರೀತಿಯಲ್ಲಿ ಸಿದ್ದಪಡಿಸಲಾಗಿದ್ದು , 70 ಸೀಮಿತ ಆವೃತ್ತಿಯ ಕೈಗಡಿಯಾರಗಳನ್ನು ಒಳಗೊಂಡಿದೆ.

Chumbak(ಚುಂಬಕ್):
ಚುಂಬಕ್ ಮನೆ ಅಲಂಕಾರ, ಫ್ಯಾಷನ್, ಪರಿಕರಗಳು ಮತ್ತು ವೈಯಕ್ತಿಕ ಆರೈಕೆಗೆ ಬೇಕಾದ ಪರಿಕರಗಳನ್ನು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಸಿದ್ಧವಾಗಿದೆ. ನಿಮ್ಮ ವಾಸಸ್ಥಳ, ನಿಮ್ಮ ಕಚೇರಿ ಮತ್ತು ನಿಮ್ಮ ವಾರ್ಡ್‌ರೋಬ್ ಗೆ ಹೆಚ್ಚು ಮೆರುಗು ನೀಡುವ ನಿಟ್ಟಿನಲ್ಲಿ ವಿನ್ಯಾಸ ಮಾಡಲಾಗಿದೆ. ಮನೆ ಅಲಂಕಾರಿಕ ಜಗತ್ತಿನಲ್ಲಿ, ಚುಂಬಕ್ ಹೆಚ್ಚು ಮೆಚ್ಚುಗೆ ಪಡೆದಿದೆ. ಆಯ್ಕೆಯಾಗಿದೆ. ಅದರ ವಿಶಿಷ್ಟ ವಿನ್ಯಾಸಗಳು ಮತ್ತು ಕಾಲ್ಪನಿಕ ವಿಧಾನದ ಮೂಲಕ ನೋಡುಗರ ಗಮನ ಸೆಳೆಯುತ್ತದೆ.

ಇದನ್ನೂ ಓದಿ: Hair Care: ತಲೆಯ ಹೊಟ್ಟು ವಿಪರೀತ ಆಗಿದ್ಯಾ ?! ಹಾಗಿದ್ರೆ ಇಲ್ಲಿದೆ ನೋಡಿ ಸುಲಭದ ಮನೆ ಮದ್ದು

You may also like

Leave a Comment