Home » Dakshina Kannada: ಕೈ ಕೊಟ್ಟ ಪ್ರೀತಿ; ನೇಣಿಗೆ ಕೊರಳೊಡ್ಡಿದ ಯುವಕ

Dakshina Kannada: ಕೈ ಕೊಟ್ಟ ಪ್ರೀತಿ; ನೇಣಿಗೆ ಕೊರಳೊಡ್ಡಿದ ಯುವಕ

by Mallika
1 comment
Bantwala

Bantwala: ಪ್ರೇಮ ವೈಫಲ್ಯದಿಂದ ನೊಂದು, ಮಾನಸಿಕವಾಗಿ ಕುಗ್ಗಿಹೋದ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಬಂಟ್ವಾಳ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯ ಕಾಮಾಜೆ ಎಂಬಲ್ಲಿ ನಡೆದಿದೆ.

ಕಡೇಶಿವಾಲಯ ಗ್ರಾಮದ ನೆಲ್ಲಿಗುಡ್ಡೆ ನಿವಾಸಿ ಸಚಿನ್‌ (24) ಆತ್ಮಹತ್ಯೆ ಮಾಡಿಕೊಂಡ ಯುವಕ. ದಿ.ಸುಂದರ ಎಂಬುವವರ ಮಗ ಸಚಿನ್‌ ಜೀವನದಲ್ಲಿ ಜಿಗುಪ್ಸೆಗೊಂಡು ಚೀಟಿ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ.

ಇಲೆಕ್ಟ್ರಿಕಲ್‌ ಕಂಪೆನಿಯಲ್ಲಿ ಇಲೆಕ್ಟ್ರೀಷಿಯನ್‌ ಆಗಿ ಕೆಲಸ ಮಾಡುತ್ತಿದ್ದ. ಅ.18 ರಂದು ಕೆಲಸಕ್ಕೆ ಹೋದವನು ರಾತ್ರಿಯಾದರೂ ಮನೆಗೆ ಬರದ ಹಿನ್ನೆಲೆ, ಈತನನ್ನು ಹುಡುಕಲು ಪ್ರಾರಂಭ ಮಾಡಿದ್ದರು. ಪೋನ್‌ ಮಾಡಿದಾಗಲೂ ರಿಸೀವ್‌ ಮಾಡದೆ ಇದ್ದುದರಿಂದ, ಈತನ ಬಂಟ್ವಾಳದ ಕಾಮಾಜೆ ಮಾವನ ಮನೆಯವರಲ್ಲಿ ವಿಚಾರಿಸಿದ್ದಾರೆ. ಅವರು ಹುಡುಕಾಡೋಕೆ ಶುರುಮಾಡಿದಾಗ ಮುಂಜಾನೆ 3 ಗಂಟೆಯ ವೇಳೆ ಈತನ ಸ್ಕೂಟರ್‌ ಬಿ.ಮೂಡ ಗ್ರಾಮದ ಮಿತ್ತಕೋಡಿ ಎಂಬಲ್ಲಿ ಮೈದಾನದ ಬಳಿ ನಿಲ್ಲಿಸಿದ್ದು ಕಂಡು ಬಂದಿದೆ.

ಆದರೆ ಸಚಿನ್‌ ಅಲ್ಲಿ ಪತ್ತೆ ಇರಲಿಲ್ಲ. ಹಾಗಾಗಿ ಅಲ್ಲೇ ಸಮೀಪದ ಗುಡ್ಡವೊಂದರಲ್ಲಿ ಫೋನ್‌ ರಿಂಗ್‌ ಕೇಳಿದ ಪರಿಣಾಮ ಅಲ್ಲಿ ಹೋಗಿ ನೋಡಿದಾಗ, ಆತ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ.

ಆತ್ಮಹತ್ಯೆ ಮೊದಲು ಈತ ಚೀಟಿಯೊಂದನ್ನು ಬರೆದು ಕಿಸೆಯಲ್ಲಿಟ್ಟಿದ್ದು, ಪೊಲೀಸರು ಇದನ್ನು ವಶಪಡಿಸಿಕೊಂಡಿದ್ದಾರೆ. ಪ್ರೇಮ ವೈಫಲ್ಯವೇ ಆತ್ಮಹತ್ಯೆ ಕಾರಣ ಎಂದು ಚೀಟಿಯಲ್ಲಿ ಬರೆದಿದ್ದ ಎನ್ನಲಾಗಿದ್ದು, ಮರಣೋತ್ತರ ಪರೀಕ್ಷಾ ವರದಿಯ ಬಳಿಕ ಪೊಲೀಸ್‌ ತನಿಖೆಯಿಂದ ತಿಳಿದು ಬರಲಿದೆ.

 

ಇದನ್ನು ಓದಿ: Mangaluru: ಲೇಡಿಹಿಲ್ ಹಿಟ್& ರನ್ ಪ್ರಕರಣ; ವಿವಿಧ ಆಯಾಮದಲ್ಲಿ ತನಿಖೆಗೆ ಇಳಿದ ಖಾಕಿ ಪಡೆ!!!

You may also like

Leave a Comment