A Manju: ರಾಜ್ಯದಲ್ಲಿ ರಾಜಕೀಯವಾಗಿ ಹಲವಾರು ಕುತೂಹಲಕಾರಿ ಘಟನೆಗಳು ನಡೆಯುತ್ತಿವೆ. ಬಿಜೆಪಿ ಜೆಡಿಎಸ್ ಎರಡು ಮೈತ್ರಿ ಮಾಡಿಕೊಂಡ ಬಳಿಕ ಅಂತ ಜೆಡಿಎಸ್ ಗೆ ಹಲವಾರು ಸಂಕಷ್ಟಗಳು ಎದುರಾಗಿದೆ. ಇದೀಗ ಜೆಡಿಎಸ್ ಅನ್ನು ಇಬ್ಬಾಗಮಾಡಲು ಹೊರಟಿದ್ದ ಸಿಎಂ ಇಬ್ರಾಹಿಂ ಕುರಿತು ಶಾಸಕ ಎ ಮಂಜು(A Manju) ಹೊಸ ಬಾಂಬ್ ಸಿಡಿಸಿದ್ದಾರೆ.
ಹೌದು, ಬಿಜೆಪಿ-ಜೆಡಿಎಸ್ ವಿಚಾರವಾಗಿ ಮುನಿಸಿಕೊಂಡಿರುವ ಸಿಎಂ ಇಬ್ರಾಹಿಮ್ ಅವರು ನನ್ನದೇ ಒರಿಜಿನಲ್ ಜೆಡಿಎಸ್ ,ನಾನೆ ಅದರ ಅಧ್ಯಕ್ಷ ನಮ್ಮ ಬೆಂಬಲವೇನಿದ್ದರೂ ಕಾಂಗ್ರೆಸ್ ಗೆ ಬಹಿರಂಗವಾಗಿ ಹೇಳಿದ್ದರು. ಈ ಬೆನ್ನಲ್ಲೇ ಎಚ್ ಡಿ ದೇವೇಗೌಡ ಅವರು ಇಬ್ರಾಹಿಮ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿದ್ದರು. ಇದೀಗ ಈ ಸಿಎಂ ಇಬ್ರಾಹಿಂ ಕುರಿತು ಜೆಡಿಎಸ್ ಶಾಸಕರಾದ ಎ ಮಂಜು ಅವರು ಹೊಸ ಬಾಂಬ್ ಸಿಡಿಸಿದ್ದಾರೆ.
ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಮಾತನಾಡಿದ ಎ ಮಂಜು ಅವರು ‘ದೇಶದ ಹಿತದೃಷ್ಟಿಯಿಂದ ನಾವು ಹೊಂದಾಣಿಕೆ ಮಾಡಿಕೊಂಡಿರುವುದಲ್ಲಿ ತಪ್ಪೇನಿಲ್ಲ. ಬಿಜೆಪಿ ಜೆಡಿಎಸ್ ಮೈತ್ರಿ ಬಗ್ಗೆ ಹಿಂದೆ ಸಭೆ ಸೇರಿದಾಗ ರಾಜ್ಯಾಧ್ಯಕ್ಷರಾಗಿ ಸಿಎಂ ಇಬ್ರಾಹಿಂ ಕೂಡ ಇದ್ದರು. ಎಲ್ಲೂ ಕೂಡ ಈ ಬಗ್ಗೆ ವಿರೋಧವನ್ನು ಅವರು ವ್ಯಕ್ತಪಡಿಸಲೇ ಇಲ್ಲ. ಈಗ ಅವರು ಈ ಬಗ್ಗೆ ನನಗೆ ಗೊತ್ತೇ ಇಲ್ಲ ಎಂದು ಹೇಳುತ್ತಿರುವುದು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ. ಈಗ ನಮಗೆ ಏನು ಗೊತ್ತೇ ಇಲ್ಲ ಎಂದು ಹೇಳುವುದು ಒಳ್ಳೆಯದಲ್ಲ ‘ ಎಂದು ಮಾತಿನಲ್ಲೇ ತಿವಿದಿದ್ದಾರೆ.
ಇಬ್ರಾಹಿಂ ಹೇಳಿದ್ದೇನು?
ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಮೈತ್ರಿ ಮಾಡಿಕೊಂಡದ್ದು ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನವನ್ನು ಸೃಷ್ಟಿಸಿತ್ತು. ಬಿಜೆಪಿಯೊಂದಿಗೆ ಜೆಡಿಎಸ್ ಕೈಜೋಡಿಸಿದ ಕೂಡಲೇ ಜೆಡಿಎಸ್ ನಲ್ಲಿದ್ದ ಮುಸಲ್ಮಾನ ಬಂಧುಗಳು, ಅಲ್ಪಸಂಖ್ಯಾತ ನಾಯಕರು ಬೇಸರಗೊಂಡು ಕಾಂಗ್ರೆಸ್ ಪಕ್ಷವನ್ನು ಸೇರಲು ಮುಂದಾಗಿದ್ದರು. ಇದರಿಂದ ಎಚ್ಚೆತ್ತುಗೊಂಡ ಸಿಎಂ ಇಬ್ರಾಹಿಂ ಅವರು ತಮ್ಮ ಸಮುದಾಯದ ಅವರೇ ತಮಗೆ ವಿರೋಧಿಗಳಾಗುತ್ತಾರೆ ಎಂಬುದನ್ನು ಅರಿತು ಈ ವಿಚಾರನ ನಿಮಗೆ ಗೊತ್ತಿಲ್ಲ, ಮೈತ್ರಿ ಮಾಡಿಕೊಳ್ಳುವಾಗ ರಾಜ್ಯದ್ಯಕ್ಷನಾದ ನನ್ನನ್ನು ವಿಚಾರಿಸಿಲ್ಲ, ನನ್ನ ಗಮನಕ್ಕೇ ಬಂದಿಲ್ಲ ಎಂಬುದಾಗಿ ಉಲ್ಟಾ ಹೊಡೆದಿದ್ದರು.
