Refrigerator : ಮನೆಯಿಂದ(Home)ಹೊರಗೆ ಒಂದು ಎರಡು ದಿನಕ್ಕಿಂತ ಹೆಚ್ಚು ಟ್ರಿಪ್(Trip)ಹೋಗುವ ಸಂದರ್ಭ ಮನೆಯಲ್ಲಿ ನಿತ್ಯ ಬಳಕೆ ಮಾಡುವ ಕೆಲ ವಸ್ತುಗಳ ಬಗ್ಗೆ ವಿಶೇಷ ಗಮನ ಹರಿಸುವುದು ಸಹಜ. ಬಾಗಿಲನ್ನು (Door Close)ಭದ್ರವಾಗಿ ಹಾಕಿ, ಕರೆಂಟ್ ಸುಮ್ಮನೆ ಉರಿಯದಿರಲಿ ಎಂದು ಎಲ್ಲಾ ಕೋಣೆಗಳ ಲೈಟ್ ಪರಿಶೀಲಿಸಿ ಹೋಗುವುದು ಸಾಮಾನ್ಯ. ಅದೇ ರೀತಿ, ಕೆಲವರು ಫ್ರಿಡ್ಜ್ (refrigerator)ಸ್ವಿಚ್ ಕೂಡ ಬಂದ್ ಮಾಡುವ ಅಭ್ಯಾಸ ರೂಡಿಸಿಕೊಳ್ಳುತ್ತಾರೆ. ಆದರೆ, ಮನೆಯಿಂದ ಹೊರಗೆ ಹೋಗುವಾಗ ಫ್ರಿಡ್ಜ್ ಬಂದ್ ಮಾಡುವುದು ಒಳ್ಳೆಯದಲ್ಲ ಎಂಬ ವಿಚಾರ ಹೆಚ್ಚಿನವರಿಗೆ ತಿಳಿದಿಲ್ಲ.
ಹೌದು!!ಮನೆಯಿಂದ ಹೊರಗೆ ಹೋಗುವಾಗ ಫ್ರಿಡ್ಜ್ ಬಂದ್ ಮಾಡುವ ಬದಲಿಗೆ ಈ ಸಣ್ಣ ಬದಲಾವಣೆ ಮಾಡಿಕೊಳ್ಳಿ.
# ಮನೆಯಿಂದ ಹೊರಗೆ ಹೋಗುವ ಮುನ್ನ ಫ್ರಿಡ್ಜ್ ಸ್ವಿಚ್ ಪರಿಶೀಲಿಸಿ. ಸ್ವಿಚ್ ಅಥವಾ ಪ್ಲಗ್, ವಯರ್ ಹಾಳಾಗಿದ್ದರೆ ಅದನ್ನು ಸರಿಮಾಡಿಸಿ ಬಿಡಿ.
# ಫ್ರಿಡ್ಜ್ ಬಾಗಿಲು ಸರಿಯಾಗಿ ಬಿದ್ದಿರುವುದನ್ನು ಖಾತ್ರಿ ಪಡಿಸಿಕೊಳ್ಳಿ. ಒಂದು ವೇಳೆ ಬಾಗಿಲು ತೆರೆದಿದ್ದರೆ ಫ್ರಿಜ್ ಸಾಮಾನ್ಯಕ್ಕಿಂತ ಹೆಚ್ಚು ಬಳಕೆಯಾಗಿ, ಇದರಿಂದ ಜಾಸ್ತಿ ಕರೆಂಟ್ ಬಳಕೆಯಾಗುತ್ತದೆ.
# ಫ್ರಿಡ್ಜ್ ನಲ್ಲಿ ಒಂದು ಗ್ಲಾಸ್ ಗೆ ಐಸ್ ಹಾಕಿ ಅದರಲ್ಲಿ ಒಂದು ರೂಪಾಯಿ ನಾಣ್ಯವನ್ನಿಡಿ. ಮನೆಗೆ ಬಂದಾಗ ಗ್ಲಾಸ್ ಕೆಳಗೆ ಇಲ್ಲವೇ ಮಧ್ಯ ನಾಣ್ಯ ಸಿಕ್ಕಿದರೆ ಕರೆಂಟ್ ಇರಲಿಲ್ಲ ಎನ್ನುವುದು ತಿಳಿಯುತ್ತದೆ.
# ಕರೆಂಟ್ ಹೋದಲ್ಲಿ ಫ್ರಿಜ್ ನಲ್ಲಿರುವ ಆಹಾರ ಹಳಸಿ ಹೋಗುತ್ತದೆ. ಹೀಗಾಗಿ, ಫ್ರಿಜ್ ನಲ್ಲಿಟ್ಟ ಆಹಾರ ಸೇವನೆ ಮಾಡದಿರುವುದು ಒಳ್ಳೆಯದು.
# ಒಂದು ವೇಳೆ ಫ್ರಿಜ್ ನಲ್ಲಿ ಆಹಾರ ಇಡದೇ ಹೋದರೆ ಇದರ ಬದಲಿಗೆ ಆಹಾರದ ನೀರು ತುಂಬಿದ ಬಾಟಲಿಗಳನಲ್ಲಿಡಿ.
# ಫ್ರಿಜ್ ಗೋಡೆಗೆ ಸಮೀಪ ಇರದಂತೆ ನೋಡಿಕೊಳ್ಳಿ.
ಇದನ್ನು ಓದಿ: Alert: ಅಬ್ಬಬ್ಬಾ.. ರೈಲಿನಲ್ಲಿ ‘ಮದ್ಯ’ ಸಾಗಿಸಿ ಸಿಕ್ಕಿಬಿದ್ರೆ ಇಂತಾ ಶಿಕ್ಷೆನಾ ಸಿಗೋದು ?!!
