Karnataka BJP: ವಿಧಾನಸಭೆ ಚುನಾವಣೆ (Assembly election) ಹೀನಾಯ ಸೋಲಿನ ಬಳಿಕ ರಾಜ್ಯ ಬಿಜೆಪಿ (Karnataka BJP)ಮುಂಬರುವ ಲೋಕಸಭಾ ಚುನಾವಣೆಗೆ ಭರದ ತಯಾರಿ ನಡೆಸುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಜೆಡಿಎಸ್ ಪಕ್ಷದ ಜೊತೆಗೆ ಬಿಜೆಪಿ ಮೈತ್ರಿ (BJP-JDS Alliance) ಮಾಡಿಕೊಂಡಿದೆ.
ಜೆಡಿಎಸ್ ನಾಯಕರ ಕೈಗೆ ಸುಲಭವಾಗಿ ಸಿಗುವ ಬಿಜೆಪಿ ಹೈಕಮಾಂಡ್ (High Command)ವರಿಷ್ಠರು ತಮ್ಮದೇ ಪಕ್ಷದ ರಾಜ್ಯ ನಾಯಕರಿಗೆ ಸಿಗದೇ ಇರುವುದರಿಂದ ರಾಜ್ಯ ಬಿಜೆಪಿಯಲ್ಲಿ ಅಸಮಾಧಾನ ಮನೆ ಮಾಡಿದ್ದು, ಕೆಲ ಬಿಜೆಪಿ ನಾಯಕರು ಈ ಕುರಿತು ಆಕ್ರೋಶ ಹೊರ ಹಾಕಿದ್ದಾರೆ. ಈ ನಡುವೆ, ಚುನಾವಣೆ ನಡೆದು ಆರು ತಿಂಗಳು ಕಳೆದರೂ ಕೂಡ ವಿಪಕ್ಷ ನಾಯಕ (Opposition Leader), ರಾಜ್ಯಾಧ್ಯಕ್ಷನ (BJP State President) ಆಯ್ಕೆ ಮಾಡುವತ್ತ ಹೈಕಮಾಂಡ್ ಚಿತ್ತ ವಹಿಸಿರಲಿಲ್ಲ.ಸದ್ಯ, ಇದೀಗ, ಖಾಲಿ ಇರುವ ನಾಯಕ ಸ್ಥಾನ ಭರ್ತಿಗೆ ಹೈಕಮಾಂಡ್ ಮುಂದಾಗಿದೆ ಎನ್ನಲಾಗುತ್ತಿದೆ.
ಈ ನಡುವೆ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (BS Yediyurappa) ಸೈಲೆಂಟ್ ಆಗಿದ್ದು, ಹಿರಿಯ ನಾಯಕ ಸದಾನಂದ ಗೌಡರು(Sadananda Gowda)ಹೈಕಮಾಂಡ್ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಆದರೆ ಈಗ ಲೋಕಸಭಾ ಚುನಾವಣೆ ನಿಟ್ಟಿನಲ್ಲಿ ಹೊಸ ಅಧ್ಯಕ್ಷರ ನೇಮಕ ಮಾಡಲು ಕಮಲ ಪಾಳಯ ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ.
ಬಿಜೆಪಿ ಹಿರಿಯ ನಾಯಕಿಯಾಗಿರುವ, ಹಾಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೆಸರು ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಫೈನಲ್ ಆಗಿದೆ ಎಂಬ ಸುದ್ದಿ ಹಬ್ಬಿದ್ದು, ಹೀಗಾಗಿ, ಶೋಭಾ ಕರಂದ್ಲಾಜೆ ಫುಲ್ ಆಕ್ಟೀವ್ ಆಗಿದ್ದಾರೆ. ಈ ನಡುವೆ, ರಾಜ್ಯ ಬಿಜೆಪಿ ಹಾಗೂ ಹೈ ಕಮಾಂಡ್ ನಲ್ಲಿ ಏನೇ ಬೆಳವಣಿಗೆಯಾದರೂ ಯಡಿಯೂರಪ್ಪ ಮಾತ್ರ ಫುಲ್ ಸೈಲೆಂಟ್ ಆಗಿದ್ದು ಬಿಜೆಪಿ ಹೈಕಮಾಂಡ್ ನಾಯಕರಿಂದಲೂ ಅಂತರ ಕಾಯ್ದುಕೊಂಡು, ಯಾವ ಹೋರಾಟಗಳಿಗೂ ಹೆಚ್ಚು ಭಾಗಿಯಾಗುತ್ತಿಲ್ಲ.
ಇದರ ಬೆನ್ನಲ್ಲೇ ಮಾಜಿ ಸಿಎಂ ಡಿವಿ ಸದಾನಂದಗೌಡ ಫುಲ್ ಆಕ್ಟೀವ್ ಆಗಿದ್ದು, ನಾನು ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂಬುದನ್ನು ಪರೋಕ್ಷವಾಗಿ ಬಿಂಬಿಸಿ ಹೈಕಮಾಂಡ್ ಚಿತ್ತ ಸೆಳೆಯಲು ಮುಂದಾಗಿದ್ದಾರೆ. ಬಿಜೆಪಿಯಲ್ಲಿ ಮಾಜಿ ಸಿಎಂ DVS ಫುಲ್ ಆಕ್ಟೀವ್ ಆಗಿ ಪ್ರತಿಭಟನೆಗಳಲ್ಲಿ ಭಾಗಿಯಾಗುತ್ತಿದ್ದಾರೆ. ಇದರ ಬೆನ್ನಲ್ಲೇ ಮಾಜಿ ಸಿಎಂ ಡಿವಿ ಸದಾನಂದ ಗೌಡರಿಗೆ ಬಿಜೆಪಿ ಹೈಕಮಾಂಡ್ BJP High Command ಬುಲಾವ್ ನೀಡಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ (BJP President JP Nadda) ಈ ಅಕ್ಟೋಬರ್ 25ರಿಂದ ಅವರನ್ನು ಬಂದು ಭೇಟಿಯಾಗುವಂತೆ ಸಂದೇಶ ನೀಡಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಹೈಕಮಾಂಡ್ ಯಾರನ್ನು ಆಯ್ಕೆ ಮಾಡಲಿದೆ ಎಂಬುದು ಸದ್ಯ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ: Hijab:ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಸರ್ಕಾರದಿಂದಲೇ ಅನುಮತಿ – ಹೆಚ್ಚಿದ ಆಕ್ರೋಶ !!
