Home » IOCL Apprentice:1720 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ! ಈ ಕೂಡಲೇ ಅರ್ಜಿ ಸಲ್ಲಿಸಿ!!!

IOCL Apprentice:1720 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ! ಈ ಕೂಡಲೇ ಅರ್ಜಿ ಸಲ್ಲಿಸಿ!!!

1 comment
IOCL Apprentice

IOCL Apprentice: ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) 1720 ಅಪ್ರೆಂಟಿಸ್ ಹುದ್ದೆಗಳಿಗೆ(IOCL Apprentice) ಅರ್ಹರಿಂದ ಅರ್ಜಿಗಳನ್ನು ಆಹ್ವಾನ ಮಾಡಲಾಗಿದ್ದು, ಆಸಕ್ತರು ಕೊನೆಯ ದಿನದ ಮೊದಲೇ ಅರ್ಜಿ ಸಲ್ಲಿಸುವುದು ಉತ್ತಮ. ಅರ್ಹ ಅಭ್ಯರ್ಥಿಗಳು IOCL ನ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ iocl.com ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಅಧಿಕೃತ ವೆಬ್‌ಸೈಟ್ – iocl.com
ಇಂಡಿಯನ್ ಆಯಿಲ್ ಅಪ್ರೆಂಟಿಸ್‌ಗೆ ಅರ್ಹತಾ ಮಾನದಂಡ

# ಅಪ್ರೆಂಟಿಸ್‌ ಹುದ್ದೆಗೆ ಅರ್ಜಿ ಸಲ್ಲಿಸುವವರು 12 ನೇ ತರಗತಿ / ಪದವೀಧರ / ಡಿಪ್ಲೊಮಾ ಹೊಂದಿರುವವರಾಗಿದ್ದು, ಮಾನ್ಯತೆ ಪಡೆದ ಬೋರ್ಡ್ / ವಿಶ್ವವಿದ್ಯಾನಿಲಯ / ಸಂಸ್ಥೆಯಿಂದ ಸಂಬಂಧಿತ ವ್ಯಾಪಾರ / ವಿಭಾಗದಲ್ಲಿ ನಿಯತ ಪೂರ್ಣ ಸಮಯದ ಕೋರ್ಸ್ ಮುಗಿಸಿರಬೇಕು. ಕನಿಷ್ಠ 50 ಶೇಕಡಾ ಅಂಕ ಗಳಿಸಿರಬೇಕು.
# ಅಕ್ಟೋಬರ್ 21 ರಂದು ಆರಂಭವಾಗಲಿದ್ದು, 2023ರ ನವೆಂಬರ್ 20 ರಂದು ಅಪ್ರೆಂಟಿಸ್ ಹುದ್ದೆಗೆ ನೋಂದಣಿ ಪ್ರಕ್ರಿಯೆಯು ಮುಗಿಯಲಿದೆ.

(ಎಸ್‌ಸಿ / ಎಸ್‌ಟಿ ಮತ್ತು ಪಿಡಬ್ಲ್ಯುಬಿಡಿ ವರ್ಗದ ಅಭ್ಯರ್ಥಿಗಳಿಗೆ ಶೇಕಡಾ 45 ಮೀಸಲು)ವಯೋಮಿತಿಯು 2023ರ ಅಕ್ಟೋಬರ್ 31 ರಂತೆ 18 ವರ್ಷದಿಂದ 24 ವರ್ಷಗಳ ನಡುವಿನವರಾಗಬೇಕು. ಎಸ್‌ಸಿ/ ಎಸ್‌ಟಿ / ಒಬಿಸಿ (ಎನ್‌ಸಿಎಲ್‌)/ ಪಿಡಬ್ಲ್ಯುಬಿಡಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಗಳ ಅನುಸಾರ, ಗರಿಷ್ಠ ವಯಸ್ಸಿನ ಮಿತಿ ವಿನಾಯಿತಿ ಇರಲಿದೆ.

ಇಂಡಿಯನ್ ಆಯಿಲ್ ಅಪ್ರೆಂಟಿಸ್‌ ಹುದ್ದೆಗೆ ಅರ್ಹ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ. ಆಯ್ಕೆ ಪ್ರಕ್ರಿಯೆಯಲ್ಲಿ ಅರ್ಹತೆ ಪಡೆಯಲು ಅಭ್ಯರ್ಥಿಯು ಲಿಖಿತ ಪರೀಕ್ಷೆಯಲ್ಲಿ ಕನಿಷ್ಠ 40 ಪ್ರತಿಶತ ಅಂಕಗಳನ್ನು ಪಡೆಯಬೇಕು. ಈ ಕುರಿತ ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು ಐಒಸಿಎಲ್‌ನ ಅಧಿಕೃತ ವೆಬ್‌ಸೈಟ್ iocl.com ಅನ್ನು ಪರಿಶೀಲಿಸಬಹುದು.

 

ಇದನ್ನು ಓದಿ: Kolara: ಮಾರಕಾಸ್ತ್ರಗಳಿಂದ ಕೊಚ್ಚಿ ರಾಜ್ಯ ಕಾಂಗ್ರೆಸ್ ಮುಖಂಡನ ಬರ್ಬರ ಹತ್ಯೆ

You may also like

Leave a Comment