KPSC ಯಿಂದ ಮುಂದಿನ ನವೆಂಬರ್ 04 ಮತ್ತು 05 ರಂದು ನಡೆಸಲಾಗುವ ಪರೀಕ್ಷೆಗೆ ಸಂಬಂಧಪಟ್ಟಂತೆ ಇಲ್ಲಿ ನೀಡಲಾದ ಪರೀಕ್ಷಾ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಲು ಹೇಳಲಾಗಿದೆ.
ಮೊಬೈಲ್, ಸ್ಮಾರ್ಟ್‌ವಾಚ್, ಕ್ಯಾಲ್ಕುಲೇಟರ್ ಅಥವಾ ಇತರೆ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳನ್ನು ಮತ್ತು ಲೈಟರ್, ಬೆಂಕಿ ಪೊಟ್ಟಣ ಹಾಗೂ ಯಾವುದೇ ದಹನಶೀಲ ವಸ್ತುಗಳನ್ನು ಪರೀಕ್ಷಾ ಕೇಂದ್ರಕ್ಕೆ(KPSC) ತರುವುದನ್ನು ನಿಷೇದಿಸಲಾಗಿದೆ. ಆದರೂ ಅಭ್ಯರ್ಥಿ ಇಂತಹ ವಸ್ತುಗಳನ್ನು ತೆಗೆದುಕೊಂಡು ಬಂದಲ್ಲಿ ಶಿಸ್ತುಕ್ರಮ ತೆಗೆದುಕೊಳ್ಳಲಾಗುತ್ತದೆ.
ಬ್ಲಾಕ್ ಪೆನ್, ಸಿಂಧುವಾದ ಗುರುತಿನ ಚೀಟಿ, ಪ್ರವೇಶ ಪತ್ರ ಮಾತ್ರ ಪರೀಕ್ಷಾ ಕೇಂದ್ರಕ್ಕೆ ಕೊಂಡೊಯ್ಯಲು ಅಭ್ಯರ್ಥಿಗೆ ಅವಕಾಶ.
ಬೆಳಗಿನ ಸೆಷನ್ 9 ಗಂಟೆಗೆ ಹಾಗೂ ಮಧ್ಯಾಹ್ನದ ಸೆಷನ್‌ಗೆ 1 ಗಂಟೆಯ ಪರೀಕ್ಷೆಗೆ ಅಭ್ಯರ್ಥಿಗಳು ಹಾಜರಿರಬೇಕು. 9.50ರ ನಂತರ ಬೆಳಗಿನ ಅಧಿವೇಶನಕ್ಕೆ, ಮಧ್ಯಾಹ್ನದ ಅಧಿವೇಶನಕ್ಕೆ 1:50ರ ನಂತರ ಬರುವ ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ಇಲ್ಲ.
ಇನ್ನೂ ಹಲವು ಸೂಚನೆಗಳಿದ್ದು, ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ ಓದಬಹುದು.
