Tiger Claw Pendant: ಹುಲಿ ಉಗುರು ಧರಿಸಿದ ಆರೋಪದ ಮೇಲೆ ಇದೀಗ ಸ್ಯಾಂಡಲ್‌ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿರುದ್ಧ ದೂರು ದಾಖಲಾಗಿದೆ. ಹಾಗೆನೇ ವಿನಯ್ ಗುರೂಜಿ ಮೇಲೆ ಕೂಡಾ ದೂರು ದಾಖಲಾಗಿದ್ದು, ವಿನಯ್ ಗುರೂಜಿ ಅವರು ಹುಲಿ ಚರ್ಮದ ಮೇಲೆ ಕುಳಿತಿದ್ದಾರೆ ಎಂದು ಆರೋಪಿಸಲಾಗಿದೆ.
ಇಬ್ಬರ ವಿರುದ್ಧ ಸರ್ವ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಿವಕುಮಾರ್ ನೇತೃತ್ವದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದು ವರದಿಯಾಗಿದೆ. ನಟ ದರ್ಶನ್ (Actor Darshan) ಹುಲಿ ಉಗುರು( Tiger Claw Pendant) ಧರಿಸಿದ್ದ ಫೋಟೋ ವೈರಲ್ ಆಗಿತ್ತು. ವನ್ಯ ಜೀವಿ ಸಂರಕ್ಷಣಾ ಕಾಯಿದೆಯಡಿ ನಟ ದರ್ಶನ್ ವಿರುದ್ಧ ದೂರು ದಾಖಲಾಗಿದೆ.

ವೈರಲ್ ಫೋಟೋ
ವಿನಯ್ ಗುರೂಜಿ (Vinay Guruji) ಕೂಡಾ ಹುಲಿಯ ಚರ್ಮದ ಮೇಲೆ ಕೂತಿದ್ದು, ನಟ ದರ್ಶನ್ ರೀತಿ ವಿನಯ್ ಗುರೂಜಿಯನ್ನು ಕೂಡಾ ಕರೆದು ವಿಚಾರಣೆ ಮಾಡಬೇಕೆಂದೂ, ಅವರು ಧರಿಸಿದ್ದು, ಒರಿಜಿನಲ್ ಅಥವಾ ನಕಲಿಯೋ ಎಂಬುವುದನ್ನು ಪರಿಶೀಲಿಸಬೇಕು ಎಂದು ಆಗ್ರಹಿಸಲಾಗಿದೆ.
ಹಾಗಾಗಿ ಇವರಿಬ್ಬರಿಗೆ ಕಾನೂನು ಸಂಕಷ್ಟ ಎಲ್ಲಿಗೆ ಹೋಗಲಿದೆ ಎಂದು ಕಾದು ನೋಡಬೇಕಿದೆ. ದರ್ಶನ್, ರಾಕ್‌ಲೈನ್ ವೆಂಕಟೇಶ್ ಧರಿಸಿದ ಹುಲಿ ಉಗುರಿನ ಲಾಕೆಟ್ ಧರಿಸಿದ್ದು, ಈ ಫೋಟೋಗಳು ವೈರಲ್ ಆಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂಬ ಆಗ್ರಹ ಹೆಚ್ಚಿದೆ.
