Multi Year Tariff: ಗೃಹಜ್ಯೋತಿ ಯೋಜನೆಯಡಿ(Gruha Jyoti Scheme) ಮನೆಗಳಿಗೆ ಉಚಿತ ವಿದ್ಯುತ್ (Free Electricity)ನೀಡುತ್ತಿರುವುದು ಗೊತ್ತಿರುವ ಸಂಗತಿ. ರಾಜ್ಯದಲ್ಲಿ (State) ಮತ್ತೊಂದು ಹೊಸ ವಿದ್ಯುತ್ ದರ (Electricity price) ಪಾಲಿಸಿ (Policy) ಜಾರಿಯಾಗುವ ಸಂಭವ ಹೆಚ್ಚಿದೆ. ಸರ್ಕಾರ ಬಹುವಾರ್ಷಿಕ (Perennial) ವಿದ್ಯುತ್ ದರ ನೀತಿ ಜಾರಿಗೆ ಸಿದ್ಧತೆ (Preparation) ಮಾಡುತ್ತಿದೆ.
ಪ್ರತಿ ವರ್ಷದ ಬದಲಿಗೆ ಮೂರು ಇಲ್ಲವೇ ಐದು ವರ್ಷಗಳ ವಿದ್ಯುತ್ ದರ ಒಂದೇ ಬಾರಿಗೆ ನಿಗದಿ ಮಾಡುವ ನೀತಿಯನ್ನು ಬಹು ವಾರ್ಷಿಕ (Multi Year Tariff) ನೀತಿಯಾಗಿದ್ದು, ವರ್ಷದ ಬದಲಾಗಿ 3-4 ವರ್ಷಕ್ಕೊಮ್ಮೆ ವಿದ್ಯುತ್ ದರ ನಿಗದಿಯಿಂದ ಅಲ್ಪ ವಿದ್ಯುತ್ ಏರಿಕೆಯ ಹೊರೆ ಇಳಿಯಲಿದೆ. ಇಂಧನ ಹೊಂದಾಣಿಕೆ ವೆಚ್ಚ, ಸರಬರಾಜು, ಬಳಕೆ ಸುಂಕ ಸೇರಿ ಎಲ್ಲಾ ಮಾದರಿಯ ಸುಂಕ ಆಧರಿಸಿ ವಿದ್ಯುತ್ ದರ ನಿಗದಿ ಮಾಡಲಾಗುತ್ತಿತ್ತು. ಹೀಗಾಗಿ, ಪ್ರತಿ ವರ್ಷ ವಿದ್ಯುತ್ ದರ ಏರುಪೇರಾಗುತ್ತಿದೆ. ಈ ನಡುವೆ, ಸರ್ಕಾರ ಮಲ್ಟಿ ಇಯರ್ ಟಾರಿಫ್ ಪಾಲಿಸಿ ಜಾರಿ ಮಾಡಲು ಯೋಜನೆ ರೂಪಿಸಿದ್ದು, ಮಲ್ಟಿ ಇಯರ್ ಟಾರಿಫ್ ಪಾಲಿಸಿ ಜಾರಿ ಮಾಡುವಂತೆ KERC ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಇದನ್ನು ಓದಿ: Vikram-Pragyan: ಚಂದ್ರನ ಮೇಲಿರೋ ವಿಕ್ರಮ್ ಲ್ಯಾಂಡರ್, ಪ್ರಜ್ಞಾನ್ ರೋವರ್ ಸ್ಫೋಟ ?! ಚಂದ್ರನಂಗಳದಲ್ಲಿ ಸಂಭವಿಸಿದ್ದೇನು?!
