Home » Water Scarcity: ಭಾರತದ ಅಂತರ್ಜಲದ ಕುರಿತು ಶಾಕಿಂಗ್ ವರದಿ ಬಿಡುಗಡೆ ಮಾಡಿದ ವಿಶ್ವ ಸಂಸ್ಥೆ !!

Water Scarcity: ಭಾರತದ ಅಂತರ್ಜಲದ ಕುರಿತು ಶಾಕಿಂಗ್ ವರದಿ ಬಿಡುಗಡೆ ಮಾಡಿದ ವಿಶ್ವ ಸಂಸ್ಥೆ !!

1 comment
Water Scarcity

Water Scarcity : ಭಾರತದ 1.4 ಶತಕೋಟಿ ಜನರು ಬೆಳೆಗಳನ್ನು ಬೆಳೆಯಲು ಅಂತರ್ಜಲ ಸಂಪನ್ಮೂಲಗಳಿಗೆ ಅವಲಂಬಿತರಾಗಿದ್ದು, ಈ ನಡುವೆ 2025ರ ವೇಳೆಗೆ ಭಾರತದ ಹಲವು ಭಾಗಗಳಲ್ಲಿ ಅಂತರ್ಜಲ ಬಿಕ್ಕಟ್ಟು(Water Scarcity) ಎದುರಾಗಲಿದೆ ಎಂದು ವಿಶ್ವಸಂಸ್ಥೆ ಎಚ್ಚರಿಕೆ ನೀಡಿದೆ.ವಿಶ್ವಸಂಸ್ಥೆ(WHO )ಅಂತರ್ಜಲ ಕುರಿತ ವರದಿಯನ್ನು ಗುರುವಾರ ಬಿಡುಗಡೆ ಮಾಡಿದ್ದು, ಅನೇಕ ಅಚ್ಚರಿಯ ವಿಚಾರಗಳನ್ನು ಬಹಿರಂಗಪಡಿಸಿದೆ.

ಪರ್ವತ ಹಿಮನದಿಗಳು ಕರಗುವ, ಅಂತರ್ಜಲ ಕುಸಿತ ಮತ್ತು ಅಂತರ್ಜಲವು ಅಸಹನೀಯವಾಗಿ ಬಿಸಿಯಾಗಲಿದೆ ಎಂದು ವರದಿ ತಿಳಿಸಿದೆ. ಶೇಕಡಾ 70 ರಷ್ಟು ಅಂತರ್ಜಲವನ್ನು ಕೃಷಿಗೆ ಬಳಸಲಾಗುತ್ತಿದ್ದು, ಇದರಿಂದ ಅಂತರ್ಜಲ ಮಟ್ಟ(Water Scarcity In India)ಕಡಿಮೆಯಾಗುತ್ತಿದೆ. ಇದರ ಜೊತೆಗೆ ಬರ ಪರಿಸ್ಥಿತಿಯಿಂದಾಗಿ ಜಲಾಶಯಗಳೂ ಬತ್ತಿ ಹೋಗುತ್ತಿದ್ದು, ಜಲಾಶಯಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಕಡಿಮೆಯಾಗುತ್ತಿದೆ ಎಂದು ವಿಶ್ವ ಸಂಸ್ಥೆ ತಿಳಿಸಿದೆ.ಈ ನಡುವೆ ಪಂಜಾಬ್ ರಾಜ್ಯದಲ್ಲಿ ಶೇ.78 ರಷ್ಟು ರೈತರು ನೀರಾವರಿಗಾಗಿ ಬಾವಿಗಳ ಅಂತರ್ಜಲವನ್ನು ಬಳಕೆ ಮಾಡುತ್ತಿದ್ದು, ವರದಿ ಪ್ರಕಾರ 2025ರ ವೇಳೆಗೆ ಅಂತರ್ಜಲ ಲಭ್ಯತೆ ಕಡಿಮೆಯಾಗಲಿದೆ.

ಅಂತರ್ಜಲ ಕಡಿಮೆಯಾದಲ್ಲಿ ದೊಡ್ಡ ಅಪಾಯ ಎದುರಾಗುವ ಭೀತಿಯನ್ನು ಅಲ್ಲಗಳೆಯುವಂತಿಲ್ಲ. ಇದರ ಜೊತೆಗೆ ಬಾವಿಗಳಲ್ಲಿ ನೀರಿನ ಮಟ್ಟ ಕುಸಿಯುತ್ತಿದ್ದು. ಅಂತರ್ಜಲ ಕಡಿಮೆಯಾಗುತ್ತ ಹೋದರೆ ಆಹಾರ ಉತ್ಪಾದನಾ ವ್ಯವಸ್ಥೆಗೆ ಅಪಾಯ ಎದುರಾಗುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ. ವಿಶ್ವಸಂಸ್ಥೆಯ ವಿಶ್ವವಿದ್ಯಾನಿಲಯ – ಇನ್‌ಸ್ಟಿಟ್ಯೂಟ್ ಫಾರ್ ಎನ್ವಿರಾನ್‌ಮೆಂಟ್ ಅಂಡ್ ಹ್ಯೂಮನ್ ಸೆಕ್ಯುರಿಟಿ, ಇಂಟರ್‌ಕನೆಕ್ಟೆಡ್ ಡಿಸಾಸ್ಟರ್ ರಿಸ್ಕ್ ರಿಪೋರ್ಟ್ 2023 ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟಿಸಿದ ವರದಿ ನೀಡಿದ ಮಾಹಿತಿಯ ಪ್ರಕಾರ ಇಂಡೋ-ಗಂಗಾ ನದಿ ಜಲಾನಯನ ಪ್ರದೇಶದ ಕೆಲವು ಭಾಗಗಳಲ್ಲಿ ಈಗಾಗಲೇ ಅಂತರ್ಜಲ ಕುಸಿದಿರುವ ಕುರಿತು ಮಾಹಿತಿ ನೀಡಿದೆ.

ಇದನ್ನೂ ಓದಿ: Gruha Lakshmi Yojana Updates: 2ನೇ ಕಂತಿನ ಗೃಹಲಕ್ಷ್ಮೀ ಹಣ ಬರದವರಿಗೆ ಸರ್ಕಾರದಿಂದ ಗುಡ್ ನ್ಯೂಸ್ !!

You may also like

Leave a Comment