Home » WhatsApp Passkeys: ವಾಟ್ಸಪ್’ಗೆ ಬಂತು ಅತ್ಯದ್ಭುತ ಹೊಸ ಫೀಚರ್- ಇನ್ಮುಂದೆ ಲಾಗಿನ್ ಆಗಲು ಜಸ್ಟ್ ಹೀಗ್ ಮಾಡಿದ್ರೆ ಸಾಕು

WhatsApp Passkeys: ವಾಟ್ಸಪ್’ಗೆ ಬಂತು ಅತ್ಯದ್ಭುತ ಹೊಸ ಫೀಚರ್- ಇನ್ಮುಂದೆ ಲಾಗಿನ್ ಆಗಲು ಜಸ್ಟ್ ಹೀಗ್ ಮಾಡಿದ್ರೆ ಸಾಕು

456 comments
WhatsApp Passkeys

WhatsApp Passkeys: ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ಆಗಿರುವ ವಾಟ್ಸಾಪ್ (WhatsApp)ಆಗಾಗ ಹೊಸ ಫೀಚರ್ ಪರಿಚಯಿಸುತ್ತಲೇ ಇರುತ್ತದೆ. ಈ ಮೂಲಕ ಬಳಕೆದಾರರಿಗೆ(WhatsApp Users)ಹೆಚ್ಚಿನ ಪ್ರಯೋಜನ ನೀಡುತ್ತಿದೆ. ಇತ್ತೀಚೆಗೆ ಹೊಸ ಅಪ್ಡೇಟ್‌ ಲಾಂಚ್‌ ಮಾಡಿದ್ದು ವಾಟ್ಸಾಪ್‌ಗೆ ಲಾಗ್ ಇನ್ ಆಡಲು ಪಾಸ್‌ಕೀ (Passkeys) ಎಂಬ ಫೀಚರ್‌ ಘೋಷಿಸಲಾಗಿದ್ದು, ಈ ಫೀಚರ್ ಸದ್ಯ ಆಂಡ್ರಾಯ್ಡ್ ಸಾಧನಗಳಲ್ಲಿ ಮಾತ್ರ ಲಭ್ಯವಿರಲಿದೆ.

ಆಂಡ್ರಾಯ್ಡ್ ಬಳಕೆದಾರರು ಈ ಪಾಸ್‌ಕೀಗಳ (Passkeys)ಮಲ್ಕನ್ಲಾಗಿನ್ ಪ್ರಕ್ರಿಯೆಯನ್ನು ಸುಲಭ ಮತ್ತು ಸುರಕ್ಷಿತವಾಗಿ ಮಾಡಬಹುದು ಎಂದು ವಾಟ್ಸಾಪ್‌ ಹೇಳಿದೆ. ಈ ಫೀಚರ್‌ ಅನ್ನು ಮುಂದಿನ ಕೆಲವು ವಾರ ಇಲ್ಲವೇ ತಿಂಗಳೊಳಗೆ ಲಾಂಚ್‌ ಮಾಡುವ ಕುರಿತು ಮೆಟಾ-ಮಾಲೀಕತ್ವದ ಸಂಸ್ಥೆ ಮಾಹಿತಿ ನೀಡಿದೆ. ಇದರ ಜೊತೆಗೆ ಮುಖ, ಫಿಂಗರ್ ಪ್ರಿಂಟ್(Finger Print)ಅಥವಾ ಪಿನ್ (PIN)ಮೂಲಕ ವಾಟ್ಸಾಪ್‌ ಅಕೌಂಟ್‌ ಅನ್ನು ಅನ್‌ಲಾಕ್ ಮಾಡಬಹುದು” ಎಂದು ವಾಟ್ಸಾಪ್‌ ತಿಳಿಸಿದೆ.

ಸಾಮಾನ್ಯವಾಗಿ ಬಳಕೆದಾರರ ಹೆಸರು ಮತ್ತು ಪಾಸ್‌ವರ್ಡ್‌ಗಳು (username and password)ಹೆಚ್ಚಿನ ಸಂದರ್ಭಗಳಲ್ಲಿ ದುರ್ಬಳಕೆಯಾಗುವ ಸಂಭವ ಹೆಚ್ಚು. ಆದರೆ, ಪಾಸ್‌ಕೀಗಳು ಅಥವಾ ಮೆಸೇಜಿಂಗ್ ಅಪ್ಲಿಕೇಶನ್‌ ಮೂಲಕ ಒಬ್ಬರ ಖಾತೆಗೆ ಲಾಗ್ ಇನ್ ಮಾಡಲು ಆ ವ್ಯಕ್ತಿಯ ಭೌತಿಕ ಉಪಸ್ಥಿತಿ ಬೇಕಾಗುತ್ತದೆ. ಹೀಗಾಗಿ ಖಾತೆ ಹ್ಯಾಕ್ ಆಗುವುದನ್ನು ಈ ಫೀಚರ್ ತಪ್ಪಿಸುತ್ತದೆ. ಆಪಲ್‌ (Apple) ಮತ್ತು ಗೂಗಲ್‌ ( Google) ಈಗಾಗಲೇ ಈ ತಂತ್ರಜ್ಞಾನವನ್ನು ಅಳವಡಿಸಿದ್ದು, ತಮ್ಮ ಬಳಕೆದಾರರಿಗೆ ಪಾಸ್‌ಕೀಗಳ ಮೂಲಕ ಲಾಗಿನ್‌ ಆಗಲು ಅವಕಾಶ ಕಲ್ಪಿಸಲಾಗಿದೆ.

ಇದನ್ನೂ ಓದಿ: Women Empowerment Strategy: ಮಹಿಳೆಯರೇ ನಿಮಗೆ ಭರ್ಜರಿ ಸುದ್ದಿ- ಈ ಯೋಜನೆಯಡಿ ಸಿಗುತ್ತೆ ಕೈ ತುಂಬಾ ಸಂಬಳ ಸಿಗೋ ಕೆಲಸ

You may also like

Leave a Comment