Home » Bigg Boss Kannada Season 10: ದೊಡ್ಮನೆಗೆ ವರ್ತೂರ್ ಸಂತೋಷ್ ರೀ ಎಂಟ್ರಿ; ಯಾವಾಗ ಕಾಣಿಸಿಕೊಳ್ಳಲಿದ್ದಾರೆ ಗೊತ್ತೇ?

Bigg Boss Kannada Season 10: ದೊಡ್ಮನೆಗೆ ವರ್ತೂರ್ ಸಂತೋಷ್ ರೀ ಎಂಟ್ರಿ; ಯಾವಾಗ ಕಾಣಿಸಿಕೊಳ್ಳಲಿದ್ದಾರೆ ಗೊತ್ತೇ?

by Mallika
1 comment
Bigg Boss Kannada 10

Bigg Boss Kannada 10: ಮೂರನೇ ವಾರ ಕಂಪ್ಲೀಟ್‌ ಆಗುವ ಹಂತದದಲ್ಲಿದೆ ಬಿಗ್‌ಬಾಸ್‌ ಕನ್ನಡ ಸೀಸನ್‌ 10. ಹುಲಿ ಉಗುರು ಪ್ರಕರಣದಲ್ಲಿ ಬಿಗ್‌ಬಾಸ್‌ (Bigg Boss Kannada 10) ಮನೆಯಿಂದ ವರ್ತೂರು ಸಂತೋಷ್‌ ಮನೆಯಿಂದ ಹೊರಗೋಗಿದ್ದರು. ಇದೀಗ ಅವರು ಮನೆಗೆ ಎಂಟ್ರಿ ಕೊಡುತ್ತಾರೋ ಇಲ್ಲವೋ ಎಂಬ ಪ್ರಶ್ನೆ ಅವರ ಅಭಿಮಾನಿಗಳಲ್ಲಿ ಮೂಡಿತ್ತು. ಈ ಗೊಂದಲಕ್ಕೆ ಇದೀಗ ಉತ್ತರ ದೊರಕಿದೆ. ಹೌದು, ಅ.28 ರಂದು ಬಿಗ್‌ಬಾಸ್‌ ಮನೆಗೆ ಎಂಟ್ರಿ ನೀಡಲಿದ್ದಾರೆ ವರ್ತೂರು ಸಂತೋಷ್‌. ವೀಕೆಂಡ್‌ ಎಪಿಸೋಡ್‌ಗೆ ಇವರು ಲಭ್ಯವಾಗಲಿದ್ದಾರೆ.

ಸಂತೋಷ್‌ ಅವರಿಗೆ ಕೋರ್ಟ್‌ ಜಾಮೀನು ನೀಡುವಾಗ ಹೆಚ್ಚಿನ ಷರತ್ತನ್ನು ನೀಡಿಲ್ಲ. ಹಾಗಾಗಿ ಅವರು ಬಿಗ್‌ಬಾಸ್‌ಗೆ ಮರಳಲು ಅವಕಾಶ ಇದೆ. ಈ ಕಾರಣದಿಂದ ಬಿಗ್‌ಬಾಸ್‌ಗೆ ಅವರು ರೀ ಎಂಟ್ರಿ ಪಡೆಯಲಿದ್ದಾರೆ. ಈಗಾಗಲೇ ಹುಲಿ ಉಗುರು ಪ್ರಕರಣದಿಂದ ಸಂತೋಷ್‌ ಅವರು ಸಾಕಷ್ಟು ಸುದ್ದಿಯಲ್ಲಿದ್ದರು. ಇದೀಗ ಮತ್ತೊಮ್ಮೆ ಬಿಗ್‌ಬಾಸ್‌ಗೆ ರೀ ಎಂಟ್ರಿ ನೀಡುವುದರಿಂದ ಅವರ ವೀಕ್ಷಕರ ವರ್ಗ ಹೆಚ್ಚಲಿದ್ದಾರೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: TRP ಯಲ್ಲಿ ಮಿಂಚಿದ ಬಿಗ್‌ಬಾಸ್‌! ಧಾರಾವಾಹಿಗಳಿಗೆಷ್ಟು ರೇಟಿಂಗ್‌?

You may also like

Leave a Comment