Home » Shakti yojana: ಫ್ರೀ ಬಸ್ಸಿಲ್ಲಿ ಓಡಾಡೋ ಮಹಿಳೆಯರಿಗೆಲ್ಲಾ ಭಾರೀ ಬೇಸರದ ಸಂಗತಿ !!

Shakti yojana: ಫ್ರೀ ಬಸ್ಸಿಲ್ಲಿ ಓಡಾಡೋ ಮಹಿಳೆಯರಿಗೆಲ್ಲಾ ಭಾರೀ ಬೇಸರದ ಸಂಗತಿ !!

0 comments
Shakti yojana

Shakti yojana: ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಲ್ಲಿ, ಪಂಚ ಗ್ಯಾರಂಟಿಗಳಲ್ಲಿ ಒಂದಾಗಿರೋ ‘ಶಕ್ತಿ ಯೋಜನೆ'(Shakti yojana)ಯನ್ನು ಮಹಿಳೆಯರು ಶಕ್ತಿ ಮೀರಿ ಬಳಸಿಕೊಳ್ಳುತ್ತಿದ್ದಾರೆ. ಆದರೀಗ ಈ ಉಚಿತ ಬಸ್ಸಿನಲ್ಲಿ ಪ್ರಯಾಣಿಸೋ ಮಹಿಳೆಯರಿಗೆಲ್ಲಾ ಭಾರೀ ಬೇಸರದ ಸಂಗತಿ ಹೊರಬಿದ್ದಿದೆ.

ಹೌದು, ಶಕ್ತಿ ಯೋಜನೆಗೆ ಆರಂಭದಲ್ಲಿ ಭರ್ಜರಿ ರೆಸ್ಪಾನ್ಸ್ ದೊರೆತಾಗ ಸರ್ಕಾರಕ್ಕೆ ಭಾರೀ ಸಂತೋಷವಾಗಿತ್ತು. ಆದರೀಗ ಇದುವೇ ಸರ್ಕಾರಕ್ಕೆ ಸಂಚಕಾರ ತಂದೊಡ್ಡಿದ್ದು, ಪ್ರಯಾಣದ ಟಿಕೆಟ್ ಮೌಲ್ಯ ಹೆಚ್ಚಾದುದರಿಂದ ದೊಡ್ಡ ಆರ್ಥಿಕ ಹೊರೆಯಾಗಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ದೊಡ್ಡ ಕತ್ತರಿಯೇ ಬೀಳಲಿದೆ.

ಅಂದಹಾಗೆ ಜೂನ್‌ 11ರಂದು ಆರಂಭವಾದ ಯೋಜನೆಯ ಲಾಭವನ್ನು 84.31 ಕೋಟಿ ಮಹಿಳಾ ಪ್ರಯಾಣಿಕರು ಪಡೆದುಕೊಂಡಿದ್ದಾರೆ. ಅಲ್ಲದೆ, ಶಕ್ತಿ ಯೋಜನೆಗಾಗಿ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಮೀಸಲಿಟ್ಟಿದ್ದ ಅನುದಾನದ ಪೈಕಿ ಶೇ. 71.42ರಷ್ಟು ಹಣ ಈಗಾಗಲೆ ಖರ್ಚಾಗಿದೆ. ಹೀಗಾಗಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಬಾಕಿ ಉಳಿದಿರುವ 5 ತಿಂಗಳಲ್ಲಿ ಹೆಚ್ಚುವರಿ ಅನುದಾನದ ಅವಶ್ಯಕತೆಯಿದ್ದು, ಅದಕ್ಕಾಗಿ ಸರ್ಕಾರದ ಮುಂದೆ ಬೇಡಿಕೆ ಸಲ್ಲಿಸಬೇಕಾದ ಅನಿರ್ವಾಯತೆ ಸಾರಿಗೆ ಇಲಾಖೆಗೆ ಎದುರಾಗಲಿದೆ.

ಇದನ್ನೂ ಓದಿ: Madhu bangarappa: ಬೆಳ್ಳಂಬೆಳಗ್ಗೆಯೇ ಶಾಲಾ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ – ಮಹತ್ವದ ಮಾಹಿತಿ ಹಂಚಿಕೊಂಡ ಶಿಕ್ಷಣ ಇಲಾಖೆ !!

You may also like

Leave a Comment