Home » KEA FDA exam malpractice: ಅಬ್ಬಬ್ಬಾ.. ಗುಪ್ತಾಂಗದಲ್ಲಿ ಬ್ಲೂಟೂತ್ ಇಟ್ಟು ಪರೀಕ್ಷೆಗೆ ಹಾಜರಾದ FDA ಪರೀಕ್ಷಾರ್ಥಿಗಳು – ಸಿಕ್ಕಿಬಿದ್ದದ್ದೇ ರೋಚಕ !!

KEA FDA exam malpractice: ಅಬ್ಬಬ್ಬಾ.. ಗುಪ್ತಾಂಗದಲ್ಲಿ ಬ್ಲೂಟೂತ್ ಇಟ್ಟು ಪರೀಕ್ಷೆಗೆ ಹಾಜರಾದ FDA ಪರೀಕ್ಷಾರ್ಥಿಗಳು – ಸಿಕ್ಕಿಬಿದ್ದದ್ದೇ ರೋಚಕ !!

1 comment
KEA FDA exam malpractice

KEA FDA exam malpractice: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆಸಲಾದ ಪ್ರಥಮ ದರ್ಜೆ ಸಹಾಯಕರ (FDA) ಹುದ್ದೆಯ ಪರೀಕ್ಷೆಯಲ್ಲಿ ಕೆಲವು ಪರೀಕ್ಷಾರ್ಥಿಗಳು(KEA FDA exam malpractice) ಬ್ಲೂಟೂತ್ ಡಿವೈಸ್ ಅನ್ನು ಗುಪ್ತಾಂಗಗಳಲ್ಲಿ ಇಟ್ಟುಕೊಂಡು ಪರೀಕ್ಷಾ ಕೇಂದ್ರಕ್ಕೆ ತೆರಳಿದ ಘಟನೆ ವರದಿಯಾಗಿದೆ.

ಯಾದಗಿರಿಯಲ್ಲಿ ಎಫ್‌ಡಿಎ ಪರೀಕ್ಷಾ ವೇಳೆ ಕೆಲ ವಿದ್ಯಾರ್ಥಿಗಳು ನಿನ್ನೆ ಬ್ಲೂಟೂತ್ ಡಿವೈಸ್ ಬಳಸಿ ಎಫ್‌ಡಿ ಎಕ್ಸಾಂ ಬರೆಯುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ತಿಳಿದ ಬಳಿಕ ಖಾಕಿ ಪಡೆ ಶೋಧ ಕಾರ್ಯ ನಡೆದಿದೆ. ಅಕ್ರಮವಾಗಿ ಪರೀಕ್ಷೆ ಬರೆಯಲು ಮುಂದಾಗಿದ್ದ 9 ಜನ ಪರೀಕ್ಷಾರ್ಥಿಗಳನ್ನ ಬಂಧಿಸಲಾಗಿದೆ. . ಬಂಧಿತ ಆರೋಪಿಗಳಿಂದ 4 ಬ್ಲೂಟೂತ್ ಡಿವೈಸ್, ಎರಡು ವಾಕಿ-ಟಾಕಿ, ಒಂಬತ್ತು ಮೊಬೈಲ್ ಸೇರಿ 9 ಜನರಿಂದ ವಿವಿಧ ಮಾದರಿಯ ಬಟ್ಟೆಗಳು ಜಪ್ತಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಗುಪ್ತಾಂಗದಲ್ಲಿ ಡಿವೈಸ್‌ಗಳನ್ನು ಇಟ್ಟುಕೊಂಡರು ಕೂಡ ಮೆಟಲ್‌ ಡಿಟೆಕ್ಟರ್‌ನಿಂದಲೂ ಪತ್ತೆ ಮಾಡಲಾಗಿಲ್ಲ ಎನ್ನಲಾಗಿದೆ. ಬಂಧಿತ ಆರೋಪಿಗಳು ಶೌಚಗೃಹಕ್ಕೆ ಹೋಗಿ ಕಿವಿ, ಜನಿವಾರ, ಶರ್ಟ್‌ ಕಾಲರ್‌ನಲ್ಲಿ ಇಟ್ಟುಕೊಂಡು ಅಕ್ರಮವಾಗಿ ಪರೀಕ್ಷೆ ಬರೆಯುತ್ತಿದ್ದರು ಎಂದು ಯಾದಗಿರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ. ಸಂಗೀತಾ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Traffic Rules: ಸಂಚಾರಿ ನಿಯಮ ಉಲ್ಲಂಘನೆ- ದಂಡ ವಸೂಲಾತಿಗೆ ರಾಜ್ಯಾದ್ಯಂತ ಹೊಸ ರೂಲ್ಸ್ !!

You may also like

Leave a Comment