Home » Breaking News: ಬೆಂಗಳೂರಿನಲ್ಲಿ ನಿಂತ ಜಾಗದಲ್ಲೇ ಧಗ ಧಗನೇ ಹೊತ್ತು ಉರಿಯುತ್ತಿರುವ ಬಸ್​ಗಳು ! ಪದೇ ಪದೇ ಹೀಗೆ ಆಗ್ತಾ ಇರೋದಕ್ಕೆ ಕಾರಣವಾದ್ರೂ ಏನು?

Breaking News: ಬೆಂಗಳೂರಿನಲ್ಲಿ ನಿಂತ ಜಾಗದಲ್ಲೇ ಧಗ ಧಗನೇ ಹೊತ್ತು ಉರಿಯುತ್ತಿರುವ ಬಸ್​ಗಳು ! ಪದೇ ಪದೇ ಹೀಗೆ ಆಗ್ತಾ ಇರೋದಕ್ಕೆ ಕಾರಣವಾದ್ರೂ ಏನು?

by ಹೊಸಕನ್ನಡ
1 comment

ಕೆಲ ದಿನಗಳ ಹಿಂದೆಯಷ್ಟೇ ಬೆಂಗಳೂರಿನ ಕೋರಮಂಗಲ ರಸ್ತೆಯಲ್ಲಿರೋ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಈ ವೇಳೆ ನಾಲ್ಕನೇ ಅಂತಸ್ತಿನಿಂದ ವ್ಯಕ್ತಿಯೋರ್ವ ಜಿಗಿದಿದ್ದನು. ಇದರ ಬೆನ್ನಲ್ಲೇ ಇದೀಗ ಮತ್ತೊಂದು ಬೆಂಕಿಯ ಅವಘಡ ಆಗಿದೆ.

ವೀರಭದ್ರನಗರದ ಬಸ್ ಗಳ ಬಾಡಿ ಬಿಲ್ಡಿಂಗ್ ಮತ್ತು ವೆಲ್ಡಿಂಗ್ ಮಾಡುವ ವರ್ಕ್ ಶಾಪ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನಿಂತಿರುವ ಎರಡು ಬಸ್ ಗಳಿಗೆ ಬೆಂಕಿ ತಗುಲಿದೆ. ಘಟನಾ ಸ್ಥಳಕ್ಕೆ ಎರಡು ಅಗ್ನಿಶಾಮಕ ವಾಹನಗಳು ಆಗಮಿಸಿದ್ದು, ಸಿಬ್ಬಂದಿ ಬೆಂಕಿಯನ್ನು ಹೋಗಲಾಡಿಸಲು ಹರಸಾಹಸ ಪಡುತ್ತಿದ್ದಾರೆ. ಈ ಬೆಂಕಿ ವರ್ಕ್​​ಶಾಪ್​ ನಲ್ಲಿರೋ ಇತರೆ ವಾಹನಗಳಿಗೆ ಬೆಂಕಿ ವ್ಯಾಪಿಸುತ್ತಿದೆ.ಆಕಸ್ಮಿಕವಾಗಿ ಬಸ್​ಗಳಿಗೆ ಬಸ್ ತಗುಲಿದೆ ಎಂದು ಹೇಳಲಾಗುತ್ತಿದೆ.

ಬೆಂಕಿಯ ತೀವ್ರತೆಗೆ ಎರಡು ಬಸ್​ಗಳು ಹೊತ್ತಿ ಉರಿಯುತ್ತಿವೆ.ಬೆಂಕಿಯ ತೀವ್ರತೆ ಹೆಚ್ಚಾಗುತ್ತಿದ್ದು, ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗುತ್ತಿದೆ. ವರ್ಕ್​ಶಾಪ್​ ನಿಂದ ಜನರನ್ನು ದೂರ ಕಳುಹಿಸಲಾಗುತ್ತಿದೆ.ಬೆಂಕಿಯೊಂದಾಗಿ ವೀರಭದ್ರನಗರದ ವ್ಯಾಪ್ತಿಯಲ್ಲಿ ದಟ್ಟ ಹೊಗೆ ಆವರಿಸಿದೆ.

ವರ್ಕ್ ಶಾಪ್ ಇರೋ ಮುಖ್ಯರಸ್ತೆಯಲ್ಲಿ ಟ್ರಾಫಿಕ್ ಸಹ ಉಂಟಾಗಿದೆ. ಪೊಲೀಸರು ಟ್ರಾಫಿಕ್ ತಿಳಿಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಅಕ್ಕಪಕ್ಕದ ಬಸ್ ಗಳಿಗೂ ತಗುಲಿದೆ ಈ ಬೆಂಕಿ. ಬೆಂಗಳೂರಿನಲ್ಲಿ ಹೀಗೆ ಪದೇ ಪದೇ ಆಗ್ತಾ ಇರೋದಕ್ಕೆ ಕಾರಣ ಆದ್ರೂ ಏನಿರಬಹುದು?

 

ಇದನ್ನು ಓದಿ: Mangaluru Corridor Travel Time Reduced: ಕರಾವಳಿಗರಿಗೆ ಸಂತಸದ ಸುದ್ದಿ : ಸದ್ಯದಲ್ಲೇ ಬೆಂಗಳೂರು- ಮಂಗಳೂರು ಕಾರಿಡಾರ್ ನಿರ್ಮಾಣ !! ಗೃಹಸಚಿವರಿಂದ ಮಹತ್ವದ ಘೋಷಣೆ

You may also like

Leave a Comment