Gruha Lakshmi Scheme : ರಾಜ್ಯ ಸರ್ಕಾರದ ಗ್ಯಾರೆಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಗೆ(Gruha Lakshmi Scheme) ಆಗಸ್ಟ್ 30ರಂದು ಚಾಲನೆ ನೀಡಲಾಗಿದೆ. ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿ ರಾಜ್ಯದ ಒಂದು ಕೋಟಿಗೂ ಹೆಚ್ಚು ಮಹಿಳೆಯರಿಗೆ ಮಾಸಿಕ 2,000 ರೂಪಾಯಿಗಳ ಆರ್ಥಿಕ ನೆರವು ನೀಡುವ ಯೋಜನೆಯ ಮೊದಲ ಕಂತು ಜಮೆಯಾಗಿದೆ. ಇದೀಗ, ಮನೆಯ ಮಹಿಳಾ ಯಜಮಾನಿಯರು ಎರಡನೇ ಕಂತಿನ ಹಣ ಜಮೆ ಆಗುವ ನಿರೀಕ್ಷೆಯಲ್ಲಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಗೃಹಲಕ್ಷ್ಮೀ ಯೋಜನೆಯ (Gurha Lakshmi Yojana)ಮೂಲಕ ಪ್ರತೀ ಮನೆಯ ಯಜಮಾನಿಗೆ ಪ್ರತೀ ತಿಂಗಳು 20000 ರೂಪಾಯಿ ಹಣವನ್ನು ಬ್ಯಾಂಕ್ ಖಾತೆಗೆ ನೇರ ವರ್ಗಾವಣೆ (DBT)ಜಮೆ ಮಾಡಲಾಗುತ್ತಿದೆ. ಗೃಹಲಕ್ಷ್ಮಿ ಯೋಜನೆಯ ಸೌಲಭ್ಯ ಪಡೆಯಲು ಇ-ಕೆವೈಸಿ ಅಪ್ಡೇಟ್ ಮಾಡಿಸಲು ಸೂಚನೆ ನೀಡಲಾಗಿದೆ. ಈ ಯೋಜನೆಯಡಿ ಪಡಿತರ ಚೀಟಿ ಹೊಂದಿದ ‘ಕುಟುಂಬದ ಯಜಮಾನಿ’ ಎಂದು ಗುರುತಿಸಲ್ಪಟ್ಟ ಮಹಿಳೆಯರಿಗೆ ಆಧಾರ್ ಜೋಡಣೆಯಾಗಿರುವ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಲಾಗಿದೆ.
ನಿಮ್ಮ ಖಾತೆಗೆ ಹಣ ಜಮಾ ಆಗಿದೆಯಾ ಎಂದು ಹೀಗೆ ಪರಿಶೀಲಿಸಿ:
ಗೃಹಲಕ್ಷ್ಮಿ ಮೊತ್ತವನ್ನು ನಿಮ್ಮ ಖಾತೆಗೆ ಜಮಾ ಮಾಡಲಾಗಿದೆಯೇ /ಇಲ್ಲವೇ ಎಂಬುದನ್ನು ಪರಿಶೀಲಿಸಲು ಈ ವಿಧಾನ ಅನುಸರಿಸಿ:
# ನೀವು ಮೊದಲಿಗೆ ಅಧಿಕೃತ ವೆಬ್ಸೈಟ್ಗೆ https://ahara.kar.nic.in/ ಭೇಟಿ ನೀಡಬೇಕು.
# ಈಗ ಮುಖ್ಯ ಪುಟದಲ್ಲಿ ಮೊತ್ತ ಸ್ಥಿತಿ ಆಯ್ಕೆಗೆ ಹೋಗಬೇಕು.
# ಮುಖಪುಟದಲ್ಲಿ ಗ್ಯಾರಂಟಿ ಯೋಜನೆಗಳ ಹಲವು ಆಯ್ಕೆ ಕಾಣಬಹುದು. ಅದರಲ್ಲಿ ಗೃಹಲಕ್ಷ್ಮಿ ಯೋಜನೆ ಸೆಲೆಕ್ಟ್ ಮಾಡಿ, ರೇಷನ್ ಕಾರ್ಡ್ ಸಂಖ್ಯೆಯನ್ನು ಕೇಳಲಾಗುತ್ತದೆ.
# RD ನಂಬರ್ ಹಾಕಿ ಸಬ್ಮಿಟ್ ನೀಡಿದರೆ ರೇಷನ್ ಕಾರ್ಡ್ ನಂಬರ್ ಫಲಾನುಭವಿಯ ಹೆಸರು ಅರ್ಜಿ ಸ್ಥಿತಿಯ ಸಂಪೂರ್ಣ ಮಾಹಿತಿ ಬರುತ್ತದೆ
# ಬ್ಯಾಂಕ್ ಖಾತೆಗೆ ಮೊಬೈಲ್ ಸಂಖ್ಯೆ ಲಿಂಕ್ ಮಾಡಿದ್ದರೆ ಅಲ್ಲಿಗೆ ಮೆಸೇಜ್ ಬರಲಿದೆ. ಈ ಮೂಲಕ ಹಣ ಜಮೆ ಆಗಿರುವ ಮಾಹಿತಿ ತಿಳಿಯಲಿದೆ.
ಒಂದು ವೇಳೆ ನಿಮ್ಮ ಖಾತೆಗೆ ಹಣ ಜಮೆ ಆಗಿಲ್ಲ ಎಂದಾದರೆ, ನೀವು ತಾಲೂಕು ಅಧಿಕಾರಿಗಳನ್ನು ಭೇಟಿಯಾಗಿ ಮಾಹಿತಿ ಪಡೆಯಬಹುದು. ಇದಲ್ಲದೇ, https://sevasindhu.karnataka.gov.in ವೆಬ್ ಸೈಟ್ ಗೆ ಭೇಟಿ ನೀಡಿದರೆ ಯೋಜನೆಯ ಸಂಪೂರ್ಣ ಮಾಹಿತಿ ದೊರೆಯಲಿದೆ.
