Street Dog Attack: ಮಲಗಿದ್ದ ವೃದ್ಧನೋರ್ವನ ಮೇಲೆ ಬೀದಿ ನಾಯಿಗಳು ದಾಳಿ (Street Dog Attack) ಮಾಡಿಸಿದ ಘಟನೆಯೊಂದು ಮಂಡ್ಯ ಜಿಲ್ಲೆಯ ಬೆಸಗರಹಳ್ಳಿಯಲ್ಲಿ ನಡೆದಿದೆ. ಅಪರಿಚಿತ ವ್ಯಕ್ತಿಯೋರ್ವ ಮೃತಪಟ್ಟಿದ್ದು, ಇಲ್ಲಿನ ಬಾರ್ ಒಂದರ ಮುಂದೆ ಮಲಗಿದ್ದ ಸಮಯದಲ್ಲಿ ಈ ದಾಳಿ ನಡೆದಿದೆ.
ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಬೆಸಗರಹಳ್ಳಿಗೆ ಬಂದಿದ್ದ ಅಪರಿಚಿತ ವೃದ್ಧನೋರ್ವ ಬಾರೊಂದರಲ್ಲಿ ಮದ್ಯಪಾನ ಮಾಡಿ, ಹೊರಗಡೆ ರಸ್ತೆ ಬದಿ ಮಲಗಿದ್ದ. ಈ ಸಂದರ್ಭ ಬೀದಿ ನಾಯಿಗಳು ಆತನ ಮೇಲೆ ದಾಳಿ ನಡೆದಿದೆ. ದಾಳಿ ಮಾಡಿ ಕೊಂದು ಹಾಕಿದೆ. ವೃದ್ಧನ ಮುಖ ಮತ್ತು ತಲೆಯ ಭಾಗದ ಮೇಲೆ ಅತಿ ಹೆಚ್ಚು ಅಟ್ಯಾಕ್ ನಡೆದಿರುವ ಕುರಿತು ವರದಿಯಾಗಿದೆ.
ರಾತ್ರಿ ಸಮಯದಲ್ಲಿ ನಾಯಿಗಳು ದಾಳಿ ಮಾಡಿದ್ದರಿಂದ ಆತನ ರಕ್ಷಣೆ ಮಾಡಲು ಯಾರಿಗೂ ಸಾಧ್ಯವಾಗಿಲ್ಲ. ಸ್ಥಳಕ್ಕೆ ಪೊಲೀಸರು ಬಂದಿದ್ದು, ಪರಿಶೀಲನೆ ನಡೆಸಿದ್ದಾರೆ. ಬೆಸಗರಹಳ್ಳಿ ಪೊಲೀಸರು ಮೃತ ವೃದ್ಧನ ಗುರುತು ಹಾಗೂ ವಿಳಾಸ ಪತ್ತೆಗೆ ಮುಂದಾಗಿದ್ದಾರೆ.
ಇದನ್ನೂ ಓದಿ: ಶ್ರೀಲಂಕ ಮಾತ್ರವಲ್ಲದೇ ಈ ದೇಶಗಳಿಗೆ ವೀಸಾ ಇಲ್ಲದೇ ನೇರ ಹೋಗಬಹುದು; ಚೀಪ್ ಆ್ಯಂಡ್ ಬೆಸ್ಟ್ ಕೂಡ !
