Mobile hack: ಆಧುನಿಕ ತಂತ್ರಜ್ಞಾನದ ಬಳಕೆಯಿಂದಾಗಿ ಅಭಿವೃದ್ಧಿಯೇನೋ ಆಗುತ್ತಿದ್ದೇವೆ. ಆದರೆ ಇದರೊಂದಿಗೆ ಅನೇಕ ಅಪಾಯಗಳನ್ನೂ ನಾವು ಎದುರಿಸುತ್ತಿದ್ದೇವೆ. ಅದರಲ್ಲೂ ಈ ಮೊಬೈಲ್ ವಿಚಾರವಾಗಿ ದಿನನಿತ್ಯ ಒಂದೊಂದು ಸಮಸ್ಯೆಗಳು ಹುಟ್ಠಿಕೊಳ್ಳುತ್ತಿವೆ. ಆದರೆ ಎಷ್ಟೇ ಎಚ್ಚರಿಕೆಗಳು ಬಂದರೂ ಜನ ಎಚ್ಚೆತ್ತುಕೊಳ್ಳುವುದಿಲ್ಲ. ಇದೀಗ ಮೊಬೈಲ್ ಫೋನ್ ವಿಚಾರವಾಗಿಯೇ ಮತ್ತೊಂದು ಎಚ್ಚರಿಕೆಯ ಸಂದೇಶ ಬಂದಿದ್ದು ನಿಮ್ಮ ಮೊಬೈಲ್ ಗಳಲ್ಲಿ ಈ ಲಕ್ಷಣಗಳು ಕಂಡುಬಂದ್ರೆ ನಿಮ್ಮ ಮೊಬೈಲ್ ಹ್ಯಾಕ್(Mobile hack)ಆಗಿರೋದು ಪಕ್ಕಾ!! ಹಾಗಿದ್ರೆ ಏನು ಆ ಲಕ್ಷಣಗಳು?
1. ಗೊತ್ತಿಲ್ಲದ ನಂಬರ್‌ಗೆ ಮೆಸೇಜ್ ಅಥವಾ ಕಾಲ್ ಹೋಗುವುದು:
ನಿಮಗೆ ಗೊತ್ತಿಲ್ಲದಂತೆ ನಿಮ್ಮ ಮೊಬೈಲ್ ಗಳಿಂದ ಇತರ ಅಪರಿಚಿತ ನಂಬರ್ ಗಳಿಗೆ ಕಾಲ್ ಮತ್ತು ಮೆಸೇಜ್ ಹೋಗಿರುತ್ತದೆ. ಇದು ನಿಮಗೆ ಮೊಬೈಲ್ ಹ್ಯಾಕ್ ಆಗಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ.
2. ಗ್ಯಾಲರಿಯಲ್ಲಿ ಹೊಸ ಫೋಟೋ, ವಿಡಿಯೋ ಗಳಿರುವುದು
ನಿಮ್ಮ ಮೊಬೈಲ್ ಗ್ಯಾಲರಿಯಲ್ಲಿ ನೀವು ತೆಗೆದುಕೊಂಡ ಫೋಟೋಗಳಲ್ಲದೆ ಇತರ ಬೇರೆ ಫೋಟೋಗಳಿರುವುದು, ವಿಡಿಯೋಗಳಿರುವುದು ನಿಮಗೆ ಗೊತ್ತಿಲ್ಲದಂತಹ, ನಿಮಗೆ ಅಪರಿಚಿತವಾಗಿರುವ ಫೋಟೋಗಳು ಬಂದಿರುವುದು ಮೊಬೈಲ್ ಹ್ಯಾಕ್ ಆಗಿದೆ ಎಂಬುದನ್ನು ತಿಳಿಸುತ್ತದೆ.
3. ಫೋನ್‌ನ ಬ್ಯಾಟರಿ ಸಾಮಾನ್ಯಕ್ಕಿಂತ ವೇಗವಾಗಿ ಖಾಲಿಯಾಗುತ್ತಿದೆ
ನಿಮ್ಮ ಫೋನನ್ನು ನೀವು ಎಂದಿನಂತೆ ಚಾರ್ಜ್ ಮಾಡುತ್ತಿದ್ದರೂ ಕೂಡ ಅದರಲ್ಲಿ ಬ್ಯಾಟರಿ ಬೇಗ ಖಾಲಿಯಾಗುತ್ತಿದ್ದರೆ ಅಥವಾ ಪದೇಪದೇ ಚಾರ್ಜ್ ಮಾಡುವಂತೆ ಆಗುತ್ತಿದ್ದರೆ ಅಂದರೆ ಮೊದಲಿಗಿಂತಲೂ ಬೇಗ ಬ್ಯಾಟರಿ ಕಾಲಿಯಾಗುತ್ತಿದ್ದರೆ ಅದು ಹ್ಯಾಕ್ ಆಗಿರುವ ಲಕ್ಷಣವನ್ನು ಸೂಚಿಸುತ್ತದೆ.
4. ಫೋನ್ ಬಿಸಿಯಾಗುತ್ತದೆ:
ಗೇಮಿಂಗ್ ಅಥವಾ ಚಲನಚಿತ್ರಗಳನ್ನು ನೋಡುವಂತಹ ದೀರ್ಘ ಬಳಕೆಯ ಅವಧಿಗಳಲ್ಲಿ ಫೋನ್ ಬಿಸಿಯಾಗುವುದು ಸಹಜ. ಆದರೆ ಏನನ್ನೂ ಮಾಡದೆಯೇ ನಿಮ್ಮ ಫೋನ್ ಬಿಸಿಯಾಗುತ್ತಿದ್ದರೆ, ಹ್ಯಾಕರ್‌ಗಳು ನಿಮ್ಮ ಫೋನ್ ನಿಯಂತ್ರಿಸುತ್ತಿರಬಹುದು.
5. ಲಿಂಕ್ ಮಾಡಲಾದ ಖಾತೆಗಳಲ್ಲಿ ಗೊತ್ತಿಲ್ಲದ ಚಟುವಟಿಕೆಗಳು ನಡೆದರೆ:
ನೀವು ಮೊಬೈಲ್ಗಳಲ್ಲಿ ಫೇಸಬುಕ್ ಇನ್ಸ್ಟಾಗ್ರಾಮ್ ವಾಟ್ಸಾಪ್ ಮತ್ತು ಟ್ವಿಟ್ಟರ್ ಅಂತಹ ಖಾತೆಗಳನ್ನು ಬಳಸುವುದು ಸರ್ವೇಸಾಮಾನ್ಯ. ಆದರೆ ನಿಮಗೆ ಗೊತ್ತಿಲ್ಲದಂತೆ ಈ ಖಾತೆಗಳು ಬೇರೆ ಖಾತೆಗಳಿಗೆ ಲಿಂಕ್ ಆಗಿದ್ದರೆ ಅಥವಾ ನಿಮಗೆ ಗೊತ್ತಿಲ್ಲದಂತೆ ಮೇಲ್ ಹೋಗಿದ್ದರೆ ನಿಮ್ಮ ಮೊಬೈಲ್ ಅನ್ನು ಇತರರು ನಿಯಂತ್ರಿಸುತ್ತಿದ್ದಾರೆ ಎಂದು ಅರ್ಥ.
6. ಫೋನ್ ವಿಚಿತ್ರವಾಗಿ ವರ್ತಿಸುತ್ತಿದೆ
ನಿಮ್ಮ ಫೋನ್ ವಿಚಿತ್ರ ರೀತಿಯಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸುವ ಸಂದರ್ಭಗಳು ಇರಬಹುದು. ಉದಾಹರಣೆಗೆ, ಅಪ್ಲಿಕೇಶನ್‌ಗಳು ಆಗಾಗ್ಗೆ ಕ್ರ್ಯಾಶ್ ಆಗುತ್ತಿವೆ ಅಥವಾ ಲೋಡ್ ಮಾಡಲು ವಿಫಲಗೊಳ್ಳುತ್ತಿವೆ ಎಂದರೆ, ಆಗಾಗ ಮೊಬೈಲ್ ಆಫ್ ಆಗುವುದು, ಆನ್ ಆಗುವುದು ಆದರೆ ಇದು ಹ್ಯಾಕ್ ಆಗಿರೋದನ್ನು ಸೂಚಿಸುತ್ತೆ.
7. ) ಫೋನ್ ಪ್ರತಿಕ್ರಿಯೆ ಸಮಯ ನಿಧಾನವಾಗಿದೆ
ನಿಮ್ಮ ಮೊಬೈಲ್ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದು ನಿಮಗೆ ತಿಳಿದಿರುತ್ತದೆ ಅಂದರೆ ಯಾವ ಸ್ಪೀಡಿನಲ್ಲಿ ಅದು ವರ್ಕ್ ಆಗುತ್ತದೆ ಎಂಬುದು ನಿಮಗೆ ಮೊದಲಿನಿಂದಲೂ ಗೊತ್ತಿರುತ್ತದೆ. ಬರಬರುತ್ತ ನಂತರದಲ್ಲಿ ಅದು ನಿಧಾನವಾಗುವುದು ಸಾಮಾನ್ಯ. ಆದರೆ ತುಂಬಾ ನಿಧಾನವಾಗಿ ನಿಮಗೆ ಅದನ್ನು ಯೂಸ್ ಮಾಡಲು ಕಿರಿಕಿರಿಯೆ ಉಂಟಾಗುತ್ತಿದೆ ಎಂದರೆ ಅದು ಹ್ಯಾಕ್ ಆಗಿರೋದು ಪಕ್ಕಾ!!
8. ಮೊಬೈಲ್ ಡೇಟಾ ಬಳಕೆಯಲ್ಲಿ ಹೆಚ್ಚಳ
ನಿಮ್ಮ ಮೊಬೈಲ್ ಡೇಟಾ ಬಳಕೆ ಇದ್ದಕ್ಕಿದ್ದಂತೆ ಸಾಮಾನ್ಯಕ್ಕಿಂತ ಹೆಚ್ಚಿದೆಯೇ ಎಂಬುದನ್ನು ಪರಿಶೀಲಿಸಿ. ದುರುದ್ದೇಶಪೂರಿತ ಅಪ್ಲಿಕೇಶನ್ ಅಥವಾ ಸಾಫ್ಟ್‌ವೇರ್ ಬ್ಯಾಕ್‌ಗ್ರೌಂಡ್‌ನಲ್ಲಿ ನಿಮ್ಮ ಮೊಬೈಲ್ ಡೇಟಾ ಹಾಳು ಮಾಡುತ್ತಿರಬಹುದು.
