KSRTC: ಕೆಎಸ್ಆರ್ಟಿಸಿಯ ಹಿರಿಯ ನೌಕರರಿಗೆ ಕೆಎಸ್ಆರ್ಟಿಸಿ(KSRTC) ಸಿಹಿ ಸುದ್ದಿಯೊಂದನ್ನು ನೀಡಿದೆ. ಹೌದು, ನೌಕರರಿಗೆ ಹೃದಯ(Heart) ಸಂಬಂಧಿ ತಪಾಸಣೆ ಮಾಡಿಸಲು ಕೆಎಸ್ಆರ್ಟಿಸಿ ಮುಂದಾಗಿದೆ. ಇದರಿಂದ ಸಾವಿರಾರು ನೌಕರರಿಗೆ ಅನುಕೂಲವಾಗಲಿದೆ.
ಈಗಾಗಲೇ ಕೆಎಸ್ಆರ್ಟಿಸಿಯಲ್ಲಿ
34000 ಸಾವಿರ ಸಿಬ್ಬಂದಿಗಳಿದ್ದು, 24686 ಡ್ರೈವರ್ ಹಾಗೂ ಕಂಡಕ್ಟರ್ಗಳಿದ್ದಾರೆ. ಅದರಲ್ಲಿ 40 ವರ್ಷ ಮೇಲ್ಪಟ್ಟ 21 ಸಾವಿರಕ್ಕೂ ಹೆಚ್ಚು ನೌಕರರಿದ್ದು, ಹೃದಯ(Heart) ಸಂಬಂಧಿ ತಪಾಸಣೆಯ ಸೌಲಭ್ಯವನ್ನು ಪಡೆದುಕೊಳ್ಳಲು ಅರ್ಹರಿದ್ದಾರೆ. ಈ ಕುರಿತು ಇದೀಗ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ನೇತೃತ್ವದಲ್ಲಿ ಒಡಂಬಡಿಕೆ ಪತ್ರಕ್ಕೆ ಜಯದೇವ ಹೃದ್ರೋಗ ಸಂಸ್ಥೆಯ ಮುಖ್ಯಸ್ಥ ಡಾ. ಮಂಜುನಾಥ್ ಹಾಗೂ ಕೆಎಸ್ಆರ್ಟಿಸಿ ಎಂಡಿ ಅನ್ಬು ಕುಮಾರ್ ಸಹಿ ಮಾಡಿದ್ದಾರೆ.
ಹೃದಯ(Heart) ಸಂಬಂಧಿ ತಪಾಸಣೆಗಾಗಿ ಈಗಾಗಲೇ ಜಯದೇವ ಆಸ್ಪತ್ರೆಯೊಂದಿಗೆ ಐದು ವರ್ಷಗಳವರೆಗೆ ಒಡಂಬಡಿಕೆ ಮಾಡಿಕೊಂಡಿದ್ದು, ಈ ಮೂಲಕ ಸಾರಿಗೆ ನೌಕರರಿಗೆ ಯಾವುದೇ ರೀತಿಯ ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳ ಕುರಿತು ತಪಾಸಣೆಯನ್ನು ನಡೆಸಿ ಚಿಕಿತ್ಸೆ ಒದಗಿಸಲಿದೆ. ಇನ್ನು ತಪಾಸಣೆ ಮಾಡಲು ಪ್ರತಿ ನೌಕರನಿಗೆ 1200 ರೂಪಾಯಿ ನಿಗದಿ ಮಾಡಲಾಗಿದ್ದು, ಎಲ್ಲಾ ನೌಕರರಿಗೆ ತಪಾಸಣೆ ಮಾಡಲು ವರ್ಷಕ್ಕೆ ಕೆಎಸ್ಆರ್ಟಿಸಿ 2.55 ಕೋಟಿ ರೂಪಾಯಿ ವೆಚ್ಚವಾಗಲಿದೆ.
ಇದನ್ನು ಓದಿ: Premier Padmini: ಮುಂಬೈನ ಬೀದಿಗಳ ಹೆಮ್ಮೆ ಟ್ಯಾಕ್ಸಿ ʼಪ್ರೀಮಿಯರ್ ಪದ್ಮಿನಿʼ ಸಂಚಾರ ಇನ್ನಿಲ್ಲ!!!
