Belthangady: ಅಳಿಯನೊಬ್ಬ ಮಾವನಿಗೆ ಸ್ಕೂಟರ್‌ನಿಂದ ಡಿಕ್ಕಿ ಹೊಡೆಸಿ ಕೊಲೆಗೆ ಯತ್ನಿಸಿದ್ದಾನೆ ಎಂಬ ಆರೋಪವೊಂದು ವರದಿಯಾಗಿದೆ. ಬೆಳ್ತಂಗಡಿ( Belthangady) ತಾಲೂಕಿನ ಮಿತ್ತಬಾಗಿಲು ಗ್ರಾಮದ ಕಂಬಳದಡ್ಡ ಎಂಬಲ್ಲಿ ಈ ಘಟನೆ ನಡೆದಿದೆ. ಕೆ.ಎಚ್. ಇಬ್ರಾಹಿಂ (60) ಎಂಬವರೇ ಗಾಯಗೊಂಡ ವ್ಯಕ್ತಿ.
ಇಬ್ರಾಹಿಂ ಅವರ ಪುತ್ರಿಯ ಗಂಡ ಮಹಮ್ಮದ್ ಶಾಫಿ ಎಂಬಾತನೇ ಅಪಘಾತಗೊಳಿಸಲು ಯತ್ನಿಸಿದ ಆರೋಪ ಹೊತ್ತಿರುವ ವ್ಯಕ್ತಿ. ಇಬ್ರಾಹಿಂ ಅವರ ಮಗಳು ಮತ್ತು ಅಳಿಯನ ಮಧ್ಯೆ ಕೆಲವೊಂದು ಸಮಸ್ಯೆಗಳಿತ್ತು. ಅಳಿಯ ಖರ್ಚಿಗೆ ಹಣ ನೀಡುತ್ತಿಲ್ಲ, ಇದನ್ನು ಸರಿಪಡಿಸಲು ಮಾವ ಪ್ರಯತ್ನ ಪಡುತ್ತಿದ್ದರೆನ್ನಲಾಗಿದೆ. ಈ ದ್ವೇಷಕ್ಕೆ ಇಬ್ರಾಹಿಂ ಅವರು ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಮಹಮ್ಮದ್ ಶಾಫಿ ದ್ವಿಚಕ್ರ ವಾಹನದಿಂದ ಡಿಕ್ಕಿ ಹೊಡೆದು ಕೊಲೆಯಗೆ ಯತ್ನಿಸಿದ್ದಾರೆ ಎನ್ನಲಾಗಿದೆ.
ಇಬ್ರಾಹಿಂ ಅವರಿಗೆ ಈ ಘಟನೆಯಿಂದ ಗಂಭೀರ ಗಾಯವಾಗಿದ್ದು, ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಘಟನೆ ಬಗ್ಗೆ ಇಬ್ರಾಹಿಂ ಅವರ ಪುತ್ರ ಮುಹಮ್ಮದ್ ರಫೀಕ್ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.
ಇದನ್ನೂ ಓದಿ : ಪೊಲೀಸ್ ಇಲಾಖೆ ಉದ್ಯೋಗಾಂಕ್ಷಿಗಳಿಗೆ ಭರ್ಜರಿ ಗುಡ್‌ನ್ಯೂಸ್; ಬೆಳ್ಳಂಬೆಳಗ್ಗೆ ಸಚಿವರು ನೀಡಿದ್ರು ಸಿಹಿ ಸುದ್ದಿ!
