Home » Farmers: ಅನ್ನದಾತರಿಗೆ ಸಿಎಂ ಸಿದ್ದರಾಮಯ್ಯ ನೀಡಿದ್ರು ಬಿಗ್‌ ಗುಡ್‌ ನ್ಯೂಸ್‌!!!

Farmers: ಅನ್ನದಾತರಿಗೆ ಸಿಎಂ ಸಿದ್ದರಾಮಯ್ಯ ನೀಡಿದ್ರು ಬಿಗ್‌ ಗುಡ್‌ ನ್ಯೂಸ್‌!!!

by Mallika
1 comment
Farmers

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ರಾಜ್ಯದಲ್ಲಿ ಮಳೆಯ ಅಭಾವ ಉಂಟಾಗಿರುವುದರಿಂದ ರೈತರಿಗೆ 3 ಫೇಸ್‌ ವಿದ್ಯುತ್‌ ಅನ್ನು 5 ಗಂಟೆ ಕೊಡಲು ನಿರ್ಧಾರ ಮಾಡಿರುವುದಾಗಿ ಹೇಳಿದ್ದೆವು, ಆದರೆ ಈಗ ಐದು ಗಂಟೆ ವಿದ್ಯುತ್‌ ಸಾಕಾಗುತ್ತಿಲ್ಲ ಎಂಬ ದೂರು ಬರುತ್ತಿರುವ ಕಾರಣ ಪ್ರತಿನಿತ್ಯ ಏಳು ಗಂಟೆಯ ಕಾಲ ತ್ರಿಫೇಸ್‌ ವಿದ್ಯುತ್‌ ನೀಡಲಾಗುವುದು ಎಂದು ಹೇಳಿದ್ದಾರೆ. ಈ ಮೂಲಕ ರೈತರಿಗೆ ಗುಡ್‌ನ್ಯೂಸ್‌ ನೀಡಿದ್ದಾರೆ.

ಇಂಧನ ಇಲಾಖೆಯ ಜೊತೆ ಪರಿಶೀಲನೆ ಸಭೆ ನಡೆಸಿದ್ದು, ಏಳು ಗಂಟೆ ವಿದ್ಯುತ್‌ ಕೊಡ್ತೀವಿ ಎಂದು ಹೇಳಿದ್ದಾಗಿಯೂ, ಆದರೆ ನಾವು ಐದು ಗಂಟೆ ಕೊಡುತ್ತಿದ್ದೆವು, ಏಕೆಂದರೆ ಕೆಲವರು ರೈತರ ಪಂಪ್‌ಸೆಟ್‌ಗಳಿಂದ ಐದು ಗಂಟೆ ಸಾಕು ಎಂದು ಹೇಳಿದ್ದರು. ಈಗ ಐದು ಗಂಟೆ ಸಾಕಾಗಲ್ಲ ಎಂಬ ಬೇಡಿಕೆ ಬಂದಿತ್ತು. ಹಾಗಾಗಿ ಭತ್ತ ಬೆಳೆಯುವ ಪ್ರದೇಶ ಸೇರಿ ಕೆಲವು ಭಾಗಗಳಲ್ಲಿ 7 ಗಂಟೆ ತ್ರಿಫೇಸ್‌ ವಿದ್ಯುತ್‌ ಪೂರೈಕೆ ಮಾಡಲಾಗುತ್ತಿತ್ತು. ಆದರೆ, ಈಗ ರಾಜ್ಯದ ಎಲ್ಲಾ ಕಡೆ 7 ಗಂಟೆ ವಿದ್ಯುತ್‌ ಕೊಡಲು ಸೂಚಿಸಿದ್ದೇನೆ ಎಂದು ಹೇಳಿದರು.

You may also like

Leave a Comment