2
Diwali holiday: ದೀಪಾವಳಿ ರಜೆಗೆ ಸಂಬಂಧಿಸಿದಂತೆ ಸರಕಾರ ಇಂದು ಪ್ರಮುಖ ನಿರ್ಧಾರವೊಂದನ್ನು ತೆಗೆದುಕೊಂಡಿದ್ದು, ಈ ಕುರಿತಂತೆ ಆಂಧ್ರಪ್ರದೇಶದ ಸರಕಾರ ಈ ಹಿಂದೆ ಘೋಷಿಸಿದ್ದ ರಜೆಯನ್ನು ಬದಲಿಸಿದೆ. ಈ ಮೂಲಕ ಹೊಸ ಆದೇಶವೊಂದನ್ನು ನೀಡಿದೆ.
ನವೆಂಬರ್ 12 ರಂದು ದೀಪಾವಳಿ ರಜೆ (Diwali holiday) ಘೋಷಣೆ ಮಾಡಲಾಗಿತ್ತು. ಈಗ ನವೆಂಬರ್ 13ಕ್ಕೆ ವರ್ಗಾಯಿಸಿ ಆದೇಶ ಹೊರಡಿಸಿದೆ. ಸರಕಾರಿ ನೌಕರರು, ಸಂಸ್ಥೆಗಳು ಮತ್ತು ಖಾಸಗಿ ಸಂಸ್ಥೆಗಳು ಇದನ್ನು ಪಾಲಿಸಬೇಕೆಂದು, ನವೆಂಬರ್ 13ರಂದು ರಜೆ ಎಂದು ಸರಕಾರ ಆದೇಶಿಸಿದೆ ಎಂದು ವರದಿಯಾಗಿದೆ.
