Home » Gruhalakshmi Yojana: ಗೃಹಲಕ್ಷ್ಮೀ ಹಣ ಬಾರದವರಿಗೆ ಬೊಂಬಾಟ್ ಸುದ್ದಿ- ನಿಮ್ಮ ಕೈಸೇರೋದು 2,000 ಅಲ್ಲ ಬರೋಬ್ಬರಿ 6,000 !! ಆದ್ರೆ ಈ ಕೆಲಸ ಮಾಡಿದ್ರೆ ಮಾತ್ರ

Gruhalakshmi Yojana: ಗೃಹಲಕ್ಷ್ಮೀ ಹಣ ಬಾರದವರಿಗೆ ಬೊಂಬಾಟ್ ಸುದ್ದಿ- ನಿಮ್ಮ ಕೈಸೇರೋದು 2,000 ಅಲ್ಲ ಬರೋಬ್ಬರಿ 6,000 !! ಆದ್ರೆ ಈ ಕೆಲಸ ಮಾಡಿದ್ರೆ ಮಾತ್ರ

1 comment
Gruhalakshmi Yojana

Gruhalakshmi Yojana: ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗೃಹಲಕ್ಷ್ಮಿ ಯೋಜನೆಯ (Gruhalakshmi Scheme Money ) ಅಡಿಯಲ್ಲಿ ಕೆಲವು ಮಹಿಳೆಯರ ಖಾತೆಗೆ ಇನ್ನೂ 2000 ಹಣ ಜಮಾ ಆಗಿಲ್ಲ. ಆದರೆ ಹಣ ಬರದೇ ಇರುವ ಮಹಿಳೆಯರು ಇನ್ನು ಮುಂದೆ ಚಿಂತೆ ಮಾಡಬೇಕಾಗಿಲ್ಲ.

ಈಗಾಗಲೇ ಮೊದಲ ಕಂತಿನ ಹಣ 96 ಲಕ್ಷ ಜನರ ಖಾತೆ ಹಾಗೂ 2 ನೇ ಕಂತಿನ ಹಣ 63 ಲಕ್ಷ ಮಹಿಳೆಯರ ಖಾತೆಗೆ ವರ್ಗಾವಣೆ ಮಾಡಲಾಗಿದೆ. ಆದರೆ ಉಳಿದವರ ಖಾತೆಗೆ ಹಣ ಜಮಾ ಆಗಿಲ್ಲ. ಮುಖ್ಯವಾಗಿ ಹಣ ಜಮಾ ಮಾಡುವಲ್ಲಿ ಸರ್ಕಾರದಲ್ಲೂ ಸಮಸ್ಯೆ ಎದುರಾಗಿದ್ದು, ತಾಂತ್ರಿಕ ದೋಷಗಳಿಂದ ಮಹಿಳೆಯರ ಖಾತೆಯನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಇದಕ್ಕೆ ಪರಿಹಾರ ಕಂಡು ಕೊಂಡು ಮೂರು ಕಂತಿನ ಹಣ ಒಟ್ಟಿಗೆ ಹಾಕಲು ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ.

ಗೃಹಲಕ್ಷ್ಮಿ ಯೋಜನೆಗೆ ಅರ್ಹ ಇರುವವರಲ್ಲಿ ಯಾರು ಪೋಸ್ಟ್ ಆಫೀಸ್ ಖಾತೆ ಹೊಂದಿರುತ್ತಾರೋ ಅಂತಹವರಿಗೆ ಯಾವುದೇ ತೊಂದರೆ ಆಗದಂತೆ ಗೃಹಲಕ್ಷ್ಮಿ 2 ನೇ ಕಂತಿನ ಹಣ ಸಂದಾಯವಾಗಿದೆ. ಸದ್ಯ ಮಹಿಳೆಯರು ಪೋಸ್ಟ್ ಆಫೀಸ್ ನಲ್ಲಿ ಖಾತೆ ತೆರೆಯುವಂತೆ ಸಚಿವೆ ಲಕ್ಷ್ಮೀ ಹೆಬ್ಬಾಳ‌ ಸೂಚನೆ ನೀಡಿದ್ದು, ಇದುವರೆಗೆ ಯಾರಿಗೆ ಒಂದು ಕಂತಿನ ಹಣ ಕೂಡ ಜಮಾ ಆಗಿಲ್ಲ, ಅಂತಹವರಿಗೆ ನವೆಂಬರ್ 10 ರೊಳಗೆ ಮೂರು ಕಂತಿನ ಸಂದಾಯ ಮಾಡಲಾಗುತ್ತದೆ ಎನ್ನಲಾಗಿದೆ.

ಮುಖ್ಯವಾಗಿ ಗೃಹಲಕ್ಷ್ಮಿ ಯೋಜನೆ ಹಣ ಬರದೇ ಇರುವ ಮಹಿಳೆಯರೂ ತಪ್ಪದೇ ಈ ಕೆಲಸ ಮಾಡಿ.
ಮೊದಲು ಖಾತೆ ಹೊಂದಿರುವ ಬ್ಯಾಂಕ್ ಗೆ ಭೇಟಿ ಕೊಟ್ಟು ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ವಿವರಗಳನ್ನು ನೀಡಿ ಆಧಾರ್ ಜೋಡಣೆ ಮತ್ತು ಇಕೆವೈಸಿ ಅಪ್ಲೇಟ್ ಮಾಡಿಸಿಕೊಳ್ಳುವುದು. ಹಾಗೂ ಫಲಾನುಭವಿಗಳು ಆಧಾರ್ ಕಾರ್ಡ್, ಪಡಿತರ ಚೀಟಿಯನ್ವಯ ಹಾಗೂ ಉಳಿತಾಯ ಖಾತೆ ನಲ್ಲಿರುವ ಖಾತೆದಾರರ ಹೆಸರು ಹೊಂದಾಣಿಕೆ ಆಗುವಂತೆ ಇರಿಸುವುದು.

ಒಂದುವೇಳೆ ನಿಮ್ಮ ಖಾತೆಗೆ ಆಧಾರ್ ಸೀಡಿಂಗ್ ಆಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಿ. ಮುಖ್ಯವಾಗಿ ಬ್ಯಾಂಕಿನಲ್ಲಿ ನಿಮ್ಮ ಸಾಲ ಪಡೆದುಕೊಂಡ ಖಾತೆಯನ್ನು ಗೃಹಲಕ್ಷ್ಮಿ ಯೋಜನೆಗೂ ಕೊಟ್ಟಿದ್ದರೆ, ಗೃಹಲಕ್ಷ್ಮಿ ಯೋಜನೆ ಹಣ ನಿಮ್ಮ ಸಾಲಕ್ಕೆ ಜಮಾ ಆಗಲು ಬಹುದು. ಇನ್ನು ರೇಷನ್ ಕಾರ್ಡ್ ತಿದ್ದುಪಡಿ ಆಗಿದೆಯಾ ತಿಳಿದುಕೊಳ್ಳಿ. ಈ ಎಲ್ಲಾ ಹಂತವನ್ನು ನೀವು ಫಾಲೋ ಮಾಡಿದಲ್ಲಿ ಗೃಹಲಕ್ಷ್ಮಿ ಹಣ ಖಂಡಿತಾ ಅರ್ಜಿದಾರರ ಕೈ ಸೇರಲಿದೆ.

You may also like

Leave a Comment