Driving Licence : ಸವಾರರಿಗೆ ಅಥವಾ ಮಾಲಿಕರಿಗೆ ಡ್ರೈವಿಂಗ್ ಲೈಸೆನ್ಸ್(Driving Licence ಕಡ್ಡಾಯ ಎಂಬುದು ಎಲ್ಲರಿಗೂ ಗೊತ್ತಿದೆ. ಲೈಸೆನ್ಸ್ ಇಲ್ಲದೆ ವಾಹನ ಚಲಾಯಿಸುವುದು ದೊಡ್ಡ ಅಪರಾಧ. ಇದಕ್ಕೆ ಭಾರೀ ಮೊತ್ತದ ದಂಡವನ್ನು ಪೀಕಬೇಕಾದೀತು. ಹೀಗಾಗಿ ಲೈಸೆನ್ಸ್ ವಿಚಾರವಾಗಿ ಸಾರಿಗೆ ಇಲಾಖೆಯು ಆಗಾಗ ಹೊಸ ನಿಯಮಗಳನ್ನು ಜಾರಿಗೆ ತರುತ್ತಿರತ್ತದೆ. ಅಂತೆಯೇ ಇದೀಗ ಸರ್ಕಾರವು ವಾಹನ ಚಲಾವಣೆಯ ಪರವಾನಗಿ ಹೊಂದಿರುವವರಿಗೆ ಹೊಸ ನಿಯಮವನ್ನು ಜಾರಿಗೊಳಿಸಿದ್ದು ಲೈಸೆನ್ಸ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಅನ್ನು ಕಡ್ಡಾಯಗೊಳಿಸಿದೆ.
ಹೌದು, ಇತ್ತೀಚಿನ ದಿನಗಳಲ್ಲಿ ಆಧಾರ್ ಕಾರ್ಡ್ ಭಾರತೀಯ ಪ್ರಜೆಯ ಬಹುದೊಡ್ಡ ದಾಖಲೆಯಾಗಿದೆ. ಸರ್ಕಾರದ ಏನೇ ಸವಲತ್ತನ್ನು ಪಡೆಯುವುದಾದರೂ ಇದು ಬೇಕೇಬೇಕು. ಅದೂ ಅಲ್ಲದೆ ನಮ್ಮ ಬಳಿ ನಮ್ಮ ವೈಯಕ್ತಿಕ ಅನುಕೂಲಕ್ಕಿರುವ ದಾಖಲೆಗಳಾದ ಪಾನ್ ಕಾರ್ಡ್, ರೇಷನ್ ಕಾರ್ಡ್, ಬ್ಯಾಂಕ್ ಖಾತೆ ಎಲ್ಲದಕ್ಕೂ ಕಡ್ಡಾಯವಾಗಿ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಬೇಕೆಂದು ಸರ್ಕಾರ ಆದೇಶ ಹೊರಡಿಸಿದ್ದು, ಇದರ ಅವಧಿಯೂ ಕೂಡ ಮುಕ್ತಾಯವಾಗಿದೆ. ಇದೀಗ ಸರ್ಕಾರದಿಂದ ಇಂತದ್ದೇ ಮತ್ತೊಂದು ಆದೇಶ ಹೊರಬಿದ್ದಿದ್ದು ಡ್ರೈವಿಂಗ್ ಲೈಸೆನ್ಸ್ ಗೆ ಕಡ್ಡಾಯವಾಗಿ ಆಧಾರ್ ಕಾರ್ಡ್ ಲಿಂಕ್ ಮಾಡಬೇಕೆಂದು ತಿಳಿಸಿದೆ.
ಡ್ರೈವಿಂಗ್ ಲೈಸೆನ್ಸ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಹೇಗೆ?
1. ನೀವು ನಿಮ್ಮ ರಾಜ್ಯದ ಸಾರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
2. ನಂತರ ಹೋಮ್ ಸ್ಕ್ರೀನ್‌ನಲ್ಲಿ ಕಾಣುವ ‘ಲಿಂಕ್ ಆಧಾರ್’ ಆಯ್ಕೆಯನ್ನು ಕ್ಲಿಕ್ ಮಾಡಿರಿ
3. ನಂತರ, ನೀವು ಡ್ರಾಪ್-ಡೌನ್ ಮೆನುಗೆ ಹೋಗಿ ‘ಚಾಲನಾ ಪರವಾನಗಿ’ ಆಯ್ಕೆಯನ್ನು ಕ್ಲಿಕ್ ಮಾಡಬೇಕು.
4. ಇದರ ನಂತರ ಮುಂದಿನ ಹಂತದಲ್ಲಿ ನೀಡಿರುವ ಜಾಗದಲ್ಲಿ ನಿಮ್ಮ ಡ್ರೈವಿಂಗ್ ಲೈಸೆನ್ಸ್ ಸಂಖ್ಯೆಯನ್ನು ನೀವು ನಮೂದಿಸಿರಿ.
5. ನಂತರ ‘ಗೆಟ್ ಡಿಟೇಲ್ಸ್’ ಆಯ್ಕೆ ಮೇಲೆ ಕ್ಲಿಕ್ ಮಾಡಿ
6. ಇದಾದ ನಂತರ ನೀವು ನಿಮ್ಮ ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು.
7. ಬಳಿಕ ‘ಸಬ್ಮಿಟ್’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
8. ಈ ಪ್ರಕ್ರಿಯೆಗಳು ಮುಗಿದ ಬಳಿಕ ನಿಮ್ಮ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ (SMS) ಮೂಲಕ ಒಟಿಪಿ (OTP) ಬರುತ್ತದೆ.
9. ಇದೀಗ ಡ್ರೈವಿಂಗ್ ಲೈಸೆನ್ಸ್ ಜೊತೆಗೆ ಆಧಾರ್ ಲಿಂಕ್ ಮಾಡುವ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
ಇದನ್ನೂ ಓದಿ: KSRTC: ದೀಪಾವಳಿ ಹಬ್ಬಕ್ಕೆ KSRTCಯಿಂದ ನಾಡಿನ ಜನತೆಗೆ ಭರ್ಜರಿ ಗುಡ್ ನ್ಯೂಸ್ !!
