Home » Aadhaar card: ಆಧಾರ್ ಕಾರ್ಡ್ ನಲ್ಲಿ ನಿಮ್ಮ ಫೋಟೋ ಚೆನ್ನಾಗಿಲ್ವಾ ?! ಜಸ್ಟ್ ಹೀಗ್ ಮಾಡಿ ಕುಳಿತಲ್ಲೇ ಹೊಸ ಫೋಟೋ ಹಾಕಿ !!

Aadhaar card: ಆಧಾರ್ ಕಾರ್ಡ್ ನಲ್ಲಿ ನಿಮ್ಮ ಫೋಟೋ ಚೆನ್ನಾಗಿಲ್ವಾ ?! ಜಸ್ಟ್ ಹೀಗ್ ಮಾಡಿ ಕುಳಿತಲ್ಲೇ ಹೊಸ ಫೋಟೋ ಹಾಕಿ !!

1 comment
Aadhaar card photo change

Aadhaar card photo change: ಹೆಚ್ಚಿನವ ಆಧಾರ್ ಕಾರ್ಡ್(Aadhaar card) ನಲ್ಲಿ ಹೊಸದಾಗಿ ಮಾಡಿಸುವಂತ ಸಂದರ್ಭದಲ್ಲಿ ತೆಗೆಸಿದ ತಮ್ಮ ಚಿಕ್ಕ ವಯಸ್ಸಿನ ಫೋಟೋಗಳೇ ಇರುತ್ತವೆ. ಅದು ಕೂಡ ಹೇಗೇಗೋ ತೆಗೆದ ಫೋಟೋಗಳು. ಹೀಗಾಗಿ ಅನೇಕರು ತಮ್ಮ ಆಧಾರ್ ಅನ್ನು ಸಾರ್ವಜನಿಕವಾಗಿ ತೋರಿಸಲು ಮುಜುಗರ ಪಟ್ಪುಕೊಳ್ಳುತ್ತಾರೆ. ಆದರೆ ಇದೀಗ ಈ ಫೋಟೋ ಬದಲಿಸುವ( Aadhaar card photo change) ಹೊಸ ಆಪ್ಶನ್ ನೀಡಲಾಗಿದೆ.

ಹೌದು, ಆಧಾರ್ ಯೋಜನೆಯನ್ನು ಭಾರತದಲ್ಲಿ ಪ್ರಾರಂಭಿಸಿದಾಗಿಂದ ಅಂದರೆ ಸುಮಾರು 10-13 ವರ್ಷಗಳ ಹಿಂದೆ ಆಧಾರ್ ಕಾರ್ಡ್ ಮಾಡಿಸಿದಾಗಿಂದ ಅನೇಕರು ಅಪ್ಡೇಟ್ ಮಾಡಿರುವುದಿಲ್ಲ. ಮಾಡಿದ್ದರೂ ಕೇವಲ ಮಾಹಿತಿಗಳನ್ನು ಮಾತ್ರ ಮಾಡಿರುತ್ತಾರೆ. ಇದರಲ್ಲಿರುವ ತಮ್ಮ ಫೋಟೋ ನೋಡಿ ನೋಡಿ ಜನರಿಗೆ ಸುಸತ್ತಾಗಿ ಹೋಗಿರುತ್ತೆ. ಹೀಗಾಗಿ ಸರ್ಕಾರ ಇದೀಗ ಜನರಿಗೆ ಹೊಸ ಅವಕಾಶ ನೀಡಿದ್ದು ಕುಳಿತಲ್ಲೇ ಆಧಾರ್ ಕಾರ್ಡ್ ನಲ್ಲಿ ತಮ್ಮ ಫೋಟೋ ಬದಲಿಸಬಹುದು. ಹಳೇ ಫೋಟೋ ಬದಲಿಗೆ ತಮ್ಮ ಈಗಿನ ಫೋಟೋ ಹಾಕಬಹುದು. ಹೇಗೆ ಗೊತ್ತಾ? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್

ಆನ್ಲೈನ್ ನಲ್ಲಿ ಆಧಾರ್ ಕಾರ್ಡ್ ಫೋಟೋ ಅಪ್ಡೇಟ್ ಮಾಡುವುದು ಹೇಗೆ?
* ಅಧಿಕೃತ ಯುಐಡಿಎಐ ವೆಬ್ಸೈಟ್ (uidai.gov.in) ಗೆ ಭೇಟಿ ನೀಡಿ.
* ವೆಬ್ಸೈಟ್ನಿಂದ ಆಧಾರ್ ದಾಖಲಾತಿ ಫಾರ್ಮ್ ಅನ್ನು ಡೌನ್ಲೋಡ್ ಮಾಡಿ.
* ರಿಜಿಸ್ಟರ್ ಫಾರ್ಮ್ನಲ್ಲಿ ಅಗತ್ಯ ವಿವರಗಳನ್ನು ಭರ್ತಿ ಮಾಡಿ.
* ಹತ್ತಿರದ ಆಧಾರ್ ಸೇವಾ ಕೇಂದ್ರ ಅಥವಾ ಆಧಾರ್ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಿ.
* ಹತ್ತಿರದ ಆಧಾರ್ ಕೇಂದ್ರವನ್ನು ಗುರುತಿಸಲು ಈ ಲಿಂಕ್ (points.uidai.gov.in/) ಗೆ ಭೇಟಿ ನೀಡಿ.
* ಕೇಂದ್ರದಲ್ಲಿನ ಆಧಾರ್ ಕಾರ್ಯನಿರ್ವಾಹಕರು ಬಯೋಮೆಟ್ರಿಕ್ ದೃಢೀಕರಣದ ಮೂಲಕ ಎಲ್ಲಾ ವಿವರಗಳನ್ನು ಪರಿಶೀಲಿಸುತ್ತಾರೆ.
* ನಂತರ ಕಾರ್ಯನಿರ್ವಾಹಕರು ಆಧಾರ್ ಕಾರ್ಡ್ನಲ್ಲಿ ನವೀಕರಿಸಬೇಕಾದ ಹೊಸ ಫೋಟೋವನ್ನು ಕ್ಲಿಕ್ ಮಾಡುತ್ತಾರೆ.
* ಈ ಸೇವೆಗೆ, ರೂ. ಜಿಎಸ್ಟಿಯೊಂದಿಗೆ 100 ರೂ.ಗಳ ಶುಲ್ಕವನ್ನು ವಿಧಿಸಲಾಗುತ್ತದೆ.
* ನಿಮಗೆ ರಸೀದಿ ಸ್ಲಿಪ್ ನೀಡಲಾಗುತ್ತದೆ.

ಅಂದಹಾಗೆ ಆಧಾರ್ ಕಾರ್ಡ್ನಲ್ಲಿನ ಮಾಹಿತಿಯನ್ನು ನವೀಕರಿಸಲು ಗರಿಷ್ಠ 90 ದಿನಗಳು ಬೇಕಾಗಬಹುದು. ಸ್ಥಿತಿಯನ್ನು ಪರಿಶೀಲಿಸಲು ನೀವು URN ಸಂಖ್ಯೆಯನ್ನು ಬಳಸಬಹುದು. ಇನ್ನು ಈ ಫೋಟೋ ಬದಲಾವಣೆ ಅವಕಾಶ 15 ವರ್ಷ ಮೇಲ್ಪಟ್ಟವರಿಗೆ ಮಾತ್ರ. ಅದೂ ಅಲ್ಲದೆ ಈ ಫೋಟೋ ಬದಲಾವಣೆ ಜತೊಗೆ ಅದರಲ್ಲಿನ ಮಾಹಿತಿಗಳನ್ನೂ ಕೂಡ ಅಪ್ಡೇಟ್ ಮಾಡುವುದು ಕಡ್ಡಾಯವಾಗಿದೆ ಎಂದು ಸರ್ಕಾರ ತಿಳಿಸಿದೆ.

ಇದನ್ನೂ ಓದಿ: Gruhalakshmi scheme: ಯಜಮಾನಿಯರೆ ‘ಗೃಹಲಕ್ಷ್ಮೀ’ ಹಣ ಬಂದಿಲ್ಲ ಅಂದ್ರೆ ಈ ನಂಬರ್ ಗೆ ಕರೆ ಮಾಡಿ !!

You may also like

Leave a Comment