Home » Mangalya bhagya: ಇನ್ಮುಂದೆ ಮದುವೆಯಾಗೋರಿಗೆ ಸಿಹಿ ಸುದ್ದಿ- ಬರ್ತಿದೆ ನಿಮಗೂ ಈ ಎಲ್ಲಾ ಹೊಸ ‘ಭಾಗ್ಯ’ !!

Mangalya bhagya: ಇನ್ಮುಂದೆ ಮದುವೆಯಾಗೋರಿಗೆ ಸಿಹಿ ಸುದ್ದಿ- ಬರ್ತಿದೆ ನಿಮಗೂ ಈ ಎಲ್ಲಾ ಹೊಸ ‘ಭಾಗ್ಯ’ !!

2 comments
Mangalya bhagya

Mangalya bhagya: ರಾಜ್ಯ ಸರ್ಕಾರ ಮದುವೆಯಾಗುವವರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ. ರಾಜ್ಯದ ಬಡ ವರ್ಗದ ವಧು-ವರರ ಸರಳ ವಿವಾಹಕ್ಕೆ ಸನ್ನದ್ಧರಾಗಿರುವವರಿಗೆ ಅನ್ನಭಾಗ್ಯದ ರೀತಿಯಲ್ಲೇ ಮಾಂಗಲ್ಯ ಭಾಗ್ಯಕ್ಕೆ (Mangalya bhagya)ರಾಜ್ಯ ಸರ್ಕಾರ ಮುಂದಾಗಿದೆ.

ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಸಪ್ತಪದಿ ಸರಳ ಸಾಮೂಹಿಕ ವಿವಾಹ ಯೋಜನೆಯ ಹೆಸರನ್ನು ಕಾಂಗ್ರೆಸ್ ಸರ್ಕಾರ ಹೆಸರು ಬದಲಿಸಿ ಮಾಂಗಲ್ಯ ಭಾಗ್ಯ ಎಂದು ನಾಮಕರಣ ಮಾಡಿ ರಾಜ್ಯದ ಎಲ್ಲಾ ದೇವಾಲಯಗಳಲ್ಲೂ ಯೋಜನೆ ಜಾರಿಗೆ ತರಲು ಮುಜರಾಯಿ ಇಲಾಖೆ ಸುತ್ತೋಲೆ ಹೊರಡಿಸಿದೆ.ಮಾಂಗಲ್ಯ ಭಾಗ್ಯ ಯೋಜನೆಯಡಿ ವರನಿಗೆ ಅಂಗಿ, ಧೋತಿ ಹಾಗೂ 5,000 ರೂ. ನಗದು ಮತ್ತು 8 ಗ್ರಾಂ. ಚಿನ್ನದ ತಾಳಿ ಗುಂಡುಗಳನ್ನು ನೀಡಲಾಗುತ್ತದೆ.

ರಾಜ್ಯದ ಎಲ್ಲಾ ಎ, ಬಿ ಗ್ರೇಡ್ ದೇವಾಲಯಗಳಲ್ಲಿ ಯೋಜನೆ ಜಾರಿಗೆ ತರಲಾಗುತ್ತಿದೆ.2023 ರ ನವೆಂಬರ್, ಡಿಸೆಂಬರ್ ಮತ್ತು 2024 ರ ಜನವರಿಯಲ್ಲಿ ಸಾಮೂಹಿಕ ವಿವಾಹಕ್ಕಾಗಿ ವಧು-ವರರ ಹೆಸರು ನೋಂದಾಯಿಸಿಕೊಳ್ಳಲು ಸುತ್ತೋಲೆ ಹೊರಡಿಸಲಾಗಿದ್ದು, ನವೆಂಬರ್ ತಿಂಗಳಿನಲ್ಲಿ 16,19 ಮತ್ತು 29 ರಂದು ದಿನಾಂಕಗಳನ್ನು ನಿಗದಿ ಮಾಡಲಾಗಿದೆ. ಡಿಸೆಂಬರ್ 7, 10 ರಂದು, 2024 ರ ಜನವರಿ 28 ಮತ್ತು 31 ರಂದು ದಿನಾಂಕಗಳನ್ನು ನಿಗದಿ ಮಾಡಲಾಗಿದೆ.

ಇದನ್ನೂ ಓದಿ: Chaitra Fraud Case: ಚೈತ್ರಾ ಟಿಕೆಟ್ ಡೀಲ್ ಪ್ರಕರಣ- ಹಾಲಶ್ರೀ ಸ್ವಾಮಿಜಿಗೆ ಜಾಮೀನು !! ಕೊಡಿಸಿದ್ಯಾರು ಗೊತ್ತೇ ?!

You may also like

Leave a Comment