Home » Aadhaar Card Correction: ಬೆಳ್ಳಂಬೆಳಗ್ಗೆಯೇ ಆಧಾರ್ ಕಾರ್ಡ್ ಗೆ ಬಂತು ಹೊಸ ರೂಲ್ಸ್ – ಈ ಕೆಲಸಕ್ಕಿನ್ನು ಎರಡೇ ಬಾರಿ ಮಾತ್ರ ಅವಕಾಶ !!

Aadhaar Card Correction: ಬೆಳ್ಳಂಬೆಳಗ್ಗೆಯೇ ಆಧಾರ್ ಕಾರ್ಡ್ ಗೆ ಬಂತು ಹೊಸ ರೂಲ್ಸ್ – ಈ ಕೆಲಸಕ್ಕಿನ್ನು ಎರಡೇ ಬಾರಿ ಮಾತ್ರ ಅವಕಾಶ !!

2 comments
Aadhaar Card Correction

Aadhaar Card Correction: ಪ್ರತಿಯೊಬ್ಬ ವ್ಯಕ್ತಿಯ ವೈಯಕ್ತಿಕ ಮಾಹಿತಿಗಳು ಆತನ ಆಧಾರ ಕಾರ್ಡ್ ನಲ್ಲಿಯೇ ಅಡಕವಾಗಿವೆ ಎನ್ನಬಹುದು. ಆಧಾರ್ ಕಾರ್ಡ್ ಸರ್ಕಾರಿ ಸೇವೆಗಳಿಂದ ಹಿಡಿದು ಹಣಕಾಸಿನ ವಹಿವಾಟಿನವರೆಗೆ ಜೀವನದ ವಿವಿಧ ಅಂಶಗಳಲ್ಲಿ ಬಳಸಲಾಗುವ ಪ್ರಮುಖ ದಾಖಲೆಯಾಗಿದೆ.

ಇದೀಗ ಆಧಾರ್ ಕಾರ್ಡ್ ಅನ್ನು ನೀವು ಪಡೆದುಕೊಂಡು ಹತ್ತು ವರ್ಷಗಳು ಕಳೆದಿದ್ದರೆ ಅದರಲ್ಲಿ ಅಗತ್ಯ ಇರುವ ತಿದ್ದುಪಡಿ ಮಾಡಿಕೊಳ್ಳಬೇಕು ಎಂದು UIDAI ತಿಳಿಸಿದೆ. ಹಿಂದೆ ಆಧಾರ್ ಕಾರ್ಡ್ ನಲ್ಲಿ ಯಾವುದೇ ತಿದ್ದುಪಡಿ ಮಾಡಿಕೊಳ್ಳಬೇಕಿದ್ದರೂ ಆಧಾರ ಕಾರ್ಡ್ ಕೇಂದ್ರಕ್ಕೆ ಹೋಗಿ ತಿದ್ದುಪಡಿ (Aadhaar Card correction) ಮಾಡಿಕೊಳ್ಳಬೇಕಿತ್ತು. ಆದರೆ ಈಗ ಆನ್ ಲೈನ್ (online) ಮೂಲಕವೇ ಮಾಡಿಕೊಳ್ಳಬಹುದು, ನೀವು ಆಧಾರ್ ಕಾರ್ಡ್ ಪಡೆದುಕೊಂಡು ಹತ್ತು ವರ್ಷ ಕಳೆದಿದ್ದರೆ ಅದರಲ್ಲಿ ನಿಮ್ಮ ವಿಳಾಸ ಅಥವಾ ಫೋಟೋ ಬದಲಾಯಿಸುವ ಅಗತ್ಯವಿದ್ದರೆ ಆ ಬದಲಾವಣೆ ಮಾಡಿಕೊಳ್ಳಬಹುದು.
ಜೊತೆಗೆ ಆಧಾರ್ ಕಾರ್ಡನಲ್ಲಿ ಹೆಸರು, ವಿಳಾಸ, ನಿಮ್ಮ ಜನ್ಮ ದಿನಾಂಕ, ಲಿಂಗ ಬಯೋಮೆಟ್ರಿಕ್, ಫಿಂಗರ್ ಪ್ರಿಂಟ್ ಮುಂತಾದ ಬದಲಾವಣೆಗೆ ಅವಕಾಶ ನೀಡಲಾಗಿದೆ.

UIDAI ಆಧಾರ್ ಕಾರ್ಡ್ ನಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಬಹುದು. ಆದರೆ ಅದಕ್ಕೂ ಮಿತಿಯಿದೆ. ನೀವು ಎಷ್ಟು ಸಲ ಬೇಕಾದರೂ ಆಧಾರ್ ಕಾರ್ಡ್ ನಲ್ಲಿ ಬದಲಾವಣೆ ಮಾಡಲು ಸಾಧ್ಯವಿಲ್ಲ. ಮುಖ್ಯವಾಗಿ ಲಿಂಗ ಬದಲಾವಣೆಯನ್ನು ಒಂದು ಬಾರಿ ಮಾತ್ರ ಮಾಡಬಹುದು. ಜನ್ಮ ದಿನಾಂಕ ಮತ್ತು ಹೆಸರನ್ನು ಎರಡು ಬಾರಿ ಮಾತ್ರ ಬದಲಾಯಿಸಬಹುದು. ಅದೇ ರೀತಿ ಮೊಬೈಲ್ ಸಂಖ್ಯೆ (mobile number) ಬದಲಾವಣೆಗೆ ಯಾವುದೇ ಮಿತಿ ಇಲ್ಲ. ಹಾಗೂ ವಿಳಾಸ ಬದಲಾವಣೆಗೆ ಕೂಡ UIDAI ಯಾವ ಮಿತಿಯನ್ನು ತಿಳಿಸಿಲ್ಲ.

ಇದನ್ನು ಹೊರತುಪಡಿಸಿ ನೀವು ಹೆಚ್ಚು ಬಾರಿ ತಿದ್ದುಪಡಿ ಮಾಡಿಕೊಳ್ಳಬೇಕಿದ್ದರೆ ಅವುಗಳನ್ನು ಆನ್ ಲೈನ್ ನಲ್ಲಿ ತಿದ್ದುಪಡಿ ಮಾಡಲು ಸಾಧ್ಯವಿಲ್ಲ. ಹತ್ತಿರದ ಆಧಾರ ಕೇಂದ್ರಕ್ಕೆ ಹೋಗಿ ಸರಿಯಾದ ದಾಖಲೆ ನೀಡಿ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ.

ಇದನ್ನೂ ಓದಿ: ಪೋಸ್ಟ್ ಆಫೀಸಿನಲ್ಲಿ ಭರ್ಜರಿ 1,899 ಹುದ್ದೆಗಳ ಉದ್ಯೋಗವಕಾಶ !! SSLC ಪಾಸಾಗಿದ್ರೆ ಸಾಕು

You may also like

Leave a Comment