Home » Current Bill: ಜನಸಾಮಾನ್ಯರೇ ಈ ನಂಬರ್’ನ ಕರೆ ನಂಬಿ ಕರೆಂಟ್ ಬಿಲ್ ಕಟ್ಟಿದ್ದೀರಾ?! ನಿಮ್ಮ ಅಕೌಂಟ್ ಖಾಲಿ ಆದೀತು ಹುಷಾರ್ !!

Current Bill: ಜನಸಾಮಾನ್ಯರೇ ಈ ನಂಬರ್’ನ ಕರೆ ನಂಬಿ ಕರೆಂಟ್ ಬಿಲ್ ಕಟ್ಟಿದ್ದೀರಾ?! ನಿಮ್ಮ ಅಕೌಂಟ್ ಖಾಲಿ ಆದೀತು ಹುಷಾರ್ !!

1 comment

Current Bill: ಕೆಲವರು ಹಣದ ದಾಹಕ್ಕೆ ಏನು ಬೇಕಾದರು ಮಾಡುತ್ತಾರೆ. ಇದೀಗ ಸಾರ್ವಜನಿಕರಿಂದ ಹಣ ಪೀಕಲು ಹೊಸ ದಂಧೆ ಆರಂಭ ಆಗಿದೆ. ಇಂದಿನ ಕಾಲದಲ್ಲಿ ಎಲ್ಲಾ ಕೆಲಸಗಳನ್ನು ಆನ್ ಲೈನ್ ಮೂಲಕವೇ ಮಾಡಿ ಮುಗಿಸಿದರೆ, ಆಮೇಲೆ ನಿರಾಳ ಅಂದುಕೊಳ್ಳುತ್ತೀರಿ. ಆದರೆ ಮೊಬೈಲ್ ನಿಂದ ಎಷ್ಟು ಪ್ರಯೋಜನಗಳಿದಿವೆಯೋ ಅಷ್ಟೇ ಅನಾನುಕೂಲಗಳೂ ಇವೆ.

ಇದೀಗ ಸೈಬರ್ ವಂಚಕರು ಕರೆಂಟ್ ಬಿಲ್ ಹೆಸರಿನಲ್ಲಿ ಕರೆ ಮಾಡಿ ಮಾಹಿತಿ ಪಡೆದು ನಿಮ್ಮ ಬ್ಯಾಂಕ್ ಖಾತೆಯಲ್ಲಿನ ಹಣ ಖಾಲಿ ಮಾಡುತ್ತಿದ್ದಾರೆ. ವಿದ್ಯುತ್ ಬಿಲ್ (Current Bill) ಬಾಕಿ ಇದ್ದರೆ ಕರೆಂಟ್ ಡಿಸ್ಕನೆಕ್ಟ್ ಮಾಡ್ತೀವಿ ಎಂದು ಹೆದರಿಸಿ ಹಣ ದೋಚಿರುವ ಘಟನೆ ನಡೆದಿದೆ. ಹೌದು, ವಿದ್ಯುತ್ ಬಿಲ್ ಹೆಸರಲಿ ಜನರನ್ನು ವಂಚಿಸಿರುವ ಪ್ರಕರಣವೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ಬೆಂಗಳೂರಿನ ಜಯನಗರ ನಿವಾಸಿ ಕೇಶವ್ ಕುಮಾರ್ ಎಂಬುವರಿಗೆ ಕರೆ ಮಾಡಿದ ಸೈಬರ್ ವಂಚಕರು ನೀವು ವಿದ್ಯುತ್ ಬಿಲ್ ಕಟ್ಟಿಲ್ಲ. ಕರೆಂಟ್ ಕಟ್ ಮಾಡುತ್ತೇವೆ ಎಂದು ಮೆಸೇಜ್ ಬಂದಿದೆ. ಕರೆಂಟ್ ಕಟ್ ಆಗುತ್ತದೆ ಎನ್ನುವ ಭಯಕ್ಕೆ ಮೆಸೇಜ್‌ನಲ್ಲಿದ್ದ ನಂಬರ್ ಗೆ ಪೇಟಿಎಂ ಮಾಡಿದ ತಕ್ಷಣ ಫೋನ್ ಹ್ಯಾಕ್ ಮಾಡಿದ್ದಾರೆ. ನಂತರ ಪಾಸ್‌ವರ್ಡ್ ತಿಳಿದುಕೊಂಡು ಖಾತೆಯಿಂದ 15,000 ಹಣ ಕದ್ದಿದ್ದಾರೆ. ಜನರು ಇನ್ನಾದರೂ ಆನ್ ಲೈನ್ ವಹಿವಾಟಿನಲ್ಲಿ ಎಚ್ಚರವಹಿಸಬೇಕಾಗಿದೆ.

ಇದನ್ನೂ ಓದಿ: ಬೆಳ್ಳಂಬೆಳಗ್ಗೆಯೇ ಆಧಾರ್ ಕಾರ್ಡ್ ಗೆ ಬಂತು ಹೊಸ ರೂಲ್ಸ್ – ಈ ಕೆಲಸಕ್ಕಿನ್ನು ಎರಡೇ ಬಾರಿ ಮಾತ್ರ ಅವಕಾಶ !!

You may also like

Leave a Comment