One Rank, One Pension: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ 2014ರಲ್ಲಿ ಅಧಿಕಾರಕ್ಕೆ ಬಂದ ನಿವೃತ್ತ ಸೈನಿಕರಿಗೆ ಒನ್ ರ್ಯಾಂಕ್ ಒನ್ ಪೆನ್ಶನ್ (OROP) ಯೋಜನೆ ಘೋಷಿಸಿದೆ. ಒನ್ ರ್ಯಾಂಕ್ ಒನ್ ಪೆನ್ಶನ್ ಯೋಜನೆಯಡಿ(One Rank, One Pension) ಮೂರನೇ ಕಂತಿನ ಬಾಕಿಯನ್ನು ದೀಪಾವಳಿಯ (Deepvali Festival)ಮೊದಲೇ ಬಿಡುಗಡೆ ಮಾಡುವಂತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್( Rajnath Singh)ಗುರುವಾರ ರಕ್ಷಣಾ ಪಿಂಚಣಿದಾರರಿಗೆ ನಿರ್ದೇಶನ ನೀಡಿದ್ದಾರೆ.
ಕಳೆದ ವರ್ಷ ಡಿಸೆಂಬರ್ನಲ್ಲಿ ‘ಒನ್ ರ್ಯಾಂಕ್ ಒನ್ ಪೆನ್ಷನ್’ ಯೋಜನೆಯಡಿ ಸಶಸ್ತ್ರ ಪಡೆಗಳ ಸಿಬ್ಬಂದಿಯ ಪಿಂಚಣಿಯನ್ನ ಪರಿಷ್ಕರಿಸಲು ಸರ್ಕಾರ ಅನುಮೋದನೆ ನೀಡಿದೆ. ಬಾಕಿಯನ್ನು ನಾಲ್ಕು ಕಂತುಗಳಲ್ಲಿ ಪಾವತಿ ಮಾಡಬೇಕಾಗಿತ್ತು. ಈ ನಡುವೆ, ರಕ್ಷಣಾ ಸಚಿವರು ಪಿಂಚಣಿ ಪಡೆಯುವ ರಕ್ಷಣಾ ಪಿಂಚಣಿದಾರರಿಗೆ ಒಆರ್‌ಒಪಿ ಪಾವತಿಯ ಮೂರನೇ ಕಂತನ್ನು ಟಚ್ ಸಿಸ್ಟಮ್ ಮೂಲಕ ದೀಪಾವಳಿಯ ಮೊದಲು ಬಿಡುಗಡೆ ಮಾಡುವಂತೆ ರಕ್ಷಣಾ ಸಚಿವರು ಸಚಿವಾಲಯಕ್ಕೆ ನಿರ್ದೇಶನ ನೀಡಿದ್ದಾರೆ ಎಂದು ರಕ್ಷಣಾ ಸಚಿವರ ಕಚೇರಿ ಮಾಹಿತಿ ನೀಡಿದೆ. ಬ್ಯಾಂಕುಗಳು ಮತ್ತು ಇತರ ಏಜೆನ್ಸಿಗಳಿಗೆ ಕೂಡ ಪಿಂಚಣಿ ಪಡೆಯುವ ಎಲ್ಲಾ ರಕ್ಷಣಾ ಪಿಂಚಣಿದಾರರಿಗೆ ಇದೇ ರೀತಿ ಮಾಡಲು ನಿರ್ದೇಶನ ನೀಡಲಾಗಿದೆ.
ಇದನ್ನೂ ಓದಿ: Karnataka Rain: ಮುಂದಿನ 3 ದಿನ ಈ ಜಿಲ್ಲೆಗಳಲ್ಲಿ ಅಬ್ಬರಿಸಲಿದ್ದಾನೆ ಮಳೆರಾಯ – ಹೈ ಅಲರ್ಟ್ ಘೋಷಣೆ
