Home » Kitchen Tip: ಮಹಿಳೆಯರೇ ಅಡುಗೆ ಮಾಡುತ್ತಲೇ ಈ ಟ್ರಿಕ್ಸ್ ಬಳಸಿ – ಸುಲಭದಲ್ಲಿ ಮಾಡ್ಬೋದು ಲಕ್ಷ ಲಕ್ಷ ಉಳಿತಾಯ !!

Kitchen Tip: ಮಹಿಳೆಯರೇ ಅಡುಗೆ ಮಾಡುತ್ತಲೇ ಈ ಟ್ರಿಕ್ಸ್ ಬಳಸಿ – ಸುಲಭದಲ್ಲಿ ಮಾಡ್ಬೋದು ಲಕ್ಷ ಲಕ್ಷ ಉಳಿತಾಯ !!

1 comment
Kitchen Tip

Kitchen Tip: ಇತ್ತೀಚೆಗೆ ಅಡಿಗೆ ಮನೆ ಖರ್ಚಿನ ಜವಾಬ್ದಾರಿ ನಿಭಾಯಿಸಿಕೊಂಡು ಹೋಗೋದು ಸ್ವಲ್ಪ ಕಷ್ಟವೇ ಸರಿ. ಅಡಿಗೆ ಮನೆ ಖರ್ಚು ಕೆಲವೊಮ್ಮೆ ಲೆಕ್ಕಕ್ಕೆ ಸಿಗಲ್ಲ. ಆದರೆ ದಿನನಿತ್ಯ ನೀವು ಮಾಡುವ ಕೆಲಸದಲ್ಲಿ ಕೆಲವು (kitchen Tip) ಬದಲಾವಣೆಗಳನ್ನು ಮಾಡಿಕೊಂಡಲ್ಲಿ ನೀವು ವರ್ಷಕ್ಕೆ 2500 ರವರೆಗೆ ಉಳಿಸಬಹುದು.

ಹೌದು, ಕೆಲವರ ಮನೆಯಲ್ಲಿ ತಿಂಗಳಿಗೊಂದು ಸಿಲಿಂಡರ್ ಗ್ಯಾಸ್ ಬೇಕು. ಅಂದ್ರೆ 12 ತಿಂಗಳಿಗೆ 12 ಸಿಲಿಂಡರ್ ಖಾಲಿ. ಆದ್ರೆ ಕೆಲ ಸಣ್ಣಪುಟ್ಟ ಉಪಾಯಗಳಿಂದ ಒಂದು ತಿಂಗಳು ಬರುವ ಸಿಲಿಂಡರನ್ನು ಒಂದೂವರೆ ತಿಂಗಳವರೆಗೆ ಬರುವಂತೆ ಮಾಡಬಹುದು.

ಅದಕ್ಕಾಗಿ ಒಂದೊಂದು ಆಹಾರಕ್ಕೆ ಒಂದೊಂದು ಪ್ರಮಾಣದಲ್ಲಿ ನೀರು ಬೇಕು. ಕಡಿಮೆ ನೀರಿನಲ್ಲಿ ಬೇಯುವ ಆಹಾರಕ್ಕೆ ಕಡಿಮೆ ನೀರನ್ನು ಅವಶ್ಯವಾಗಿ ಹಾಕಿ. ಯಾಕೆಂದ್ರೆ ನೀರು ಎಕ್ಸ್ಟ್ರಾ ಗ್ಯಾಸನ್ನು ಹೀರುತ್ತದೆ.

ಆಹಾರ ಕುದಿಯಲು ಶುರುವಾಗುತ್ತಿದ್ದಂತೆ ಗ್ಯಾಸ್ ಒಲೆ ಉರಿಯನ್ನು ಕಡಿಮೆ ಮಾಡಿ. ಇದ್ರಿಂದ ಶೇಕಡಾ 25ರಷ್ಟು ಅಡುಗೆ ಅನಿಲವನ್ನು ಉಳಿಸಬಹುದಾಗಿದೆ.

ಆದಷ್ಟು ಸಣ್ಣ ಪಾತ್ರೆಗಳನ್ನು ಅಡುಗೆಗೆ ಹೆಚ್ಚಾಗಿ ಬಳಸಿ. ದೊಡ್ಡ ಪಾತ್ರೆಗಳಿಗಿಂತ ಸಣ್ಣ ಪಾತ್ರೆಗಳನ್ನು ಬಳಸಿದ್ರೆ ಶೇಕಡಾ 5-10 ರಷ್ಟು ಗ್ಯಾಸ್ ಉಳಿಸಬಹುದಾಗಿದೆ.

ಆಹಾರ ಬೇಯುವಾಗ ಮುಚ್ಚಳವನ್ನು ಮುಚ್ಚಿಡಿ. ಹೀಗೆ ಮಾಡಿದಲ್ಲಿ ಆಹಾರ ಬೇಗ ಬೇಯುವ ಜೊತೆಗೆ ಕಡಿಮೆ ಗ್ಯಾಸ್ ಸಾಕಾಗುತ್ತದೆ. ತರಕಾರಿಗಳನ್ನು ಸಣ್ಣಗೆ ಹೆಚ್ಚಿ ಬೇಯಲು ಇಟ್ಟಾಗ ತರಕಾರಿ ಬೇಗನೆ ಬೇಯಲು ಸಹಾಯ ಆಗುತ್ತದೆ.

ಹೆಚ್ಚಾಗಿ ಪ್ರೆಶರ್ ಕುಕ್ಕರ್ ಬಳಸಿ ಅನ್ನ ಮಾಡಿದ್ರೆ ನೀವು ಶೇಕಡಾ 20 ರಷ್ಟು ಗ್ಯಾಸ್ ಉಳಿಸಬಹುದು. ಬೇಳೆ, ತರಕಾರಿ ಬೇಯಿಸಲು ಕುಕ್ಕರ್ ಬಳಸಿದ್ರೆ ಶೇಕಡಾ 40ರಷ್ಟು ಗ್ಯಾಸ್ ಉಳಿತಾಯವಾಗಲಿದೆ.

 

ಇದನ್ನು ಓದಿ: Udupi: ಸಮುದ್ರದಾಳದಲ್ಲಿ ನಡೆಯಿತು ಅದೊಂದು ಪವಾಡ! ಈ ಮೀನುಗಾರ ಬದುಕಲು ಅದೊಂದೇ ಕಾರಣ!!!

You may also like

Leave a Comment