Nandini Milk Price: ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಸಾಮಾನ್ಯ ಜನತೆಗೆ ಇದೀಗ, ಮತ್ತೊಂದು ಶಾಕಿಂಗ್ ನ್ಯೂಸ್ ಹೊರ ಬಿದ್ದಿದೆ. ನಂದಿನಿ ಹಾಲಿನ ದರ (Nandini Milk Price)ಹೆಚ್ಚಿಸಲು ಹಾಲು ಒಕ್ಕೂಟಗಳು ಸರ್ಕಾರ ಮುಂದೆ ಪ್ರಸ್ತಾವನೆ ಸಲ್ಲಿಸಿದ್ದು, ಹೊಸ ವರ್ಷದ ಆರಂಭದಲ್ಲಿ ಹಾಲು-ಮೊಸರಿನ ಬೆಲೆ (Milk Price Hike)ಹೆಚ್ಚಳವಾಗುವ ಸಂಭವವಿದೆ ಎನ್ನಲಾಗಿದೆ.
ಕರ್ನಾಟಕದ ಜನಪ್ರಿಯ ಬ್ರಾಂಡ್ ಆಗಿರುವ ‘ನಂದಿನಿ’ (Nandini Milk)ಮತ್ತೆ ಹಾಲಿನ ಬೆಲೆ ಹೆಚ್ಚಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದು, ಕೆಎಂಎಫ್ (KMF) ಪರವಾಗಿ ಪಶು ಸಂಗೋಪನಾ ಇಲಾಖೆಯು(Animal Husbandry Department) ಈ ಪ್ರಸ್ತಾವವನ್ನು ಸರ್ಕಾರದ ಮುಂದಿಟ್ಟಿದೆ. ಪಶುಸಂಗೋಪನಾ ಇಲಾಖೆಯು, ‘ಪ್ರತಿ 6 ತಿಂಗಳಿಗೆ ಒಮ್ಮೆ ಶೇ 5ರಷ್ಟು ಗರಿಷ್ಠ ಮಾರಾಟ ದರ ಹೆಚ್ಚಳಕ್ಕೆ ಅನುವು ಮಾಡಿಕೊಡಬೇಕು’ ಎಂಬ ಪ್ರಸ್ತಾವವನ್ನು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದೆ.
ಹಾಲಿನ ದರವನ್ನು ಹೆಚ್ಚಿಸುವಂತೆ ಕೆಎಂಎಫ್ ಸದಸ್ಯರು, ರೈತರು ಮತ್ತು ಇತರ ಪಾಲುದಾರರಿಂದ ಒತ್ತಡವಿದೆ ಎಂದು ಪಶುಸಂಗೋಪನೆ ಸಚಿವ ವೆಂಕಟೇಶ್ ಅವರು ಮಾಹಿತಿ ನೀಡಿದ್ದಾರೆ. ಇದರ ಜೊತೆಗೆ ಹಾಲು ಒಕ್ಕೂಟಗಳು ತಮಗೆ ನಷ್ಟವಾಗುತ್ತಿರುವ ಕಾರಣ ದರ ಪರಿಷ್ಕರಿಸಬೇಕು ಎಂದು ಪ್ರಸ್ತಾವ ಸಲ್ಲಿಸಿದ್ದರು ಕೂಡ ಸದ್ಯದ ಪರಿಸ್ಥಿತಿಯಲ್ಲಿ ಹಾಲಿನ ದರ ಏರಿಸುವ ಪ್ರಸ್ತಾವ ಸರಕಾರದ ಮುಂದಿಲ್ಲ ಎಂದು ಹೇಳಿದ್ದಾರೆ.
ಇದನ್ನು ಓದಿ: Kitchen Tip: ಮಹಿಳೆಯರೇ ಅಡಿಗೆ ಮಾಡುತ್ತಲೇ ಈ ಟ್ರಿಕ್ಸ್ ಬಳಸಿ – ಸುಲಭದಲ್ಲಿ ಮಾಡ್ಬೋದು ಲಕ್ಷ ಲಕ್ಷ ಉಳಿತಾಯ !!
