Free gas cylinders on Holi: ಉತ್ತರ ಪ್ರದೇಶದ ಯೋಗಿ ಸರ್ಕಾರವು ರಾಜ್ಯದ ಮಹಿಳೆಯರಿಗೆ ದೀಪಾವಳಿ ಉಡುಗೊರೆಯನ್ನು(CM Yogi Adityanath announced to give free gas cylinders on Holi) ನೀಡಲಿದೆ. ಹೌದು !! ದೀಪಾವಳಿ ಹಬ್ಬದ ಸಂಭ್ರಮದ ನಡುವೆ ಉತ್ತರ ಪ್ರದೇಶದ ಯೋಗಿ ಸರ್ಕಾರ ಮತ್ತೊಂದು ಮಹತ್ವದ ಘೋಷಣೆ ಮಾಡಿದೆ.
ಯುಪಿ ಸಿಎಂ ಯೋಗಿ ಆದಿತ್ಯನಾಥ್ (CM Yogi Adityanath)ಧನ್ತೇರಸ್ ಸಂದರ್ಭದಲ್ಲಿ ಲಕ್ನೋದ ಲೋಕಭವನದಲ್ಲಿ ರಾಜ್ಯದ 1.75 ಕೋಟಿ ಅರ್ಹ ಕುಟುಂಬಗಳಿಗೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ (PMUY)ಉಚಿತ ಎಲ್ ಪಿ ಜಿ ಸಿಲಿಂಡರ್ (LPG Gas Cylinder)ಮರುಪೂರಣ ವಿತರಣಾ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ದೀಪಾವಳಿ ಮಾತ್ರವಲ್ಲದೆ ಹೋಳಿ ಹಬ್ಬದಂದು ಸಹ ಎಲ್ಲಾ ಅರ್ಹ ಮಹಿಳೆಯರಿಗೆ ಸರ್ಕಾರದಿಂದ ಗ್ಯಾಸ್ ಸಿಲಿಂಡರ್ ನೀಡಲಾಗುವ ಕುರಿತು ಸಿಎಂ ಯೋಗಿ ಆದಿತ್ಯನಾಥ್ ಮಾಹಿತಿ ನೀಡಿದ್ದಾರೆ.
ದೀಪಾವಳಿ ಮಾತ್ರವಲ್ಲದೆ ಮಾರ್ಚ್‌ನಲ್ಲಿ ಹೋಳಿ ಹಬ್ಬದಂದು ರಾಜ್ಯ ಸರ್ಕಾರ ಮತ್ತೊಮ್ಮೆ ಪ್ರತಿ ಮನೆಗೆ ಉಚಿತ ಗ್ಯಾಸ್ ಸಿಲಿಂಡರ್ ನೀಡಲಿದ್ದು, ಈ ಮೂಲಕ ಮಹಿಳೆಯರಿಗೆ ಹಬ್ಬದ ಸಂಭ್ರಮ ದುಪ್ಪಟ್ಟು ಮಾಡುವ ಶುಭ ಸುದ್ದಿ ಸಿಕ್ಕಿದೆ. ಸಿಎಂ ಯೋಗಿ ಅವರು ಮತ್ತೊಂದು ಮಹತ್ವದ ಮಾಹಿತಿ ನೀಡಿದ್ದು, ಈ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆಯನ್ನು ಆಧಾರ್’ನೊಂದಿಗೆ ಲಿಂಕ್(Aadhar Bank Link)ಮಾಡುವುದು ಕಡ್ಡಾಯ ಎಂದು ತಿಳಿಸಿದ್ದಾರೆ
ಇದನ್ನೂ ಓದಿ: Canara Bank: ಕೆನರಾ ಬ್ಯಾಂಕ್ ನಲ್ಲಿ ನೀವು ಖಾತೆ ಹೊಂದಿದ್ದೀರಾ ?! ದೀಪಾವಳಿ ಟೈಮಲ್ಲೇ ಕಾದಿದೆ ನಿಮಗೆ ಶಾಕಿಂಗ್ ನ್ಯೂಸ್
