Small Savings Scheme: ಸಣ್ಣ ಉಳಿತಾಯ ಯೋಜನೆ ನಿಯಮಗಳಲ್ಲಿ(Small Savings Scheme) ತಿದ್ದುಪಡಿ ಮಾಡಲಾಗಿದ್ದು, ಪ್ರಸಕ್ತ ವರ್ಷದ ತೃತೀಯ ತ್ರೈಮಾಸಿಕದಿಂದ ಅನ್ವಯವಾಗುವ ರೀತಿಯಲ್ಲಿ ಸಣ್ಣ ಉಳಿತಾಯ ಯೋಜನೆ ನಿಯಮಗಳಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ.
ಸಾರ್ವಜನಿಕ ಭವಿಷ್ಯ ನಿಧಿ ಯೋಜನೆಗೆ ತಿದ್ದುಪಡಿ ತರಲಾಗಿದ್ದು, ಸಾರ್ವಜನಿಕ ಭವಿಷ್ಯ ನಿಧಿ ತಿದ್ದುಪಡಿ ಯೋಜನೆ 2023 ಎಂದು ಹೆಸರಿಸಲಾಗಿದೆ. ಸಾರ್ವಜನಿಕ ಭವಿಷ್ಯ ನಿಧಿ, ಹಿರಿಯ ನಾಗರಿಕರ ಉಳಿತಾಯ ಯೋಜನೆಗಳಲ್ಲಿ(Savings Scheme)5 ವರ್ಷದ ರಾಷ್ಟ್ರೀಯ ಉಳಿತಾಯ ಪತ್ರಕ್ಕೆ(NSC) ಸಂಬಂಧಿಸಿದಂತೆ ತಿದ್ದುಪಡಿ ಮಾಡಲಾಗಿದೆ.ಈ ಬದಲಾವಣೆಯ ಅನುಸಾರ ಹಿರಿಯ ನಾಗರೀಕರ ಉಳಿತಾಯ ಯೋಜನೆಯನ್ನು(SCSS) ಪಿಂಚಣಿ ಜಾರಿ ಆದೇಶದ ದಿನಾಂಕದಿಂದ ಒಂದು ತಿಂಗಳ ಬದಲಾಗಿ ಮೂರು ತಿಂಗಳ ಒಳಗೆ ತೆರೆಯಲು ಅನುವು ಮಾಡಿಕೊಡಲಾಗಿದೆ. ಈ ಯೋಜನೆ ಮುಕ್ತಾಯವಾಗುವ ಹಂತದಲ್ಲಿ ಅನ್ವಯವಾಗುವ ಬಡ್ಡಿ ದರ ನೀಡಲಾಗುತ್ತದೆ. 5 ವರ್ಷಗಳ ರಾಷ್ಟ್ರೀಯ ಉಳಿತಾಯ ಪತ್ರದ ನಿಶ್ಚಿತ ಠೇವಣಿಯನ್ನು 4 ವರ್ಷಗಳ ಬಳಿಕ ಅವಧಿಗಿಂತ ಮೊದಲೇ ಹಿಂಪಡೆಯಲು ಬಯಸಿದರೆ 3 ವರ್ಷಗಳ ನಿಶ್ಚಿತ ಠೇವಣಿಗೆ ಬಡ್ಡಿ ದರ ಬದಲಾಗಿ ಅಂಚೆ ಕಚೇರಿ ಉಳಿತಾಯ ಖಾತೆಯ ಬಡ್ಡಿದರ ಮಾತ್ರ ನೀಡಲಾಗುತ್ತದೆ
