Snake pizza : ಪಿಜ್ಜಾ, ಬರ್ಗರ್ ಅಂದರೆ ಎಲ್ಲರಿಗೂ ಫೇವರಿಟ್ ತಿಂಡಿಯಾಗಿದೆ. ಅದರಲ್ಲೂ ಪಿಜ್ಜಾದಲ್ಲಿ ವೆಜ್-ನಾನ್‌ವೆಜ್ ಎರಡೂ ಲಭ್ಯವಿದ್ದು, ಹೋಟೆಲ್ ರೆಸ್ಟೋರೆಂಟ್, ಪಾಸ್ಟ್ ಫುಡ್ ಸ್ಟಾಲ್ನಲ್ಲಿ ಪಿಜ್ಜಾಕ್ಕೆ ಡಿಮ್ಯಾಂಡ್ ಅಂದ್ರೆ ಫುಲ್ ಡಿಮ್ಯಾಂಡ್. ವಿಶೇಷ ಅಂದ್ರೆ ( Interesting Fact) ನೀವು ಎಂದಾದರೂ ಸ್ನೇಕ್ ಪಿಜ್ಜಾ ಬಗ್ಗೆ ಕೇಳಿದ್ದೀರಾ? ಅಥವಾ ತಿಂದಿದ್ದೀರಾ? ಆದ್ರೆ ಹಾಂಗ್‌ಕಾಂಗ್ ದೇಶದಲ್ಲಿ ಇದು ಬಹಳ ಫೇಮಸ್ ಅಂತೆ. ಬನ್ನಿ ಏನಿದು ಸ್ನೇಕ್ ಪಿಜ್ಜಾ( Snake pizza ) ಅನ್ನೋದು ತಿಳಿಯೋಣ.
ಮೂಲತಃ ಅಮೆರಿಕದ ಪಿಜ್ಜಾ ಕಂಪನಿ ಪಿಜ್ಜಾ ಹಟ್, ತನ್ನ ಹಾಂಗ್ ಕಾಂಗ್ ಔಟ್‌ಲೆಟ್‌ನಲ್ಲಿ ಪಿಜ್ಜಾಕ್ಕೆ ಹಾವಿನ ಪರಿಮಳವನ್ನು ಸೇರಿಸ್ತಿದೆ. ಈ ಹೊಸ ರೀತಿಯ ಪಿಜ್ಜಾದಲ್ಲಿ ಕತ್ತರಿಸಿದ ಹಾವಿನ ಮಾಂಸ, ಕಪ್ಪು ಅಣಬೆಗಳು ಮತ್ತು ಡ್ರೈ ಚೈನೀಸ್ ಹ್ಯಾಮ್‌ನ ಕಾಂಬಿನೇಶನ್ ಇರುತ್ತದೆ ಎನ್ನಲಾಗಿದೆ.
ಇನ್ನು ಹಾಂಗ್‌ಕಾಂಗ್ ಮತ್ತು ದಕ್ಷಿಣ ಚೀನಾದ ಜನರಿಗೆ ಹಾವಿನ ಸೂಪ್ ಕೂಡ ಫೇವರಿಟ್. ಹಾವಿನ ಸೂಪ್ ಆರೋಗ್ಯಕ್ಕೆ ಬೆಸ್ಟ್ ಎನ್ನುತ್ತಾರೆ ಹಾಂಗ್‌ಕಾಂಗ್‌ನ ಜನರು. ತಂಪಾದ ಹವಾಮಾನದಲ್ಲಿ ಅವರು ಇದನ್ನು ಸೇವಿಸ್ತಾರೆ. ಸ್ನೇಕ್ ಸೂಪ್ ನಲ್ಲಿ ಹಲವು ವಿಧಗಳಿವೆ. ಅವೆಲ್ಲವೂ ಹಾವು ಇತರೆ ಮಾಂಸ ಮತ್ತು ಚೀನೀ ಗಿಡಮೂಲಿಕೆಗಳನ್ನು ಒಳಗೊಂಡಿರುತ್ತವೆ.
ಕೆಲವು ಹಾವಿನ ಸೂಪ್‌ಗಳಿಗೆ ಚಿಕನ್ ಅಥವಾ ಹಂದಿಮಾಂಸದಂತಹ ಇತರ ಮಾಂಸಗಳನ್ನು ಸಹ ಹಾಕಲಾಗುತ್ತದೆ. ಹಾವಿನ ಮಾಂಸವು ಚರ್ಮಕ್ಕೆ ಒಳ್ಳೆಯದಂತೆ. ಇನ್ನು ಆಗ್ನೇಯ ಏಷ್ಯಾದ ಇತರ ಭಾಗಗಳಾದ ವಿಯೆಟ್ನಾಂ ಮತ್ತು ಥೈಲ್ಯಾಂಡ್ನಲ್ಲಿ ಕೂಡ ಹಾವಿನ ಮಾಂಸವನ್ನು ತಿನ್ನುತ್ತಾರೆ. ಈ ಭಾಗದ ಜನರು ಆಹಾರಕ್ಕಾಗಿಯೇ ಅವರು ಹೊಲಗಳಲ್ಲಿ ಹಾವುಗಳನ್ನು ಸಾಕುತ್ತಾರೆ ಎನ್ನಲಾಗಿದೆ.
ಇದನ್ನೂ ಓದಿ: ಕರಿಬೇವನ್ನು ಹೀಗೆ ಸೆವಿಸಿದ್ರೆ ಕೆಲವೇ ದಿನಗಳಲ್ಲಿ ಸೊಂಟದ ಬೊಜ್ಜು ಮಾಯ !!
