ICL Recruitment: ಇಂದಿನ ಕಾಲದಲ್ಲಿ ನೆಚ್ಚಿನ ಉದ್ಯೋಗ ಪಡೆಯುವುದು ಸುಲಭದ ಮಾತಲ್ಲ. ನೀವೇನಾದರೂ 7 ನೇ ತರಗತಿ ಉತ್ತೀರ್ಣರಾಗಿದ್ದು, ಒಳ್ಳೆಯ ಉದ್ಯೋಗವನ್ನು(Job News)ಪಡೆಯಲು ಇಚ್ಛಿಸಿದರೆ, ನಿಮಗೆ ಸುವರ್ಣ ಅವಕಾಶವೊಂದು ಇಲ್ಲಿದೆ ನೋಡಿ!! ಈಸ್ಟರ್ನ್ ಕೋಲ್ ಫೀಲ್ಡ್ಸ್ ಲಿಮಿಟೆಡ್ (ICL )ಸೆಕ್ಯುರಿಟಿ ಗಾರ್ಡ್ ಹುದ್ದೆಗಳಿಗೆ(ICL Recruitment) ನೇಮಕಾತಿ ಮಾಡಲು ಇಸಿಎಲ್ ಅಧಿಸೂಚನೆಯನ್ನು ಹೊರಡಿಸಿದ್ದು, ಆಸಕ್ತರು ಕೊನೆಯ ದಿನದ ಮೊದಲೇ ಅರ್ಜಿ ಸಲ್ಲಿಸುವುದು ಉತ್ತಮ.
ಒಟ್ಟು ಹುದ್ದೆಗಳು – 244
ಸೆಕ್ಯುರಿಟಿ ಗಾರ್ಡ್ – 244 ಹುದ್ದೆಗಳು
ಅರ್ಹತಾ ಮಾನದಂಡಗಳು:
* ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಏಳನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
* ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ಉಲ್ಲೇಖಿಸಲಾದ ಕೆಲವು ದೈಹಿಕ ಮಾಪನ / ದೈಹಿಕ ಮಾನದಂಡ ಹಾಗೂ ವಿದ್ಯಾರ್ಹತೆಯನ್ನು ಹೊಂದಿರಬೇಕು.
* ಇಸಿಎಲ್ ನಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳು ಕೂಡ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಇಸಿಎಲ್ನ ಅಧಿಕೃತ ವೆಬ್ಸೈಟ್ eastercoal.nic.in ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಆಸಕ್ತ ಅಭ್ಯರ್ಥಿಗಳು ನವೆಂಬರ್ 23, 2023 ರೊಳಗೆ ಅರ್ಜಿ ಸಲ್ಲಿಸಬಹುದು.ಕಾರ್ಯನಿರ್ವಾಹಕೇತರ ಇಲಾಖಾ ನೌಕರರು (ಸಿಎಟಿ-1)ಈ ನೇಮಕಾತಿ ಪ್ರಕ್ರಿಯೆಯಲ್ಲಿ ಒಟ್ಟು 244 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಈ ಪೈಕಿ 190 ಮೀಸಲಾತಿ ರಹಿತ ವರ್ಗಕ್ಕೆ, 36 ಎಸ್ಸಿ ಮತ್ತು 18 ಎಸ್ಟಿಗಳಿಗೆ ಮೀಸಲಾಗಿವೆ.
ಇಸಿಎಲ್ ನೇಮಕಾತಿ 2023 ಗೆ ಅರ್ಜಿ ಸಲ್ಲಿಸುವುದು ಹೇಗೆ?
ಇಸಿಎಲ್ ನ ಅಧಿಕೃತ ವೆಬ್ಸೈಟ್ eastercoal.nic.in ಭೇಟಿ ನೀಡಬೇಕು.ಆ ಬಳಿಕ ಮುಖಪುಟದಲ್ಲಿರುವ ಪ್ರಕಟಣೆಗಳ ವಿಭಾಗಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಇದನ್ನೂ ಓದಿ:ಈ ಉಳಿತಾಯ ಯೋಜನೆಗಳಲ್ಲಿ ಮಹತ್ವದ ಬದಲಾವಣೆ ತಂದ ಸರ್ಕಾರ – ಈ ತಿಂಗಳಿಂದಲೇ ಜಾರಿ
